ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹರೀಶ ನಾಟಿಕಾರ ಅವರು ಗ್ರಾಮದೇವತೆ ಜಾತ್ರಾ ಕಮಿಟಿಯಿಂದ ೫ ಲಕ್ಷ್ಮ ರೂ ಬೇಡಿಕೆ ಇಟ್ಟಿದ್ದಾರೆಂದು ಸುಳ್ಳು ಆರೋಪ ಮಾಡಿದ್ದು ಇದನ್ನು ಸಾಬೀತು ಪಡಿಸಬೇಕೆಂದು ಆಗ್ರಹಿಸಿ ಪಟ್ಟಣದ ತಾಪಂ ಕಚೇರಿ ಆವರಣದಿಂದ ಪುರಸಭೆಯವರಗೆ ವಿವಿಧ ದಲಿತಪರ ಸಂಘಟನೆಗಳ ಒಕ್ಕೂಟದಿಂದ ಅದರ ಬೆತ್ತಲೆಯಾಗಿ ತಮಟೆ ಚಳುವಳಿ ಮಾಡಿದರು.
ಈ ವೇಳೆ ಮಾತನಾಡಿದ ದಲಿತ ಮುಖಂಡ ಹರೀಶ ನಾಟಿಕಾರ ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರು ನನ್ನ ವಿರುದ್ಧ ೫ ಲಕ್ಷ ರೂ ಬೇಡಿಕೆ ಸುಳ್ಳು ಆರೋಪ ಮಾಧ್ಯಮಗಳ ಮೂಲಕ ಮಾಡಿದ್ದು ಅದನ್ನು ಅವರು ಸಾಬೀತು ಪಡಿಸಬೇಕು ೩೫ ವರ್ಷಗಳ ಹೋರಾಟದ ನನ್ನ ಜೀವನದಲ್ಲಿ ನ್ಯಾಯಯುತ ಹೋರಾಟ ಮಾಡಿದ್ದೇನೆ ನಾನು ಹಣಕ್ಕೆ ಬೇಡಿಕೆ ಇಟ್ಟಿರುವುದಕ್ಕೆ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಸುಳ್ಳು ಅರೋಪದ ಮೂಲಕ ತೇಜೋವದೆ ಮಾಡಿದ ಗೊಳಸಂಗಿ ಪುರಸಭೆ ಅಧ್ಯಕ್ಷ ಸ್ಥಾನದಿಂದ ಕೆಳಗೆ ಇಳಿಯುವರಗೆ ನಿರಂತರ ಹೋರಾಟ ಮಾಡುತ್ತೇವೆ ,ಇಂದಿರಾ ನಗರದ ದಲಿತರ ಶೆಡ್ ತೆರವು ಮಾಡಿ ದೌರ್ಜನ್ಯ ಎಸಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ದಲಿತಪರ ಮುಖಂಡರಾದ ಪ್ರಕಾಶ ಚಲವಾದಿ ಸರೂರ, ಶಿವು ಕನ್ನೂಳ್ಳಿ, ನ್ಯಾಯವಾದಿ ಆನಂದ ಮುದೂರ, ಬಾಲಚಂದ್ರ ಹುಲ್ಲೂರ ಪರಶುರಾಮ ಬಸರಕೋಡ ಮಾತನಾಡಿ ದಲಿತ ಮುಖಂಡರು ೫ ಲಕ್ಷ ರೂ ಬೇಡಿಕೆ ಇಟ್ಟಿದ್ದಾರೆ ಎಂಬ ಸುಳ್ಳು ಆರೋಪ ದಲಿತಪರ ಸಂಘಟನೆಗಳ ಸ್ವಾಭಿಮಾನಕ್ಕೆ ದಕ್ಕೆಯಾಗಿದೆ ಮತ್ತು ಅಂಬೇಡ್ಕರ್ ಹೆಸರಿನಲ್ಲಿ ವಿವಿಧ ಸರಕಾರಿ ಇಲಾಖೆಗಳಿಂದ ಹಪ್ತಾವಸೂಲಿ ಮಾಡುತ್ತಾರೆ ಎಂಬ ಆರೋಪ ಪುರಸಭೆ ಅಧ್ಯಕ್ಷರು ಸಾಬೀತು ಪಡಿಸಬೇಕು ಈ ನಿರಾಧಾರ ಆರೋಪದಿಂದ ದಲಿತಸಂಘನೆಗಳಿಗೆ ಅವಮಾನವಾಗಿದೆ ಅವಮಾನವಾಗಿದೆ ಎಂದರು
ಮನವಿ ಪತ್ರವನ್ನು ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಅವರಿಗೆ ಸಲ್ಲಿಸಿದರು
ಈ ವೇಳೆ ಮಹಾಂತೇಶ ಬಾಗಲಕೋಟ, ಬಸವರಾಜ ಸರೂರ, ಪ್ರಶಾಂತ ಕಾಳೆ, ಬಸವರಾಜ ಚಲವಾದಿ, ಮುತ್ತು ಚಲವಾದಿ, ಪರಶುರಾಮ ನಾಲತವಾಡ, ಸಂಜಯ ಬಾಗೇಬಾಡಿ, ರೇವಣಸಿದ್ದಪ್ಪ ನಾಯಕ, ಆನಂದ ಹೂಸಮನಿ, ಸಿದ್ದು ಬಿದರಕುಂದಿ, ಬಲಬೀಮ ನಾಯಕಮಕ್ಕಳ,ಶರತ್ ಚೂಂಡಿ,ಶಂಕರ ಅಜಮನಿ, ಸಿದ್ದು ತಳ್ಳಳ್ಳಿ, ಅಮರೇಶ ಉಪ್ಪಲದಿನ್ನಿ, ಪುನಿತ ಹಿಪ್ಪರಗಿ ಸೇರಿದಂತೆ ಅನೇಕ ದಲಿತಪರ ಮುಖಂಡರು ಭಾಗವಹಿಸಿದ್ದರು.
ಬಾಕ್ಸ್; ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ಅವರ ಮೇಲೆ ಅನೇಕ ಪ್ರಕರಣಗಳು ದಾಖಲು ಇವೆ ನ್ಯಾಯಾಂಗ ನಿಂದನೆ ಕೇಸ್ ಸೇರಿದಂತೆ ಅನೇಕ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಹಾಗೂ ಪುರಸಭೆ ಪೌರ ಕಾರ್ಮಿಕರಿಗೆ ಜಾತಿನಿಂದನೆ ಕಿರುಕುಳ ನೀಡುತ್ತಿದ್ದಾರೆ ,ಇದು ಮೊದಲ ಹಂತದ ಹೋರಾಟವಾಗಿದ್ದು ಎರಡನೇ ಹಂತದ ಹೋರಾಟ ಉಗ್ರವಾಗಿರುತ್ತದೆ ಹರೀಶ ನಾಟಿಕಾರ ದಲಿತ ಮುಖಂಡ