ಎಮ್ ಆರ್ ಪಾಟೀಲ ಕೃಷಿಕ ಸಮಾಜದ ಅಧ್ಯಕ್ಷರಾಗಿ ಅವಿರೋಧ ಆಯ್ಕೆ
ಇಂಡಿ : ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಎಮ್ ಆರ್ ಪಾಟೀಲ (ಗೋಳಸಾರ) ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಆ ಹಿನ್ನೆಲೆಯಲ್ಲಿ ಪಟ್ಟಣದ ಖಾಸಗಿ ಹೊಟೆಲ್ ನಲ್ಲಿ ತಾಲ್ಲೂಕಿನ ಹಿರಿಯರು ಸೇರಿ ಸನ್ಮಾಸಿದರು.
ಈ ಸಂದರ್ಭದಲ್ಲಿ ಮಾಜಿ ಮಂಡಳಿ ಪ್ರಧಾನ ಶಿವಾನಂದ ರಾವೂರ, ಮಾಜಿ ಗ್ರಾಂ ಅಧ್ಯಕ್ಷ ಶ್ರೀಶೈಲ ಕುಂಬಾರ, ಟಿ ಎಮ್ ಸಿ ಸದಸ್ಯರು ಶಂಕರ ಭೋರಾಮಣಿ, ಅಶೋಕ ರಾ ಬಿರಾದಾರ, ಶಿವುಕುಮಾರ ಬಿರಾದಾರ, ರಾಮು ದುದ್ದಗಿ ಮಿರಗಿ, ದುಂಡಪ್ಪ ಹ್ಯಾಳದ ಶಿಕ್ಷಕರು, ಭೀಮಣ್ಣಾ ಕೌವಲಗಿ, ಸಿದ್ದಣ್ಣಾ ಗುನ್ನಾಪುರ, ಗಿರಿಮಲಗೌಡ ಬಿರಾದಾರ, ಚಂದ್ರಶೇಖರ ಸೋನ್ನ ಶಿವಪುರ, ಕಾಂತು ಮಾಶ್ಯಾಳ ಸಾತಲಗಾಂವ ಇತರರು ಇದ್ದರು.


















