ಮುದ್ದೇಬಿಹಾಳ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1,133 ಪ್ರಕರಣಗಳ ಸೌಹಾರ್ದಯುತ ಇತ್ಯರ್ಥ
ಕಾನೂನು ಸಮರಕ್ಕೆ ರಾಜಿ ಸಂಧಾನದ ಮುಕ್ತಿ: ಮುದ್ದೇಬಿಹಾಳದಲ್ಲಿ ಯಶಸ್ವಿಯಾಗಿ ಜರುಗಿದ ಲೋಕ ಅದಾಲತ್
ಮುದ್ದೇಬಿಹಾಳ: ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 1100ಕ್ಕೂ ಹೆಚ್ಚು ಪ್ರಕರಣಗಳ ರಾಜಿ ಸಂಧಾನ
ಮುದ್ದೇಬಿಹಾಳ: ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ಪಟ್ಟಣದ ನ್ಯಾಯಾಲಯದ ಸಂಕೀರ್ಣದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 1133 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಯಶಸ್ವಿಯಾಗಿ ಇತ್ಯರ್ಥಪಡಿಸಲಾಯಿತು.
ಪ್ರಕರಣಗಳ ವಿವರ
ನ್ಯಾಯಾಲಯದಲ್ಲಿ ಬಾಕಿ ಇದ್ದ ಒಟ್ಟು 7110 ಪ್ರಕರಣಗಳ ಪೈಕಿ 1828 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು. ಇದರಲ್ಲಿ 839 ಪ್ರಕರಣಗಳು ಇತ್ಯರ್ಥಗೊಂಡವು. ಇದರಲ್ಲಿ
ಪ್ರಮುಖವಾಗಿ: ಅಪರಾಧ ಪ್ರಕರಣಗಳು, ಚೆಕ್ ಬೌನ್ಸ್ ಹಾಗೂ ಎಂವಿಸಿ ಪ್ರಕರಣಗಳು.
ಪಾಲು ವಾಟ್ನಿ ದಾವೆಗಳು, ಮೆಂಟೇನೆನ್ಸ್ ಹಾಗೂ ಎಲ್‌ಎಸಿ ಇಪಿ ಪ್ರಕರಣಗಳು. ಇದಲ್ಲದೆ, ಪೂರ್ವ ದಾವೆ (PLC) ಪ್ರಕರಣಗಳಾದ ಕಂದಾಯ ಇಲಾಖೆಯ ಅದಾಲತ್ ಪ್ರಕರಣಗಳು, ಬಿಎಸ್‌ಎನ್‌ಎಲ್ ಹಾಗೂ ಬ್ಯಾಂಕ್ ಸಾಲದ ಒಟ್ಟು 1002 ಪ್ರಕರಣಗಳಲ್ಲಿ 294 ಪ್ರಕರಣಗಳನ್ನು ಇತ್ಯರ್ಥಪಡಿಸಲಾಯಿತು.
ನ್ಯಾಯಾಧೀಶರ ಮಾರ್ಗದರ್ಶನ
ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀ ಸಚಿನ್ ಕೌಸಿಕ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ರವೀಂದ್ರಕುಮಾರ ಬಿ. ಕಟ್ಟಿಮನಿ ಹಾಗೂ ಸದಸ್ಯ ಕಾರ್ಯದರ್ಶಿ ಮತ್ತು ಸಿವಿಲ್ ನ್ಯಾಯಾಧೀಶರಾದ ಶ್ರೀ ರಾಮಮೂರ್ತಿ ಎನ್. ಅವರುಗಳು ರಾಜೀಸಂಧಾನ ನಡೆಸಿ ಪ್ರಕರಣಗಳನ್ನು ಇತ್ಯರ್ಥಗೊಳಿಸಿದರು.
ಸಂಧಾನಕಾರರಾಗಿ ವಕೀಲರಾದ ಆರ್. ವೈ. ನಾಲತವಾಡ, ಎಚ್. ಜಿ. ನಾಗೋಡ ಹಾಗೂ ಎಮ್. ಆರ್. ಮುಜಾವರ ಕಾರ್ಯನಿರ್ವಹಿಸಿದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ಶಿರಸ್ತೇದಾರರಾದ ವಾಯ್. ಎಮ್. ತಳವಾರ, ಜ್ಯೋತಿ ಹಕಾರಿ, ಸುರೇಶ ಬಳಗಾನೂರ, ಎಸ್. ಎಮ್. ಪೂಜಾರಿ ಉಪಸ್ಥಿತರಿದ್ದರು.
ನ್ಯಾಯಾಲಯದ ಸಿಬ್ಬಂದಿಗಳಾದ ಜ್ಯೋತಿ ಹೆಬ್ಬಾಳ, ನೀಲಮ್ಮ ಇಲಕಲ್ಲ, ಬಸವರಾಜ ಬೂದಿಹಾಳ, ಐ.ಆರ್. ಹಿರೇಮಠ, ಪ್ರಸನ್ನ, ಅನಸೂಯಾ ಕರಡಿ, ರಾಮಣ್ಣ ಕಮ್ಮಾರ ಸೇರಿದಂತೆ ಹಲವರು ಹಾಗೂ ಬ್ಯಾಂಕ್ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿಗಳಾದ ಅರ್ಜುನ್ ಚವಾಣ್ ಮತ್ತು ಚಪ್ಪರಬಂಧ ಅವರು ಪಾಲ್ಗೊಂಡಿದ್ದರು.
ವಕೀಲರಾದ ವಿ. ಎಮ್. ನಾಗಠಾಣ, ಜೆ. ಎ. ಚೀನಿವಾರ, ಎಸ್. ಆರ್. ಸಜ್ಜನ, ಎನ್. ಜಿ. ಕುಲಕರ್ಣಿ, ಎನ್. ಆರ್. ಮೋಕಾಶಿ, ಎಮ್. ಆರ್. ಪಾಟೀಲ ಸೇರಿದಂತೆ ಹಿರಿಯ ಹಾಗೂ ಕಿರಿಯ ನ್ಯಾಯವಾದಿಗಳು ಲೋಕ ಅದಾಲತ್‌ನ ಯಶಸ್ಸಿಗೆ ಸಹಕರಿಸಿದರು.