ಮಲೈಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ಅಭಿವೃದ್ಧಿ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಎಂ.ಆರ್ ಮಂಜುನಾಥ್
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು:ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ವತಿಯಿಂದ ತಿರುಪತಿ ಮಾದರಿ ಕೈಗೊಂಡಿರುವ ಸುರಂಗ ಮಾರ್ಗ ಕಾಮಗಾರಿ ಅಚ್ಚುಕಟ್ಟಾಗಿ ನಿರ್ವಹಿಸಿ ಭಕ್ತರಿಗೆ ಅನುಕೂಲ ಕಲ್ಪಿಸುವಂತೆ ಶಾಸಕ ಎಂ. ಆರ್. ಮಂಜುನಾಥ್ ರವರು ಸಂಬಂಧ ಪಟ್ಟ ಇಂಜಿನಿಯರ್ ಗಳಿಗೆ ಸೂಚನೆ ನೀಡಿದರು.
ಶ್ರೀ ಕ್ಷೇತ್ರ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ವತಿಯಿಂದ ಕೈಗೊಂಡಿರುವ ಸುರಂಗ ಮಾರ್ಗ ಕಾಮಗಾರಿ ಮತ್ತು ಅಂತರ ಗಂಗೆಗೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಶಾಸಕರು ತಿರುಪತಿ ಮಾದರಿ
ಸುರಂಗ ಮಾರ್ಗ ಕಾಮಗಾರಿ ಬರುವಂತಹ ಭಕ್ತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ಅಚ್ಚುಕಟ್ಟಾಗಿ ನಿರ್ವಹಣೆ ಆಗಬೇಕು.
ಅಂತರ ಗಂಗೆಯಲ್ಲಿ ದಿನನಿತ್ಯ ಸಾವಿರಾರು ಭಕ್ತಾದಿಗಳು ಆಗಮಿಸಿ ಪುಣ್ಯಸ್ನಾನ ಮಾಡುತ್ತಿದ್ದ ಸ್ಥಳಲ್ಲಿ ವ್ಯವಸ್ಥಿತವಾಗಿ ಶುಚಿತ್ವ ಕಾಪಾಡುವಂತೆ ತಿಳಿಸಿದರು. ಮತ್ತು ಚರಂಡಿ ನಿರ್ಮಿಸಿ ಆ ಮೂಲಕ ಕೊಳಚೆ ನೀರು ಹೊರ ಹೋಗುವಂತೆ ಪರ್ಯಾಯ ಮಾರ್ಗ ಮಾಡುವಂತೆ ಇಂಜಿನೀಯರ್ ಗಳಿಗೆ ತಿಳಿಸಿದರು.
ಅಲ್ಲದೆ ಕಿರನಹೊಲ ಭಾಗದಲ್ಲಿ ಸಿಸಿ ರಸ್ತೆ ನಿರ್ಮಿಸುವ ಸಂಬಂಧ ಖುದ್ದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು. ನಡೆಯುತ್ತಿರುವ ಕೆಲಸದ ಬಗ್ಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳಕ್ಕೆ ಬೇಟಿ ನೀಡಿ ಕಾಮಗಾರಿಗಳ ಪಟ್ಟಿ ಮಾಡಿ ಹದಿನೈದು ದಿನದೊಳಗೆ ನೀಡವಂತೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪ್ರಾಧಿಕಾರ ಉಪ ಕಾರ್ಯದರ್ಶಿ ಚಂದ್ರಶೇಖರ್ ಲೋಕೋಪಯೋಗಿ ಇಲಾಖೆ ಎಇಇ ಚಿನ್ನನ್ ಮಹೇಶ್ ಸಂತೋಷ್ ಪ್ರಾಧಿಕಾರ ಇಂಜಿನೀಯರ್ ಸೆಲ್ವಗಣಪತಿ ಮುಖಂಡರಾದ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಮಂಜೇಶ್, ಡಿ.ಕೆ.ರಾಜು ನಾಗಣ್ಣ ವಿಜಯ್ ಕುಮಾರ್ ಎಸ್ ಆರ್ ಮಹದೇವ್ ಡಿ.ಆರ್ ನವೀನ್ ಇನ್ನಿತರರು ಹಾಜರಿದ್ದರು.