ವಿಜಯಪುರ : ಸರ್ಕಾರಿ ಕಾರ್ಯಕ್ರಮ ಎಲ್ಲಿ ನಡೆಯಬೇಕು ಅಲ್ಲಿಯೇ ನಡೆಯಬೇಕು ಎಂದು ಸಂಸದ ರಮೇಶ ಜಿಗಜಿಗಣಗಿ ಶಾಸಕ ಯತ್ನಾಳ ವಿರುದ್ಧ ಗುಡುಗಿದರು. ನಗರದಲ್ಲಿ ಮಾತನಾಡಿದ ಅವರು, ನಾವು ಕಾರ್ಯಕ್ರಮ ಬಿಡಬೇಕು ಅಂತಾ ಬಿಟ್ಟಿಲ್ಲ. ಸರ್ಕಾರಿ ಕಾರ್ಯಕ್ರಮ ಎಲ್ಲಿ ನಡೆಬೇಕು ಅಲ್ಲಿಯೇ ಆಗಬೇಕು. ಅಲ್ಲದೇ, ಶಾಸಕ ಯತ್ನಾಳರ ಕಾರ್ಯಕ್ರಮದಲ್ಲಿ ನಮ್ಮ ಹೆಸರು ಇರಲಿಲ್ಲ. ಅದಕ್ಕಾಗಿ ಹೋಗಿಲ್ಲ. ಬದಲಾಗಿ ಆಲಮಟ್ಟಿ ಸರ್ಕಾರಕ್ಕೆ ಅಷ್ಟೇ ಹೋಗಿದ್ದೇನೆ ಎಂದರು.