ಮುದ್ದೇಬಿಹಾಳ ನೂತನ ತಹಸೀಲ್ದಾರ್ ಕೀರ್ತಿ ಅಧಿಕಾರ ಸ್ವೀಕಾರ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ : ಪಟ್ಟಣದ ತಾಲ್ಲೂಕು ಆಡಳಿತ ಸೌಧದಲ್ಲಿ ನೂತನ ತಹಸೀಲ್ದಾರ್ ಕೀರ್ತಿ ಚಾಲಕ ಅವರು ಶುಕ್ರವಾರ ಅಧಿಕಾರ ವಹಿಸಿಕೊಂಡರು. ಮುಂಚೆ ತಾಳಿಕೋಟಿ ತಾಲ್ಲೂಕು ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ.
ನಿಡಗುಂದಿ ತಹಸೀಲ್ದಾರ್ ಎ. ಡಿ. ಅಮರವಾದಗಿ, ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ ಜೂಲಗುಡ್ಡ, ಕಂದಾಯ ನಿರೀಕ್ಷಕ ಡಿ ಎಸ್ ತಳವಾರ,
ಶ್ರೀನಿವಾಸ ಹುನಗುಂದ,ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ಮನೋಜ ರಾಠೋಡ, ಪದಾಧಿಕಾರಿಗಳಾದ ರಿಯಾಜ್ ನಾಲ್ನೋಡಿ,ಆರ್ ಎಸ್ ಹೊಸೂರ,ಎ ಎಸ್ ಬಾಬಾನಗರ ಸೇರಿದಂತೆ ಉಪಸ್ಥಿತರಿದ್ದರು.