• About Us
  • Contact Us
  • Privacy Policy
voice of janata
  • Home
  • ಸಂಪಾದಕೀಯ
  • ಸುದ್ದಿ
    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ನರೇಗಾ ಕೂಲಿಕಾರರಿಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಇಂಡಿ ಅರಣ್ಯ ಇಲಾಖೆಯಿಂದ ೫೩ ಸಾವಿರ ಸಸಿ ವಿತರಣೆ

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಹಿಂದೂಗಳ ಆರಾಧ್ಯ ದೈವವಾದ ಗೋಮಾತೆ..!

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಇಂಡಿ | ಬಿತ್ತನೆಗೆ ಮೊದಲು ಬೀಜೋಪಚಾರ ಅವಶ್ಯ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ಸಂರಕ್ಷಣೆ ನಾಗರಿಕರ ಜವಾಬ್ದಾರಿ : ಪ್ರಕಾಶ ವಡ್ಡರ

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಪರಿಸರ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ: ಪತ್ರಕರ್ತ ಫಿರೋಜ್ ರೋಜಿಂದಾರ್

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಸೈನಿಕ ಶಾಲೆ ಬಿಜಾಪುರದಲ್ಲಿ ವಿಶ್ವ ಪರಿಸರ ದಿನಾಚರಣೆ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ಇಂಡಿ | ಬಕ್ರೀದ ತ್ಯಾಗ ಬಲಿದಾನದ ಸಂಕೇತ

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ” ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ “

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    ಕೃಷಿ‌ಯಲ್ಲಿ ಹಸಿವಿದ್ದಾಗ ಒಕ್ಕಲುತನದಲ್ಲಿ ಪ್ರಗತಿ ಸಾಧ್ಯ

    Trending Tags

    • ಸ್ಥಳೀಯ
    • ರಾಜ್ಯ
    • ರಾಷ್ಟ್ರ
    • ಪ್ರಪಂಚ
    • ಕ್ರೈಮ್‌
    • ಇತರೆ
    No Result
    View All Result

      Home ರಾಜ್ಯ

      ಮುದ್ದೇಬಿಹಾಳ| ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ  ವಿಜಯೇಂದ್ರ ಭಾವಚಿತ್ರಕ್ಕೆ ಪಂಚಾಮೃತದ ಕ್ಷೀರಾಭಿಷೇಕ

      Voiceofjanata.in

      April 10, 2025
      0
      ಮುದ್ದೇಬಿಹಾಳ| ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ  ವಿಜಯೇಂದ್ರ ಭಾವಚಿತ್ರಕ್ಕೆ ಪಂಚಾಮೃತದ ಕ್ಷೀರಾಭಿಷೇಕ
      0
      SHARES
      98
      VIEWS
      Share on FacebookShare on TwitterShare on whatsappShare on telegramShare on Mail

      ಮುದ್ದೇಬಿಹಾಳ| ಮಾಜಿ ಸಿಎಂ ಯಡಿಯೂರಪ್ಪ, ರಾಜ್ಯಾಧ್ಯಕ್ಷ  ವಿಜಯೇಂದ್ರ ಭಾವಚಿತ್ರಕ್ಕೆ ಪಂಚಾಮೃತದ ಕ್ಷೀರಾಭಿಷೇಕ

      ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ

      ಮುದ್ದೇಬಿಹಾಳ: ಶಾಸಕ ಬಸನಗೌಡ ಯತ್ನಾಳ ಉಚ್ಛಾಟನೆ ವಿರೋಧಿಸಿ ನಡೆದ ಹೋರಾಟದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ  ಬಿ.ವೈ.ವಿಜಯೇಂದ್ರ, ರೈತ ಮೋರ್ಚಾ ರಾಜ್ಯಾಧ್ಯಕ್ಷ ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಭಾವಚಿತ್ರಗಳಿಗೆ ಅವಮಾನಿಸಿದ ಸ್ಥಳ ಬಸವೇಶ್ವರ ವೃತ್ತದಲ್ಲಿಯೇ ಬಿಜೆಪಿ, ನಡಹಳ್ಳಿ ಅಭಿಮಾನಿ ಬಳಗದ ಮುಖಂಡರು, ಕಾರ್ಯಕರ್ತರು ಗುರುವಾರ ಆ ಮೂವರ ಭಾವಚಿತ್ರಗಳಿಗೆ ಪಂಚಾಮೃತದ ಕ್ಷೀರಾಭಿಷೇಕ ನಡೆಸಿ ಶುದ್ಧೀಕರಣಗೊಳಿಸಿದರು.
      ನಂದಿನಿ ಪ್ಯಾಕೆಟ್ ಹಾಲಿನಲ್ಲಿ ಗೋಮೂತ್ರ, ಆಕಳ ಹಾಲು, ಮೊಸರು, ತುಪ್ಪ, ಸಕ್ಕರೆ, ಬಾಳೆಹಣ್ಣು ಮಿಶ್ರಗೊಳಿಸಿ ಹಿಂದು ಸಂಪ್ರದಾಯದ ಪ್ರಕಾರ ಫ್ಲೆಕ್ಸ್ ಮೇಲೆ ಜಗ್‌ನಿಂದ ಸುರಿದು ಅಭಿಮಾನ ಹೊರಹಾಕಿದರು. ಈ ವೇಳೆ ನೂರಾರು ಸಂಖ್ಯೆಯಲ್ಲಿದ್ದ ಮುಖಂಡರು, ಅಭಿಮಾನಿಗಳು ಯಡಿಯೂರಪ್ಪ, ವಿಜಯೇಂದ್ರ, ನಡಹಳ್ಳಿಯವರಿಗೆ ಜೈಕಾರ ಹಾಕಿ ೨೦೨೮ರಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸಲಿದ್ದು ವಿಜಯೇಂದ್ರರವರು ಮುಖ್ಯಮಂತ್ರಿಯಾಗಿ, ನಡಹಳ್ಳಿಯವರು ಕೃಷಿ ಸಚಿವರಾಗಿ ಅಧಿಕಾರ ಸ್ವೀಕರಿಸುವುದು ನಿಶ್ಚಿತ ಎನ್ನುವ ಘೋಷಣೆ ಮೊಳಗಿಸಿದರು.
      ಇದಕ್ಕೂ ಮುನ್ನ ನಡೆದ ಬಹಿರಂಗ ಸಭೆಯಲ್ಲಿ ಪಂಚಮಸಾಲಿ ಸಮಾಜದ ಮುಖಂಡ, ಬಿಜೆಪಿ ಧುರೀಣ ಮುತ್ತುಸಾಹುಕಾರ ಅಂಗಡಿ ಅವರು ಮಾತನಾಡಿ, ಯತ್ನಾಳ ಪರ ಹೋರಾಟದ ನೆಪದಲ್ಲಿ ನಮ್ಮ ನಾಯಕರಿಗೆ ಅವಮಾನ ಮಾಡಲಾಗಿದೆ. ನಾವು ಅವರಷ್ಟು ಕೀಳುಮಟ್ಟಕ್ಕಿಳಿಯೊಲ್ಲ. ಬೆಳಗಾವಿಯಲ್ಲಿ ಪಂಚಮಸಾಲಿಗಳ ಮೇಲೆ ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿಸಿದಾಗ ಕಾಂಗ್ರೆಸ್‌ನಲ್ಲಿರುವ ಪಂಚಮಸಾಲಿಗರು ಎಲ್ಲಿದ್ರಿ. ನಡಹಳ್ಳಿಯವರು ಜನರನ್ನು ಸಂಘಟಿಸಿ ಇದೇ ಬಸವೇಶ್ವರ ವೃತ್ತದಲ್ಲಿ ಪ್ರತಿಭಟಿಸಿ ಸಮಾಜದ ಸ್ವಾಮೀಜಿ, ಸಮಾಜದ ಪರ ನಿಂತರು. ಯತ್ನಾಳರನ್ನು ಹಾಳು ಮಾಡುವ ಕೆಲಸ ಮಾಡುತ್ತಿದ್ದೀರಿ. ಒಳ್ಳೇ ರೀತಿ ಹೋರಾಟ ಮಾಡಲು ಜನ ಸೇರಿಸಿ. ಯತ್ನಾಳರ ಬಗ್ಗೆ ಕಳಕಳಿ ಹುಟ್ಟುವಂತೆ ಮಾಡಿ ಎಂದು ಕಿಡಿಕಾರಿದರು.
      ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಗೌರಮ್ಮ ಹುನಗುಂದ ಮಾತನಾಡಿ, ಹೋರಾಟಕ್ಕೆ ಎಲ್ಲರಿಗೂ ಹಕ್ಕಿದೆ. ಆದರೆ ಹೋರಾಟದ ನೆಪದಲ್ಲಿ ನಡಹಳ್ಳಿ ಸೇರಿದಂತೆ ನಮ್ಮ ನಾಯಕರಿಗೆ ಕೆಟ್ಟ ಪದಗಳನ್ನು ಬಳಸಿರುವುದನ್ನು ಖಂಡಿಸುತ್ತೇವೆ. ಪಕ್ಷ ತಾಯಿ ಇದ್ದಂತೆ. ಆ ತಾಯಿಯನ್ನೇ ಮರೆಯುತ್ತಿದ್ದೀರಿ. ಬೆಳೆದ ಮೇಲೆ ತಾಯಿಯಂಥ ಪಕ್ಷ, ಪಕ್ಷದ ನಾಯಕರ ಬಿರುದ್ಧ ಮಾತನಾಡುವುದು ಸರಿಯಲ್ಲ. ನಡಹಳ್ಳಿ ಸಾಹೇಬರು ಸೇರಿದಂತೆ ಪಕ್ಷದ ನಾಯಕರಿಗೆ ಕೆಟ್ಟ ಪದ ಬಳಸಿದರೆ ಮಾತಾಡಿದರೆ ನಾವ್ಯಾರೂ ಸಹಿಸುವುದಿಲ್ಲ ಎಚ್ಚರದಿಂದಿರಿ ಎಂದು ಹರಿಹಾಯ್ದರು.
      ಪಂಚಮಸಾಲಿ ಸಮಾಜದ ಯುವ ಮುಖಂಡ, ಮೂಲ ಬಿಜೆಪಿ ಕಾರ್ಯಕರ್ತ ಸಿದ್ದರಾಜ ಹೊಳಿ ಅವರು ಮಾತನಾಡಿ, ನಮ್ಮ ನಾಯಕರ ಬಗ್ಗೆ ಕೆಟ್ಟದಾಗಿ ಮಾತಾಡಿದರೆ ನಿಮ್ಮ ನಾಲಿಗೆಗೆ ಹುಳ ಬೀಳುತ್ತೆ. ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರನ್ನು ಒಪ್ಪಿಕೊಂಡಿದ್ದೇವೆ. ಅವರ ವಿರುದ್ದ ಮಾತಾಡುವವರು ಅವರ ಕೂದಲ ಎಳೆಗೂ ಸಮನಾಗುವುದಿಲ್ಲ. ಜಾತ್ಯಾತೀತರು, ಎಲ್ಲ ಸಮಾಜದವನ್ನೂ ಜೊತೆಗೆ ಕರೆದೊಯ್ಯುತ್ತಿರುವ ನಮ್ಮ ನಾಯಕರ ವಿರುದ್ಧ ಅವಹೇಳನಕ್ಕೆ ಮುಂದಿನ ದಿನಗಳಲ್ಲಿ ಜನರೇ ತಕ್ಕ ಉತ್ತರ ಕೊಡುತ್ತಾರೆ ಎಂದರು.
      ಪಂಚಮಸಾಲಿ ಸಮಾಜದ ಹಿರಿಯ ಮುಖಂಡ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಪಾಟೀಲ ನಾಲತವಾಡ, ಮಲಕೇಂದ್ರಗೌಡ ಪಾಟೀಲ, ಪ್ರಭು ಕಡಿ, ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಸಂಗಮ್ಮ ದೇವರಳ್ಳಿ, ಗುರುನಾಥಗೌಡ ಬಿರಾದಾರ ಬಸರಕೋಡ ಅವರು ಮಾತನಾಡಿ ಪಕ್ಷದ ನಾಯಕರಿಗೆ ಬೆಂಬಲ ಸೂಚಿಸಿ ಭಾವಚಿತ್ರಗಳಿಗಾದ ಅವಮಾನಕರ ಘಟನೆಯನ್ನು ಖಂಡಿಸಿದರು.
      ಪಕ್ಷದ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ್, ಕಾರ್ಯದರ್ಶಿ ಸಂಜು ಬಾಗೇವಾಡಿ, ಮುಖಂಡರಾದ ಸೋಮನಗೌಡ ಬಿರಾದಾರ, ಸೋಮನಗೌಡ ಪಾಟೀಲ ನಡಹಳ್ಳಿ, ತಾಪಂ ಮಾಜಿ ಸದಸ್ಯರಾದ ಮಲ್ಲಿಕಾರ್ಜುನ ತಂಗಡಗಿ, ಪ್ರೇಮಸಿಂಗ್ ರಾಠೋಡ, ಪುರಸಭೆ ಸದಸ್ಯೆ ಸಹನಾ ಬಡಿಗೇರ, ಎಂ.ಆರ್.ಪಾಟೀಲ ವಕೀಲರು, ಸೋಮನಗೌಡ ಮೇಟಿ ಗುಡಿಹಾಳ, ಶಂಕರಗೌಡ ಶಿವಣಗಿ, ಲಕ್ಷ್ಮಣ  ಬಿಜ್ಜೂರ, ಬಸವರಾಜ ಗುಳಬಾಳ, ಶ್ರೀಶೈಲ ದೊಡಮನಿ, ಶ್ರೀಶೈಲ ಸೂಳಿಭಾವಿ, ರಮೇಶ ಢವಳಗಿ, ಸಂಗನಗೌಡ ಪಾಟೀಲ, ಶೇಖರ ಢವಳಗಿ, ನಿಖಿಲ್ ಸರೂರ, ಎಂ.ಬಿ.ಬಿರಾದಾರ ವಕೀಲರು, ಸಂಗಮೇಶ ಕರಭಂಟನಾಳ, ಪ್ರೇಮಸಿಂಗ್ ಚವ್ಹಾಣ, ಬಸವರಾಜ ಸರೂರ, ಚನಬಸ್ಸು ಚನ್ನಿಗಾವಿಶೆಟ್ರು, ಸಂಗಮೇಶ ಹತ್ತಿ, ರೇಖಾ ಕೊಂಡಗೂಳಿ, ಪ್ರೀತಿ ಕಂಬಾರ, ಕಾವೇರಿ ಕಂಬಾರ, ಅಶೋಕ ಚಿನಿವಾರ, ಹಣಮಂತ ನಲವಡೆ, ಸಂಗಮೇಶ ಗುಂಡಕನಾಳ ನಾಗೂರ, ಮುದಕಪ್ಪ ಗಂಗನಗೌಡರ, ರಾಜು ಪಾಟೀಲ ಬಳಬಟ್ಟಿ, ರಾಜಶೇಖರ ಹೊಳಿ, ರವಿ ಹವಾಲ್ದಾರ, ಸಿದ್ದು ಹಿರೇಮಠ, ಸಂಗಮೇಶ ಬಿಸಲದಿನ್ನಿ ಸುಭಾಷ್ ಕಾಳಗಿ, ಸೇರಿ ಹಲವಾರು ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
      ಪಕ್ಷಕ್ಕೆ ಯಾರೂ ಅನಿವಾರ್ಯರಲ್ಲ. ಉಚ್ಛಾಟನೆಗೊಂಡವರು ಆತ್ಮಾವಲೋಕನ ಮಾಡಿಕೊಂಡು ಸ್ವಭಾವ ತಿದ್ದಿಕೊಳ್ಳಬೇಕು. ಪಕ್ಷ ಒಡೆಯುವ ಕೆಲಸ ಬಿಟ್ಟು ಈಗಲಾದರೂ ಸುಧಾರಿಸಿಕೊಳ್ಳಬೇಕು. ವೈಯುಕ್ತಿಕ ವಿಚಾರವನ್ನು ಪಕ್ಷಕ್ಕೆ ಅಂಟಿಸಬಾರದು. ವೈಯುಕ್ತಿಕ ವಿಷಯಗಳಿಗಾಗಿ ಹೋರಾಟದ ದಾರಿ ತಪ್ಪಿಸಬಾರದು.

      –ಪ್ರಭು ಕಡಿ, ಬಿಜೆಪಿ ಹಿರಿಯ ಮುಖಂಡರು, ಮುದ್ದೇಬಿಹಾಳ.

      ಮುದ್ದೇಬಿಹಾಳ: ಬಸವೇಶ್ವರ ವೃತ್ತದಲ್ಲಿ ಬಿಜೆಪಿ, ನಡಹಳ್ಳಿ ಅಭಿಮಾನಿ ಬಳಗದವರು ಯಡಿಯೂರಪ್ಪ, ವಿಜಯೇಂದ್ರ, ನಡಹಳ್ಳಿ ಭಾವಚಿತ್ರಗಳಿಗೆ ಪಂಚಾಮೃತ ಕ್ಷೀರಾಭಿಷೇಕ ಮಾಡಿದರು.
      Tags: #indi / vijayapur#muddebhihal#Nadahalli#Public News#State News#Today News#Voice Of Janata#Voiceofjanata.in#Yaddiyurappa B S#ಮುದ್ದೇಬಿಹಾಳ| ಮಾಜಿ ಸಿಎಂ ಯಡಿಯೂರಪ್ಪBjpರಾಜ್ಯಾಧ್ಯಕ್ಷ  ವಿಜಯೇಂದ್ರ ಭಾವಚಿತ್ರಕ್ಕೆ ಪಂಚಾಮೃತದ ಕ್ಷೀರಾಭಿಷೇಕ
      voice of janata

      voice of janata

      • Trending
      • Comments
      • Latest
      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      ಇಂಡಿಯಲ್ಲಿ ಒರ್ವ ವಿಧ್ಯಾರ್ಥಿ ಎಮ್ ಪಿ ಸಿ, ಶಿಕ್ಷಕ ಅಮಾನತು..?

      March 25, 2024
      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      ಎಸ್ ಎಸ್ ಎಲ್ ಸಿ ಪರೀಕ್ಷೆ ಮಕ್ಕಳಿಗೆ ಗುಲಾಬಿ ಹೂ ನೀಡಿ ಸ್ವಾಗತಿಸಿದ ಅಧಿಕಾರಿಗಳು

      March 25, 2024
      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ

      July 26, 2025
      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      52ನೇ ದಿನಕ್ಕೆ ಕಾಲಿಟ್ಟ ರೈತರ ಹೋರಾಟ ಮಾಜಿ ಶಾಸಕಿ ಪರಿಮಳ ನಾಗಪ್ಪ ಬೆಂಬಲ

      0
      ಬಿಜೆಪಿ ಪ್ರಯಾಸದ ಗೆಲುವು

      ಬಿಜೆಪಿ ಪ್ರಯಾಸದ ಗೆಲುವು

      0
      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      ಟಿಯುಸಿಐ ಕಾರ್ಮಿಕರ ಹಕ್ಕೊತ್ತಾಯ ಸಮಾವೇಶ

      0
      ಯಶವಂತರಾಯಗೌಡರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

      ಯಶವಂತರಾಯಗೌಡರಿಗೆ ಮಂತ್ರಿ ಸ್ಥಾನ ನೀಡಲು ಆಗ್ರಹಿಸಿ ಪ್ರತಿಭಟನೆ

      June 8, 2026
      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ

      ಒಮ್ಮೆಯೂ ಸಚಿವ ಸ್ಥಾನ ಕಾಣದ ಇಂಡಿ ಮತಕ್ಷೇತ್ರ

      June 8, 2026
      ಅನುದಾನ ದುರುಪಯೋಗ ಆರೋಪ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು

      ಅನುದಾನ ದುರುಪಯೋಗ ಆರೋಪ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಮಾನತು

      June 8, 2026
      • About Us
      • Contact Us
      • Privacy Policy

      © 2026 VOJNews - Powered By Kalahamsa Infotech Private Limited.

      No Result
      View All Result
      • Home
      • ಸಂಪಾದಕೀಯ
      • ಸುದ್ದಿ
      • ಸ್ಥಳೀಯ
      • ರಾಜ್ಯ
      • ರಾಷ್ಟ್ರ
      • ಪ್ರಪಂಚ
      • ಇತರೆ

      © 2026 VOJNews - Powered By Kalahamsa Infotech Private Limited.