ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶರಣ ವೀರೇಶ್ವರ ದಂಪತಿಗಳ ೧೦೬ನೇ ಪುಣ್ಯಸ್ಮರಣೆ, ಶಿರಹಟ್ಟಿ ಬಾಳೆಹೊಸೂರಿನ ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಗಳಿಂದ ೨೧ ದಿನಗಳ ವಚನಾನುಭವ ಪ್ರವಚನದ ಸಂಪನ್ನ
ಮುದ್ದೇಬಿಹಾಳ : ಒಂದು ಕಾಲದಲ್ಲಿ ಸಹಿಸದ ಶರಣರು ಕರ್ನಾಟಕದಲ್ಲಿ ಜೋತಿರ್ಲಿಂಗವೇ ಇಲ್ಲದ ಕರ್ಮಗೇಡಿ ಕರ್ನಾಟಕ ಎಂದು ಗೇಲಿ ಮಾಡಿದ್ದು ಆದರೆ ಇಂದು ಇಡೀ ಕರ್ನಾಟಕವೇ ಜೋತಿರ್ಲಿಂಗವಾಗಿದೆ ಎಂದು ಎದೆ ತಟ್ಟಿ ಹೇಳಬೇಕು ಎಂದು ಶಿರಸಿ ಚಿಕ್ಕ ತೊಟ್ಟಲಕೇರಿ ಬಣ್ಣದಮಠದ ಶಿವಲಿಂಗ ಮಹಾಸ್ವಾಮೀಗಳು ಹೇಳಿದರು.
ತಾಲ್ಲೂಕಿನ ನಾಲತವಾಡ ಪಟ್ಟಣದ ವೀರೇಶ್ವರ ವಿದ್ಯಾ ಸಂಸ್ಥೆಯ ಆವರಣದಲ್ಲಿ ಶರಣ ವೀರೇಶ್ವರ ದಂಪತಿಗಳ ೧೦೬ನೇ ಪುಣ್ಯಸ್ಮರಣೆ ಹಾಗೂ ಶಿರಹಟ್ಟಿ ಬಾಳೆಹೊಸೂರಿನ ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಗಳಿಂದ ೨೧ ದಿನಗಳ ವಚನಾನುಭವ ಪ್ರವಚನದ ಸಂಪನ್ನ, ವೀರೇಶ್ವರ ಆಂಗ್ಲ ಮಾದ್ಯಮ ಶಾಲೆ ಮತ್ತು ವೀರೇಶ್ವರ ಸಹಕಾರಿ ಬ್ಯಾಂಕಿನ ೨೮ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾವೈಕ್ಯತಾ ಮಹಾಪೀಠ ಶಿರಹಟ್ಟಿಯ ಮಹಾರಾಜ ನಿರಂಜನ ಜಗದ್ಗುರು ಫಕೀರ ಸಿದ್ದರಾಮ ಮಹಾಸ್ವಾಮೀಗಳು, ಫಕೀರ್ ದಿಂಗಾಲೇಶ್ವರ ಮಹಾಸ್ವಾಮೀಗಳು, ಅಮರೇಶ್ವರ ಸುಕ್ಷೇತ್ರದ ದೇವರಭೂಪೂರಿನ ಅಮರೇಶ್ವರದ ಗುರು ಅಭಿನವ ಗಜದಂಡ ಶಿವಾಚಾರ್ಯರು, ಪಡೇಕನೂರಿನ ಮಲ್ಲಿಕಾರ್ಜುನ ಮಹಾಸ್ವಾಮೀಗಳು, ಮಸಬಿನಾಳದ ಸಿದ್ದರಾಮ ಮಹಾಸ್ವಾಮೀಗಳು, ಲೊಟಗೇರಿಯ ಡಾ.ಗುರುಮೂರ್ತಿ ಕಣಕಾಲಮಠ, ಕುಕನೂರಿನ ಚನ್ನಮಲ್ಲ ಮಹಾಸ್ವಾಮೀಗಳು, ಮಲಘಾಣದ ಜಡೆಯ ಶಾಂತಲಿAಗ ಶಿವಾಚಾರ್ಯರು ಮಾತನಾಡಿ ನಾಲತವಾಡದ ಶರಣರು ಮೌಲ್ಯಯುತ ಬದುಕು ಕಟ್ಟಿಕೊಂಡು ಮೌನ ಯೋಗಿಯಂತ ಸಮಾಜದಲ್ಲಿ ಬದುಕಿ ಬಾಳಿದವರು, ಶರಣರಿಗೆ ಸಾವಿಲ್ಲ ಇಹಲೋಕದ ಶರಣರು ಆಂತರಿಕವಾಗಿ ಜೀವಂತರಾಗಿರುತ್ತಾರೆ, ಡಿಜಿಟಲ್ ಯುಗದಲ್ಲಿ ಭಕ್ತಿಯೂ ಸಹ ಶಾರ್ಟ್ಕಟ್ ಮಟ್ಟ ತಲುಪಿದ್ದು ಅಪಾರ ಭಕ್ತಿ ಎಂಬುದೇ ಅಪರೂಪವಾಗಿದೆ, ನಮ್ಮ ಬದುಕು ಇಕ್ಕಟ್ಟಿಗೆ ಸಿಲುಕಿದೆ, ಸುಮಾರು ೨೧ ದಿನಗಳ ಕಾಲ ಪ್ರವಚನದ ಊಟ ಬಡಿಸಿದ ದಿಂಗಾಲೇಶ್ವರ ಶ್ರೀಗಳು ತಮ್ಮನ್ನು ಈ ಸಮಾಜದಲ್ಲಿ ಆಧ್ಯಾತ್ಮೀಕವಾಗಿ ಬದುಕುವಂತೆ ಪ್ರವಚನ ನೀಡಿದ್ದಾರೆ ಎಂದರು.
ಇದೇ ವೇಳೆ ಸ್ಥಳಿಯ ಅಂಜುಮನ್ ಸಂಸ್ಥೆಯ ವತಿಯಿಂದ ವೇದಿಕೆಯ ಶ್ರೀಗಳನ್ನು ಅಧ್ಯಕ್ಷರಾದ ಎಲ್.ಎಚ್.ಅವಟಿ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ವಿಜಯಪುರದ ಸ್ಪಾಟ್‌ಲೈಟ್ ಕಂಪನಿಯ ವೀರೇಶ ವಾಲಿ, ವೀರೇಶ ನವಲಿಹಾಗೂ ಹಿರೂ ನಾಯಕ ಅವರ ಭಾವ ಹಾಗೂ ಭಕ್ತಿ ಗೀತೆಗಳ ಸಂಗೀತ ಕಾರ್ಯಕ್ರಮ ನಡೆಯಿತು.
ಈ ವೇಳೆ ಸುಮಾರು ೨೧ ದಿನಗಳ ಪ್ರವಚನ ಸೇರಿ ಗ್ರಾಮದರ್ಶನ ಪ್ರವಚನದಲ್ಲಿ ಸೇವೆ ಸಲ್ಲಿಸಿದ್ದ ಲೊಟಗೇರಿಯ ಡಾ.ಗುರುಮೂರ್ತಿ ಕಣಕಾಲಮಠ ಅವರನ್ನು ಹಾಗೂ ಸಂಗೀತ ಸೇವೆ ನೀಡಿದ್ದ ಶವರುದ್ರಯ್ಯ ಶಾಸ್ತಿçಗಳು ಹಾಗೂ ತಬಲಾವಾದಕರನ್ನು ದಿಂಗಾಲೇಶ್ವರ ಶ್ರೀಗಳು ಹಾಗೂ ಸ್ಥಳಿಯ ಸಮೀತಿಯಡಿ ಸನ್ಮಾನಿಸಿ ಗೌರವಿಸಿದರು.
ಪಲ್ಲಕ್ಕಿ ಉತ್ಸವ: ಬೆಳಿಗ್ಗೆ ೮ಗಂಟೆಯಿಂದ ಶಶಧರ ಬಂಗಾರಿ ಹಾಗೂ ಸಂಗಮೇಶ ಮೇಟಿ ನೇತೃತ್ವದಲ್ಲಿ ಪಟ್ಟಣದ ನಾನಾ ಬೀದಿಗಳಲ್ಲಿ ಆಗಮಿಸಿದ್ದ ಕೊಣ್ಣೂರಿನ ಮಹಿಳಾ ಡೊಳ್ಳಿನ ಕುಣಿತ, ಸಿಂಧನೂರಿನ ಮಾರುತಿ ಯುವಕ ಸಂಘದ ಕೋಲಾಟ, ಶಿವಮೊಗ್ಗದ ನಂದಿ ಸಮ್ಮಾಳ ವಾದ್ಯ, ಗೊಂಬೆ ಕುಣಿತಗಳು ಗಮನ ಸೆಳೆದವು.
ಕಾರ್ಯಕ್ರಮದಲ್ಲಿ ಶಂಕರರಾವ್ ದೇಶಮುಖ, ಗುರುಪ್ರಸಾದ್ ದೇಶಮುಖ, ಎಂ.ಎಸ್.ಪಾಟೀಲ, ಮುತ್ತು ಅಂಗಡಿ, ಅಮರಪ್ಪ ಗಂಗನಗೌಡ್ರ, ಸೋಮನಗೌಡ ಪಾಟೀಲ ನಡಹಳ್ಳಿ, ಶರಣೆ ಸಾವಿತ್ರಿ ಶರಣಮ್ಮ, ಹುಣಶ್ಯಾಳ ಶ್ರೀ,ಸುರೇಶ ಹಿರೇಮಠ ಇದ್ದರು. ರಾಜು ಹಾದಿಮನಿ ಹಾಗೂ ಗುರುಮಾತೆ ಅಮ್ಮಾಜಿಗೋಳ ನಿರೂಪಿಸಿದರು.