ಮುದ್ದೇಬಿಹಾಳ | ಆಕ್ಸಪರ್ಡ ಪಾಟಿಲ್ಸ್ ಆಂಗ್ಲ ಮಾದ್ಯಮ ವಿಧ್ಯಾರ್ಥಿಗಳ ಅಮೋಘ ಸಾಧನೆ ಶ್ಲಾಘನೀಯ..!
ವರದಿ ; ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ನಾಗರಬೆಟ್ಟ ಗುಡ್ಡದ ಹತ್ತಿರ ಇರುವ ಆಕ್ಸಫರ್ಡ ಪಾಟೀಲ್ಸ್ ಇಂಗ್ಲೀಷ್ ಮಾಧ್ಯಮ ಪ್ರೌಢಶಾಲೆ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯಮಟ್ಟದ ಸಾಧನೆ ಮಾಡಿದೆ.
ಇಂಗ್ಲೀಷ್ ಮಾಧ್ಯಮದಲ್ಲಿ ೨೨೪ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇವರಲ್ಲಿ ೨೨೧ ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ ಫಲಿತಾಂಶ ಶೇ.೯೯ರಷ್ಟಾಗಿದೆ. ೭೫ ವಿದ್ಯಾರ್ಥಿಗಳು ಶೇ.೯೫ಕ್ಕಿಂತ ಹೆಚ್ಚು, ೧೧೭ ವಿದ್ಯಾರ್ಥಿಗಳು ಶೇ.೯೦-೯೫ರೊಳಗೆ, ೨೯ ವಿದ್ಯಾರ್ಥಿಗಳು ಪ್ರಥಮ ದರ್ಜೆ ಪಡೆದುಕೊಂಡಿದ್ದಾರೆ. ಕನ್ನಡದಲ್ಲಿ ೫, ಇಂಗ್ಲೀಷಿನಲ್ಲಿ ೧೭, ಹಿಂದಿಯಲ್ಲಿ ೪೨, ಗಣ ತದಲ್ಲಿ ೨, ವಿಜ್ಞಾನದಲ್ಲಿ ೧೯, ಸಮಾಜವಿಜ್ಞಾನದಲ್ಲಿ ೪೫ ವಿದ್ಯಾರ್ಥಿಗಳು ಶೇ.೧೦೦ ಅಂಕ ಪಡೆದಿದ್ದಾರೆ. ಅಕೀಲಅಹ್ಮದ್ ನದಾಫ ೬೨೫ ಅಂಕದೊAದಿಗೆ ರಾಜ್ಯ, ಕಾಲೇಜಿಗೆ ಮೊದಲ ಸ್ಥಾನ, ಮಲ್ಲನಗೌಡ ಬಿರಾದಾರ ೬೨೩ ಅಂಕದೊAದಿಗೆ ರಾಜ್ಯಕ್ಕೆ ಮೂರನೇ, ಕಾಲೇಜಿಗೆ ಎರಡನೇ, ಪ್ರಾರ್ಥನಾ ಕುಲಕಣ ð ೬೨೨ ಕಾಲೇಜಿಗೆ ೩ನೇ ಸ್ಥಾನ ಗಳಿಸಿದ್ದಾರೆ. ಬಾಲಕೃಷ್ಣ ಹೆಳವರ ೬೨೧, ಶೇಜಲ್ ಮಾಳಿ, ಸಚಿನ್ ಸಜ್ಜನ ೬೨೦, ನಾಗರತ್ನ ಬಡದಾನಿ ೬೨೦, ಸುಹಾಸ ಪಾಟೀಲ ೬೧೯, ಸಂಜನಾ ಹಯ್ಯಾಳಕರ ೬೧೯, ಸಂತೋಷಕುಮಾರ ದಳವಾಯಿ ೬೧೯, ನಕ್ಷತ್ರ ತಳವಾರ ೬೧೮, ಜೀವನ್ ಹುಡೇದ ೬೧೮, ಸಂಜನಾ ಪಾಟೀಲ ೬೧೭, ಸಾತ್ವಿಕ್ ಗೌಡ ೬೧೭, ಸುಹಾನಾ ಚಟ್ನಳ್ಳಿ ೬೧೬, ಭಾಗ್ಯಲಕ್ಷಿö್ಮÃ ಕಡಪಟ್ಟಿ ೬೧೬, ಅಲ್ತಾಫ್ ಉಸ್ತಾದ ೬೧೫, ಸುಶಾಂತ ಅಂಕಲಗಿ ೬೧೫, ಅಯ್ಯಪ್ಪ ಗೋಂಧಳೆ ೬೧೪, ಸುಪ್ರೀತ್ ರೆಡ್ಡಿ ೬೧೪, ಸಿದ್ದಾರ್ಥ ಕಂಕರಡ್ಡಿ ೬೧೪, ಸೌಭಾಗ್ಯ ಗೊರಬಾಳ ೬೧೨, ಪ್ರವೀಣ ದೊಡಮನಿ ೬೧೨, ವಿಜಯ್ ೬೧೧, ಕೌಶಿಕ್ ಕಂದಗಲ್ ೬೧೧, ಆಯುಷ್ ಶೆಟ್ಟಿ ೬೧೦ ಅಂಕ ಪಡೆದು ಸಾಧಕರಾಗಿ ಹೊರಹೊಮ್ಮಿದ್ದಾರೆ. ಐದನೇ ಬಾರಿ ಶಾಲೆ ರಾಜ್ಯಕ್ಕೆ ಟಾಪರ್ ಆಗಿ ಹೊರಹೊಮ್ಮಿದೆ.
ಹಿಂದೆ ಒಂದು ಬಾರಿ ೬೨೪ ಅಂಕ, ಈಗಿನದ್ದು ಸೇರಿ ೪ ಬಾರಿ ೬೨೫ ಅಂಕಗಳನ್ನು ನಮ್ಮ ವಿದ್ಯಾರ್ಥಿಗಳು ಪಡೆದು ಸಾಧಕರಾಗಿದ್ದಾರೆ. ಶಾಲೆಯಲ್ಲಿ ನೀಟ್, ಐಐಟಿ ಫೌಂಡೇಶನ್ ತರಬೇತಿ ನೀಡಲಾಗುತ್ತಿದ್ದು ವಿದ್ಯಾರ್ಥಿಗಳ ಈ ಸಾಧನೆಯ ಹಿಂದೆ ಸಂಸ್ಥೆಯ ಅಧ್ಯಕ್ಷರಾದ ಎಂ.ಎಸ್.ಪಾಟೀಲ, ಆಡಳಿತಾಧಿಕಾರಿಗಳಾದ ಅಮಿತ್‌ಗೌಡ ಪಾಟೀಲ, ದರ್ಶನಗೌಡ ಪಾಟೀಲ ಅವರ ಪ್ರೋತ್ಸಾಹ ಇದೆ. ವಿದ್ಯಾರ್ಥಿಗಳ ಸಾಧನೆ ಶಿಕ್ಷಕರ ಗುಣಮಟ್ಟದ ಮೌಲ್ಯ ಹೆಚ್ಚಿಸಿದಂತಾಗಿದೆ ಎಂದು ಮುಖ್ಯಾಧ್ಯಾಪಕ ಇಸ್ಮಾಯಿಲ್ ಮನಿಯಾರ್ ತಿಳಿಸಿದರು.