ಆಲಮಟ್ಟಿ ಮುದ್ದೇಬಿಹಾಳ,ಯಾದಗಿರಿ ರೈಲು ಮಾರ್ಗಕ್ಕೆ ಸಂಸದರ ಭೇಟಿ
ಶೀಘ್ರವಾಗಿ ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ..!
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಆಲಮಟ್ಟಿ ಮುದ್ದೇಬಿಹಾಳ,ಯಾದಗಿರ ರೈಲು ಮಾರ್ಗ ಕುರಿತು ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಇತ್ತೀಚೆಗೆ ಸಮೀಕ್ಷೆ ಮಾಡಲು ಮುಂದಾಗಿರುವುದು ರೈಲು ಮಾರ್ಗಕ್ಕೆ ಹೋರಾಟ ಮಾಡುತ್ತಿರುವ ಹುಣಸಗಿ ತಾಳಿಕೋಟೆ ಸುರಪುರ ಭಾಗದ ಹೋರಾಟಗಾರರ ತಂಡವು ಲೋಕಸಭಾ ಸಂಸದ ರಮೇಶ್ ಜಿಗಜಿಣಗಿ ಅವರನ್ನು ತಯ ಸ್ವಗೃಹದಲ್ಲಿ ಭೇಟಿ ನೀಡಿ ಈ ಯೋಜನೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಎಂದು ಮನವಿ ಮಾಡಲಾಯಿತು.
ಸ್ವಾತಂತ್ರ್ಯ ಪೂರ್ವದಲ್ಲಿ 1929ರ ಸುಮಾರಿಗೆ ಬ್ರಿಟಿಷ್ ರೈಟ್ ಕಂಪನಿಯ ಉದ್ದೇಶಿತ ಈ ರೈಲು ಮಾರ್ಗ ಹಲವಾರು ಕಾರಣಗಳಿಂದ ನೆನೆಗುದ್ದಿಗೆ ಬಿದ್ದಿದೆ. ಈ ಭಾಗದ ಜನತೆ ಬಹು ದಿನಗಳಿಂದ ನಿರ್ಮಾಣಕ್ಕೆ ಒತ್ತಾಯಿಸುತ್ತಲೆ ಬಂದಿದ್ದಾರೆ.
ಈ ಕುರಿತು ರಾಯಚೂರು ಸಂಸದ ಕುಮಾರನಾಯಕ ಅವರು ಕಳೆದ ವರ್ಷ ವಿಶೇಷ ಪ್ರಯತ್ನವನ್ನು ಮಾಡಿ ರೈಲ್ವೆ ಇಲಾಖೆಯಿಂದ ಮತ್ತೊಮ್ಮೆ ಆರ್ಥಿಕ ಮತ್ತು ಸಾಮರ್ಥ್ಯದ ಸಮೀಕ್ಷೆಯನ್ನು ಮಾಡುವ ಒಪ್ಪಿಗೆಯನ್ನು ಪಡೆದಿದ್ದರು. ಈ ಕುರಿತು ಸಂಸದರೊಂದಿಗೆ ಪ್ರಸ್ತಾಪಿಸಿದ ಹೋರಾಟಗಾರರು ಯೋಜನೆಯ ನಿರ್ಮಾಣದಿಂದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ರಾಯಚೂರು ಭಾಗದ ಉತ್ತರ ಕರ್ನಾಟಕ ಮತ್ತು ಕಲ್ಯಾಣಕರ್ನಾಟಕದ ಜಿಲ್ಲೆಗಳಿಗೆ ಬಹಳಷ್ಟು ಸಂಪರ್ಕ ಉಪಯೋಗ ಆಗುತ್ತದೆ ಕಾರಣ. ತಾವು ಸಹ
ಯೋಜನೆಯ ಕಾರ್ಯಗತಗೊಳಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾ ಅಧ್ಯಕ್ಷ ಆರ್.ಎಸ್. ಪಾಟೀಲ (ಕುಚಬಾಳ) ನಿಯೋಗಕ್ಕೆ ಮಾರ್ಗದರ್ಶನ ಮಾಡಿದರು. ಹೋರಾಟಗಾರರಾದ ಅರವಿಂದ ಲದ್ದಿಮಠ, ಚಂದ್ರಶೇಖರ ದಂಡಿನ, ಆರ್.ವಿ. ಜಾಲವಾದಿ,ಕಿರಣ ಪಾಟೀಲ, ಬಸನಗೌಡ ಪಾಟೀಲ, ಶಿವನಗೌಡ ಪಾಟೀಲ, ಜಯಪ್ರಕಾಶ ಉಪನಾಳ ಸೇರಿದಂತೆ ಉಪಸ್ಥಿತರಿದ್ದರು.
ಕೇಂದ್ರ ಸರ್ಕಾರವು ಬೃಹತ್ ಯೋಜನೆ, ರೈಲ್ವೆ ಮಾರ್ಗಗಳನ್ನು ನಿರ್ಮಿಸುವುದಕ್ಕೆ ಇತ್ತೀಚೆಗೆ ಹೆಚ್ಚು ಆದ್ಯತೆ ನೀಡುತ್ತಿದೆ. ರೈಲ್ವೆ ಸಚಿವರಾದ ಅಶ್ವಿನ್ ವೈಷ್ಣವ್ ಅವರು ಬಹು ನಿರೀಕ್ಷಿತ ಈ ರೈಲ್ವೆ ಮಾರ್ಗ ಈ ಬಾರಿ ನಿರ್ಮಿಸುತ್ತಾರೆ ಎಂದು ನನ್ನ ನಂಬಿಕೆ. ಇದಕ್ಕಾಗಿ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಒತ್ತಾಯಿಸುತ್ತೇನೆ.


















