ಮುದ್ದೇಬಿಹಾಳ| ರಂಜಾನ್ ಗೆ ಛಾಯಾಶ್ರೀ ಪ್ರಶಸ್ತಿ ಪ್ರಧಾನ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ತಾಲ್ಲೂಕಿನ ತಾರನಾಳ ಗ್ರಾಮದ ರಮಜಾನ್ ಅಲ್ಲಾಸಾ ನದಾಪ್ ಅವರಿಗೆ ಎಪ್ರಿಲ್ 12 ರಂದು ಬೆಂಗಳೂರಿನ ಶೇಷಾದ್ರಿಪೂರಂ ನಲ್ಲಿ ಕರ್ನಾಟಕ ಛಾಯಾಗ್ರಾಹಕರ ಸಂಘದಿಂದ ನಡೆದ 2025ರ ಡಿಜಿ ಇಮೇಜ್ ಕಾರ್ಯಕ್ರಮದಲ್ಲಿ ಪ್ರತಿ ತಾಲ್ಲೂಕಿಗೆ ಒಬ್ಬರಂತೆ ಆಯ್ಕೆಯಾಗಿದ್ದಾರೆ ರಮಜಾನ್ ಅವರಿಗೆ ಛಾಯಾಶ್ರೀ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು. ಮುದ್ದೇಬಿಹಾಳ ತಾಲ್ಲೂಕಿನ ಉತ್ತಮ ಛಾಯಾ ಚಿತ್ರಕಾರ ಪ್ರಶಸ್ತಿಗೆ ರಮಜಾನ್ ಅಲ್ಲಾಸಾ ನಧಾಪ್ (ರಾಜು ಢವಳಗಿ) ಅವರಿಗೆ ಛಾಯಾ ಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ರಮೇಶ ಚವ್ಹಾಣ, ಜಿಲ್ಲಾ ಅಧ್ಯಕ್ಷ, ಪ್ರಶಾಂತ ಪಟ್ಟಣಶೆಟ್ಟಿ ಜಿಲ್ಲಾ ಉಪಾಧ್ಯಕ್ಷ ಸತೀಶ ಕಲಾಲ, ಸುರೇಶ ರಾಠೋಡ, ರಾಜಸಿಂಗ್ ರಜಪೂತ,ಮಲ್ಲಿಕಾರ್ಜುನ ಪಾರ್ವತಿ,
ರಾಜೀವ ಕುಂಬಾರ, ಪ್ರವೀಣಕುಮಾರ ಅಂಗಡಿ, ಸೇರಿದಂತೆ ಭಾಗವಹಿಸಿದ್ದರು.