ಲಿಂಗಸೂಗೂರು: ಸೋಮವಾರ ನಡೆಯಲಿರುವ ಪುರಸಭೆ ಅಧ್ಯಕ್ಷ ಚುನಾವಣೆ ಇದೀಗ ಸಾಕಷ್ಟು ಕುತೂಹಲ ಕೆರಳಿಸಿದೆ ಅಧ್ಯಕ್ಷ ಸ್ಥಾನದ ಹಿನ್ನೆಲೆಯಲ್ಲಿ ರೆಸಾರ್ಟ್ ರಾಜಕೀಯ ಕೂಡಾ ಆರಂಭವಾಗಿದೆ.
ತಾಲೂಕಿನ ಮುದಗಲ್ ಪುರಸಭಯ ಅಧ್ಯಕ್ಷೀಯ ಚುನಾವಣೆ ಇದೇ ಸೋಮವಾರ ನಡೆಯಲಿದೆ.
ಮದಗಲ್ ಪುರಸಭೆ 23 ಸದಸ್ಯರನ್ನು ಒಳಗೊಂಡಿದೆ. ಅದರಲ್ಲಿ 14 ಕಾಂಗ್ರೆಸ್ ಸದಸ್ಯರು, 08 ಜೆಡಿಎಸ್, ಒಬ್ಬರು ಬಿಜೆಪಿ ಸದಸ್ಯರಿದ್ದಾರೆ. ಈಗಾಗಲೇ 15 ತಿಂಗಳುಗಳ ಕಾಲ ಕಾಂಗ್ರೆಸ್ನ ಸದಸ್ಯೆ ಅಮೀನಾಬೇಗಂ ಬಾರಿಗಿಡ ಅಧ್ಯಕ್ಷರಾಗಿ ಮಂದುವರೆದಿದ್ದರು.
ಕಳೆದರೆಡು ತಿಂಗಳುಗಳಿಂದ ಪುರಸಭೆ ಅಧ್ಯಕ್ಷ ಸ್ಥಾನ ಖಾಲಿ ಇದ್ದು, ಸೋಮವಾರ ಚುನಾವಣೆ ನಡೆಯಲಿದೆ. ಈ ಹಿನ್ನಲೆಯಲ್ಲಿ ಕಾಂಗ್ರೆಸ್ ಸದಸ್ಯರಲ್ಲೆ ನಾಲ್ಕು ಜನರು ಅಧ್ಯಕ್ಷೀಯ ಸ್ಥಾನಕ್ಕೆ ಪೈಪೋಟಿ ನಡೆಸಿದ್ದಾರೆ ಎನ್ನಲಾಗುತ್ತಿದೆ. ತೀವ್ರ ಪೈಪೊಟಿ ಏರ್ಪಟ್ಟಿರುವದರಿಂದ ರೆಸಾರ್ಟ್ ನತ್ತ ಕೆಲ ಕಾಂಗ್ರೆಸ್ ಸದಸ್ಯರು ಪಯಣ ಬೆಳೆಸಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಮಾತುಗಳು ಕೇಳಿ ಬರುತ್ತಿವೆ.