ಮುದ್ದೇಬಿಹಾಳ ; ಮುದ್ದೇಬಿಹಾಳ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಚುನಾವಣೆ ತ್ವರಿತವಾಗಿ ನಡೆಸುವಂತೆ ಆಗ್ರಹಿಸಿ ತಹಶಿಲ್ದಾರ ಅವರಿಗೆ ಮನವಿ ಸಲ್ಲಿಸಲಾಗಿತ್ತು ಚುನಾವಣೆ ಪ್ರಕ್ರಿಯೆ ಮಾಡದ ಕಾರಣ ಅ29 ರಿಂದ ತಹಶಿಲ್ದಾರ ಕಚೇರಿ ಆವರಣದಲ್ಲಿ ಮುದ್ದೇಬಿಹಾಳ ಅಂಜುಮನ್ ಎ ಇಸ್ಲಾಂ ಕಮಿಟಿ ಚುನಾವಣೆ ವಿಳಂಬ ವಿರುದ್ಧ ಧರಣಿ ಸತ್ಯಾಗ್ರಹ ಆರಂಭಿಸಲಾಗಿತ್ತು .
ಸೆ 1 ರಂದು ಧರಣಿ ಸತ್ಯಾಗ್ರಹ ಸ್ಥಳಕ್ಕೆ ಆಗಮಿಸಿದ ಶಾಸಕ ಸಿ.ಎಸ್ ನಾಡಗೌಡ ಅಪ್ಪಾಜಿ ಹಾಗೂ ತಹಶಿಲ್ದಾರ ಕೀರ್ತಿ ಚಾಲಕ ಭೇಟಿ ನೀಡಿ ಹೋರಾಟಗಾರರಿಗೆ ಒಂದು ತಿಂಗಳೂಳಗೆ ಚುನಾವಣೆ ಮಾಡುವ ಭರವಸೆ ನೀಡಿದ ಹಿನ್ನೆಲೆ ಹೋರಾಟ ಹಿಂದಕ್ಕೆ ಪಡೆಯಲಾಯಿತು.
ಈ ವೇಳೆ ಕೆಎಸ್ಡಿ ನಿಗಮ ಅಧ್ಯಕ್ಷ ಸಿ.ಎಸ್ ನಾಡಗೌಡ ಅಪ್ಪಾಜಿ ಮಾತನಾಡಿ ವಸತಿ ಮತ್ತು ವಕ್ಪ ಅಲ್ಪಸಂಖ್ಯಾತರ ಕಲ್ಯಾಣ ಸಚಿವರೂಂದಿಗೆ ಮಾತನಾಡಿ ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಸಂಸ್ಥೆ ಚುನಾವಣೆ ಪ್ರಕ್ರಿಯೆ ಕುರಿತು ಮಾತನಾಡುವುದಾಗಿ ಹೇಳಿದರು.
ತಹಶಿಲ್ದಾರ ಕೀರ್ತಿ ಚಾಲಕ ಮಾತನಾಡಿ ವಿಜಯಪುರ ವಕ್ಪ ಅಲ್ಪಸಂಖ್ಯಾತರ ಅಧಿಕಾರಿ ಮುದ್ದೇಬಿಹಾಳ ಅಂಜುಮನ್ ಇಸ್ಲಾಂ ಕಮಿಟಿಯ ಆಡಳಿತ ಅಧಿಕಾರಿ ಚುನಾವಣೆ ಕುರಿತು ಒಂದು ತಿಂಗಳು ಕಾಲಾವಕಾಶ ಕೂರಿದ್ದಾರೆ ಒಂದು ತಿಂಗಳ ಒಳಗೆ ಚುನಾವಣೆ ನಡೆಸುವ ಬಗ್ಗೆ ಭರವಸೆಯನ್ನು ನೀಡಿದರು ಈ ಹಿನ್ನೆಲೆ ಧರಣಿ ನಿರತರು ಸತ್ಯಾಗ್ರಹ ಹಿಂದಕ್ಕೆ ಪಡೆದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ,ಕಾಂಗ್ರೆಸ್ ಪಕ್ಷದ ಮುಖಂಡ ಸಿ.ಬಿ ಅಸ್ಕಿ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹಾಗೂ ಇಸ್ಲಾಂ ಕಮಿಟಿಯ ಮಹೆಬೂಬ ಅತ್ತಾರ, ಜಬ್ಬಾರ ಗೋಲಂದಾಜ, ಅಲ್ಲಾಭಕ್ಷ ನಾಯ್ಕೋಡಿ, ಹುಸೇನಭಾಷಾ ಸಾಲಿಮನಿ, ಹುಸೇನ್ ಮುಲ್ಲಾ, ಮಹಮ್ಮದ ಇಸಾಕ ಮಕಾನದಾರ, ಇರ್ಫಾನ್ ಕೂಡಗಿ, ಯಾಸೀನ್ ಅತ್ತಾರ, ಸೂಫಿಯಾನ್ ಮೂಮೀನ್ ಮಲ್ಲಿಕ್ ನಧಾಪ, ಸುಲೇಮಾನ ಮಮದಾಪೂರ ಸೇರಿದಂತೆ ಉಪಸ್ಥಿತರಿದ್ದರು.