ಶ್ರೀ ಗ್ರಾಮದೇವತೆ ಹಾಗೂ ಶ್ರೀ ಶಾರದಾ ದೇವಿಯರ ಭವ್ಯ ಮೆರವಣಿಗೆ, ಅದ್ದೂರಿ ಜಾತ್ರೆ ನಡೆಯಲಿದೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ ; ಪ್ರತಿ ಮೂರು ವರ್ಷಕ್ಕೊಮ್ಮೆ ನಡೆಯುವ ಮುದ್ದೇಬಿಹಾಳ ಪಟ್ಟಣದ ಗ್ರಾಮದೇವತೆ ಜಾತ್ರೆಗೆ ಸಕಲ ಸಿದ್ಧತೆಗಳನ್ನು ಜಾತ್ರಾ ಮಹೋತ್ಸವದ ವಿವಿಧ ಸಮಿತಿಗಳ ರಚನೆ ಮಾಡುವ ಮೂಲಕ ಮಾಡಲಾಗಿದೆ ಎಂದು ಜಾತ್ರಾ ಸಮಿತಿಯ ಮುಖಂಡ ಪ್ರಭುದೇವ ಕಲಬುರಗಿ ಹೇಳಿದರು ಪಟ್ಟಣದ ಹಳೆಯ ಪೂಲೀಸ್ ಕ್ವಾಟರ್ಸ್ ಆವರಣದಲ್ಲಿ ಜಾತ್ರಾ ಮಹೋತ್ಸವ ಸಮಿತಿಯಿಂದ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೇ 30 ರಿಂದ ಜೂ 3 ವರಗೆ ಐದು ದಿನಗಳು ಜಾತ್ರೆ ವೈಭವದಿಂದ ಜರುಗಲಿದೆ ಶುಕ್ರವಾರ ಪಟ್ಟಣದ ಹೊಸಮಠದ ಬಳಿಯ ಗುಂಡಪ್ಪನ ಬಾವಿಯಿಂದ ಗಂಗಾಸ್ನಾನದ ನಂತರ ಶ್ರೀ ಗ್ರಾಮದೇವತೆ ಹಾಗೂ ಶ್ರೀ ಶಾರದಾ ದೇವಿಯರ ಭವ್ಯ ಮೆರವಣಿಗೆ ಸಕಲ ಮಂಗಲವಾದ್ಯಗಳೂಂದಿಗೆ ಸರಾಫ ಬಜಾರ್ ,ಗ್ರಾಮದೇವತೆ ಕಟ್ಟೆಯ ಮಾರ್ಗ ಬಸವೇಶ್ವರ ವೃತ್ತ ಅಂಬೇಡ್ಕರ್ ವೃತ್ತದಿಂದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, ಶಾರದಾ ದೇವಿ ಮಂದಿರ ಮಾರ್ಗ ಶ್ರೀ ಲಕ್ಷ್ಮೀ ವೆಂಕಟೇಶ್ವರ ದೇವಾಲಯ ಮುಂಭಾಗದಿಂದ ಗ್ರಾಮದೇವತೆ ಕಟ್ಟೆಯವರಗೆ ಜರುಗಲಿದೆ ಎಂದು ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ, ಸತೀಶ್ ಓಸ್ವಾಲ್, ವೆಂಕನಗೌಡಪಾಟೀಲ್ , ಕಾಮರಾಜ ಬಿರಾದಾರ, ಉದಯಸಿಂಗ್ ರಾಯಚೂರು, ಎಸ್ ಎಸ್ ಮಾಲಗತ್ತಿ, ವೈ ಹೆಚ್ , ವಿಜಯಕರ,ಗಿರಿಜಾ ಕಡಿ, ಪುಂಡಲೀಕ ಮುರಾಳ ,ಹಣಮಂತ ಮೇಲಿನಮನಿ ಮಾತನಾಡಿ ಮುದ್ದೇಬಿಹಾಳ ಪಟ್ಟಣದ ಗ್ರಾಮದೇವತೆ ಜಾತ್ರೆ ಇದು ನಮ್ಮೂರ ಜಾತ್ರೆಯಾಗಿದೆ ಎಲ್ಲರೂ ಸೇರಿ ಭಾವೈಕ್ಯತೆಯಿಂದ ಆಚರಿಸೋಣ ಎಲ್ಲಾ ಸಮಿತಿಯ ಸದಸ್ಯರು ಕಳೆದ ಒಂದು ತಿಂಗಳಿಂದ ಜಾತ್ರೆಯ ಯಶಸ್ವಿ ಗೆ ಶ್ರಮಿಸಿದ್ದಾರೆ.
ಯಾವುದೇ ಲೋಪದೋಷಗಳಾಗದಂತೆ ಎಲ್ಲಾ ಸೇರಿ ಜಾತ್ರೆ ಮಾಡೋಣವೆಂದು ಜಾತ್ರೆ ಯಶಸ್ವಿಗೆ ಅಮೂಲ್ಯ ಸಲಹೆಗಳನ್ನು ನೀಡಿದರು.
ಪಟ್ಟಣದ ಬಸವೇಶ್ವರ ವೃತ್ತಕ್ಕೆ ಅಂಟಿಕೊಂಡು ಜಾತ್ರೆಯ ನಿಮಿತ್ತ ಕಟ್ಟಿದ ಜಾಹೀರಾತು ಬ್ಯಾನರ್ ಗಳನ್ನು ಸ್ವಯಂ ಪ್ರೇರಿತವಾಗಿ ತೆರವುಗೂಳಿಸಬೇಕು ಇಲ್ಲದಿದ್ರೆ ಪುರಸಭೆಯಿಂದ ತೆರವುಗೂಳಿಸಲಾಗುವುದು ಎಂದು ಪುರಸಭೆ ಅಧ್ಯಕ್ಷ ಮಹಿಬೂಬ ಗೊಳಸಂಗಿ ತಿಳಿಸಿದರು.
ಈ ವೇಳೆ ಅಶೋಕ ನಾಡಗೌಡ, ಸಂಗಮೇಶ ನಾವದಗಿ, ನಾಗಠಾಣ, ಸಿ ಪಿ ಸಜ್ಜನ,ಸುನಿಲ್ ಇಲ್ಲೂರ,ಮುತ್ತಣ್ಣ ಕಡಿ,ಬಾಬು ಬಿರಾದಾರ,ವಿರೇಶ ಪಾಟೀಲ, ನಾಗಭೂಷಣ ನಾವದಗಿ,ಸುರೇಶ್ ಪಾಟೀಲ, ಹಣಮಂತ ನಾಯಕ ಮಕ್ಕಳು,
ಶ್ರಿಕಾಂತ ಚಲವಾದಿ, ಸಿಂಕದರ್ ಜಾನ್ವೆಕರ,ಎನ್ ಎಸ್ ಶೆಟ್ಟರ,ಗುರುಲಿಂಗಪ್ಪ ಗೌಡ ಪಾಟೀಲ, ರಾಜೇಂದ್ರ ರಾಯಗೊಂಡ,ಸದು ಮಠ,ಶ್ರೀ ಶೈಲ್ ಪೂಜಾರಿ,ಸಂಗಪ್ಪ ಮೇಲಿನಮನಿ,ಮುತ್ತಣ್ಣ ನಾಯಕಮಕ್ಕಳು,ಸುರೇಶ್ ಕಲಾಲ,ಸಂತೋಷ ನಾಯ್ಕೋಡಿ, ಗೋಪಿ ಮಡಿವಾಳರ,
ಪರಶುರಾಮ ನಾಲತವಾಡ,ವಿಜಯ ಬಡಿಗೇರ, ಮಹಾಂತೇಶ ಬೂದಿಹಾಳಮಠ,ವಿಕ್ರಮ ಓಸ್ವಾಲ್,ಸದ್ದಾಂ ಕುಂಟೋಜಿ, ರಪೀಕ ಶಿರೋಳ,ಶ್ರೀ ಶೈಲ್ ಹುಗಾರ,ಗ್ರಾಮದೇವತೆ ಜಾತ್ರಾ ಮಹೋತ್ಸವದ ವಿವಿಧ ಸಮಿತಿಗಳ ಪದಾಧಿಕಾರಿಗಳು ಭಾಗವಹಿಸಿದ್ದರು.