ಮುದ್ದೇಬಿಹಾಳ. ಪಟ್ಟಣದಲ್ಲಿ ತರಕಾರಿ ವ್ಯಾಪಾರಿಗಳು, ಗೂಡಂಗಡಿಗಳಿಂದ ಟೆಂಡರ್ ಪಡೆದ ವ್ಯಕ್ತಿಯು ನಿಯಮ ಮೀರಿ ದುಪ್ಪಟ್ಟು ಕರ ವಸೂಲಿ ಮಾಡುತ್ತಿದ್ದಾರೆ ಎನ್ನುವ ಬಲವಾದ ದೂರುಗಳು ಬಂದಿದ್ದು ಪುರಸಭೆ ಅಧಿಕಾರಿಗಳು ಹಾಗೂ ಆಡಳಿತ ಮಂಡಳಿ ಕುಲಂಕುಶವಾಗಿ ಚರ್ಚಿಸಿ ಕಡಿವಾಣ ಹಾಕಬೇಕು ಎಂದು ಒತ್ತಾಯಿಸಿ ಕೆಪಿಸಿಸಿ ಘಟಕದ ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳು ಪುರಸಭೆಗೆ ಮಂಗಳವಾರ ಮನವಿ ಸಲ್ಲಿಸಿದರು.
ಸಂಕಷ್ಟದಲ್ಲಿರುವ ರೈತ ಮಹಿಳೆಯರು ತರಕಾರಿ ಮಾರಾಟ ಮಾಡಿ ಜೀವಿಸಬೇಕಿದೆ, ಅತ್ತ ಬೆಲೆ ಇಳಿಕೆ ತೊಂದೆರೆಯಾಗುತ್ತದೆ, ಕರ ವಸೂಲಿ ಕುರಿತು ಕರೆಯಲಾದ ಟೆಂಡರ್ ವೇಳೆ ತಾವು ಇಂತಿಷ್ಟೇ ಎಂದು ಕರ ವಸೂಲಿ ಮಾಡಿ ಎಂದು ಗುತ್ತಿಗೆ ಪಡೆದವರಿಗೆ ಸೂಚಿಸಿದರೂ ದುಪ್ಪಟ್ಟು ಕರ ವಸೂಲಿ ದಂಧೆ ನಡೆದಿದೆ, ಈಗಾಗಿ ನಮ್ಮ ಸಂಘಟನೆಗೆ ದೂರುಗಳು ಬಂದ ಪರಿಣಾಮ ಅಧಿಕಾರಿಗಳು ಶೀಘ್ರವೇ ನಿಯಮಾನುಸಾರ ಕರ ವಸೂಲಿ ವ್ಯವಸ್ಥೆಗೆ ಮುಂದಾಗಬೇಕು ಒಂದು ವೇಳೆ ಇದೇ ಧೋರಣೆ ಮುಂದುವರೆದಲ್ಲಿ ಹೋರಾಟ ಮಾಡುವುದು ಅನಿವರ್ಯ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕಾಧ್ಯಕ್ಷ ಮೈಹಿಬೂಬ ಕುಳಗೇರಿ, ಒಕ್ಕೂಟದ ಅಧ್ಯಕ್ಷ ಬಾಬುಜಾನ್ ಮಮದಾಪೂರ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಂಗಮೇಶ ವಿಜಯಕರ್, ಯಾಸೀನ ಅತ್ತಾರ. ಸಂತೋಷ ಚವ್ವಾಣ, ಆಶೀಪ್ ನಿಡಗುಂದಿ, ಶರಣಪ್ಪ ಹೊಸಮನಿ, ರಹೇಮಾನ್ ಹಳ್ಳೂರ, ಬಂದಾನವಾಜ್ ಮಮದಾಪೂರ, ಅಬ್ದುಲರಜಾಕ ಕಲಾದಗಿ, ಮಂಜು ತಿಳಗೋಳ, ರಹಿಂ ಬಾಗವಾನ ಹಾಗೂ ಬಸಪ್ಪ ಮೇಲಿನಮನಿ ಸೇರಿದಂತೆ ಉಪಸ್ಥಿತರಿದ್ದರು.