ಮುದ್ದೇಬಿಹಾಳ;ಸಾಮಾಜಿಕ ಅಸಮಾನತೆ, ಜಾತಿ ವ್ಯವಸ್ಥೆ ಸೇರಿದಂತೆ ಹಲವು ಅನಿಷ್ಟ ಪದ್ಧತಿಗಳು ಆಚರಣೆಯಲ್ಲಿದ್ದ ಕಾಲದಲ್ಲಿ ವಚನಗಳ ಮೂಲಕ ಸಮಾಜದಲ್ಲಿ ಸುಧಾರಣೆ ತಂದ ವರು ಬಸವಣ್ಣನವರು. ಅವರ ತತ್ವ, ಆದರ್ಶ ಗಳು ಇಂದಿಗೂ ನಮಗೆ ಪಾಠ. ಈ ತತ್ವಜ್ಞಾ ನಿಯ ಜನ್ಮ ಜಯಂತಿ ಆಚರಿಸುವುದೇ ನಮ್ಮೇಲ್ಲರ ಸೌಭಾಗ್ಯ ಎಂದು ಶಾಸಕ ಹಾಗೂ ಕೆಎಸ್ಡಿಎಲ್ ಅಧ್ಯಕ್ಷ ಸಿ.ಎಸ್. ನಾಡಗೌಡ(ಅಪ್ಪಾಜಿ) ಹೇಳಿದರು.
ಇಲ್ಲಿನ ಬಸವೇಶ್ವರ ವೃತ್ತದಲ್ಲಿ ತಾಲೂಕಾಡಳಿತ ಹಾಗೂ ಲಿಂಗಾಯತ ವೀರಶೈವ ಸಮಾಜಗಳ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಅಕ್ಷಯ ತೃತೀಯಾ ಬಸವ ಜಯಂತ್ಯುತ್ಸವದಲ್ಲಿ ಜಗಜ್ಯೋತಿ ಅಶ್ವಾರೂಢ ಬಸವೇಶ್ವರರ ಪುತ್ಥಳಿಗೆ ಪೂಜೆ ಸಲ್ಲಿಸಿ ಮಾತನಾಡಿ, ಬಸವಣ್ಣನವರ ತತ್ವ, ಆದರ್ಶಗಳು, ಚಿಂತನೆ ಗಳು ಇಂದಿಗೂ ನಮಗೆಲ್ಲರಿಗೂ ಪಾಠವಾಗಿ ವೆ. ಅವರ ಆದರ್ಶಗುಣಗಳನ್ನು ನಾವೆಲ್ಲ ರೂಢಿಸಿಕೊಂಡಾಗ ಮಾತ್ರ ಅವರ ಜಯಂತಿ ಆಚರಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಸಿಪಿಐ ಮಹ್ಮದ ಫಸಿವುದ್ದಿನ, ಪಿಎಸೈ ಸಂಜಯಕುಮಾರ ತಿಪ್ಪಾರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ತಾಲೂಕಾ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಮುಖಂಡರಾದ ಸಂಗನಗೌಡ ಬಿರಾದಾರ(ಜಟಿಸಿ), ಸತೀಶ ಓಸ್ವಾಲ್, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ತಾಲೂಕಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗುರು ತಾರನಾಳ, ಗುರುಲಿಂಗಪ್ಪಗೌಡ ಪಾಟೀಲ, ಅಶೋಕ ನಾಡಗೌಡ, ಶ್ರೀಕಾಂತ ಚಲವಾದಿ, ಗೋಪಿ ಮಡಿವಾಳರ, ಪುರಸಭೆ ಉಪಾಧ್ಯಕ್ಷೆ ದೇಗಿನಾಳ, ಸದಸ್ಯೆಯರಾದ ಭಾರತಿ ಪಾಟೀಲ, ಸಹನಾ ಬಡಿಗೇರ,ಚನ್ನಪ್ಪ ಕಂಠಿ,ವಿರೇಶ ಹಡಲಗೇರಿ, ಉಮೇಶ ಜತ್ತಿ,ಮುತ್ತು ಕಡಿ, ಸಂಗಮೇಶ ಕಡಿ,ಸದು ಮಠ, ಗಣೇಶ ಅನ್ನಗೋನಿ, ಸಂಗಣ್ಣ ಮೇಲಿನಮನಿ,ಅಪ್ಪು ಸಿದ್ದಾಪುರ, ಶ್ರೀಕಾಂತ್ ಹಿರೇಮಠ, ರಾಚಯ್ಯ ಹಿರೇಮಠ, ಅಶೋಕ ಚೆಟ್ಟರ,ರಾವುಸಾಬ ದೇಸಾಯಿ,ರಾಜು ಬಳ್ಳೊಳ್ಳಿ, ಅರವಿಂದ ಲದ್ದಿಮಠ, ಪರಶುರಾಮ ನಾಲತವಾಡ,ಸೇರಿದಂತೆ ಉಪಸ್ಥಿತರಿದ್ದರು.