ಇಂಗಳಗೇರಿ ಗ್ರಾಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಕಾಶ ಮಾಲಗತ್ತಿ ಉಪಾಧ್ಯಕ್ಷರಾಗಿ ಶ್ರೀಮತಿ ಶೀಲವಂತಿ ಬಾಲಪ್ಪ ಮಾದರ ಆಯ್ಕೆ, ಚುನಾವಣೆ ಅಧಿಕಾರಿ ಘೋಷಣೆ.
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ; ಇಂಗಳಗೇರಿ ಗ್ರಾಪಂ ಎರಡನೇ ಅವಧಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಪ್ರಕಾಶ ಗುರುನಾಥಪ್ಪ ಮಾಲಗತ್ತಿ ಉಪಾಧ್ಯಕ್ಷರಾಗಿ ಶ್ರೀಮತಿ ಶೀಲವಂತಿ ಬಾಲಪ್ಪ ಮಾದರ ಆಯ್ಕೆಯಾಗಿದ್ದಾರೆಂದು ಚುನಾವಣಾ ಅಧಿಕಾರಿ ತಾಪಂ ಇಒ ವೆಂಕಟೇಶ ವಂದಾಲ ಘೋಷಣೆ ಮಾಡಿದರು ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಕಾಶ ಮಾಲಗತ್ತಿ ಹಾಗೂ ಫೀರಣ್ಣಿ ರಾಜಾಪಟೇಲ ತೆಳಗಿನಮನಿ ನಾಮಪತ್ರ ಸಲ್ಲಿಸಿದ್ದರು ಗೌಪ್ಯಮತದಾನದಲ್ಲಿ ಒಟ್ಟು 15 ಸದಸ್ಯರು ಪಾಲ್ಗೊಂಡು ಮತದಾನ ಮಾಡಿದ್ದರು ಫೀರಣ್ಣಿ ತೆಳಗಿನಮನಿ 7 ಮತಗಳನ್ನು ಪಡೆದರೆ ಪ್ರಕಾಶ ಮಾಲಗತ್ತಿ 8 ಮತಗಳನ್ನು ಪಡೆದು ಜಯಶಾಲಿಯಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದರು ಉಪಾಧ್ಯಕ್ಷ ಎಸ್ಸಿ ಮೀಸಲು ಸ್ಥಾನಕ್ಕೆ ಶೀಲವಂತಿ ಮಾದರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು .
ಎರಡನೇ ಅವಧಿಗೆ ಆಯ್ಕೆಯಾದ ನೂತನ ಅಧ್ಯಕ್ಷ ಪ್ರಕಾಶ ಮಾಲಗತ್ತಿ ಎಲ್ಲಾ ಸದಸ್ಯರ ಸಹಕಾರದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ಪಡೆದುಕೊಂಡು ಇಂಗಳಗೇರಿ ಗ್ರಾಪಂ ನಾಲ್ಕು ಗ್ರಾಮಗಳಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕಾರ್ಯ ಮಾಡುತ್ತೇನೆ ಗ್ರಾಪಂ ಕಟ್ಟಡಕ್ಕೆ ಜಾಗೆ ಇದ್ದು ಗ್ರಾಪಂ ನೂತನ ಕಟ್ಟಡ ಮಾಡುವುದಾಗಿ ತಿಳಿಸಿದರು.
ಸಹಾಯಕ ಚುನಾವಣಾ ಅಧಿಕಾರಿಯಾಗಿ ಎಸ್‌ಎಸ್ ಬಂಗಾರಗುಂಡ, ಪಿಡಿಒ ಮುಕ್ಕಣ್ಣ ನಾಯಕ, ಕಾರ್ಯದರ್ಶಿ ಗುರಡ್ಡಿ ಬಿರಾದಾರ ಕಾರ್ಯ ನಿರ್ವಹಿಸಿದರು
ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಿಗಿಬಂದೂಬಸ್ತ ಏರ್ಪಸಿಲಾಗಿತ್ತು ಪಿಎಸೈ ಜ್ಯೋತಿ ಖೋತ್ ಸ್ಥಳದಲ್ಲಿ ಇದ್ದರು.
ಇಂಗಳಗೇರಿ ಗ್ರಾಪಂ ಅಧ್ಯಕ್ಷ ಚುನಾವಣೆಯಲ್ಲಿ ಪರಾಭವಗೂಂಡ ಶ್ರೀಮತಿ ಫಿರಣ್ಣಿ ತೆಳಗಿನಮನಿ ಅವರ ಬೆಂಬಲಿಗರು ಚುನಾವಣಾ ಅಧಿಕಾರಿಯ ವಿರುದ್ಧ ಅಸಮಾಧಾನಗೂಂಡ ಕಾರಣ ಕೆಲಹೂತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು ತಾಪಂ ಇಒ ವೆಂಕಟೇಶ ವಂದಾಲ ಅಸಮಾಧಾನಗೂಂಡ ಜನರಿಗೆ ಗೌಪ್ಯಮತದಾನದಲ್ಲಿ ಓದಲು ಬಾರದ ಕಣ್ಣು ಸರಿಯಾಗಿ ಕಾಣದ ಒಟ್ಟು ಮೂರು ಜನರಿಗೆ ನಿಯಮಾನುಸಾರ ಸಹಾಯ ಮಾಡಿ ಅವರ ಹೇಳಿದ ಹೆಸರಿನ ಅಭ್ಯರ್ಥಿಗೆ ಮತದಾನ ಮಾಡಿದೆ ಇದರಲ್ಲಿ ಯಾವುದೇ ಕರ್ತವ್ಯ ಲೋಪವಾಗಿಲ್ಲವೆಂದು ಸ್ಪಷ್ಟಪಡಿಸಿದ ಬಳಿಕ ತೆರಳಿದರು