ಸಂಸದ ರಮೇಶ್ ಜಿಗಜಿಣಿಗಿ ವಿಧ್ಯಾರ್ಥಿಗಳೊಂದಿಗೆ ಸಂವಾದ..!
ವಿಜಯಪುರ : ಕೇಂದ್ರಿಯ ವಿದ್ಯಾಲಯದ ಭೇಟಿ ನೀಡಿದ ಜಿಲ್ಲೆಯ ಸಂಸದರಾದ ರಮೇಶ್ ಜಿಗ್ಜಣಿಗಿ ಶಾಲೆಯ ಅಭಿವೃದ್ಧಿಯ ಕುರಿತು ಮಾಹಿತಿಯನ್ನು ಪಡೆದುಕೊಂಡರು ,
ಪಿಎಂ ಶ್ರೀ ಯೋಜನೆ ಅಡಿಯಲ್ಲಿ ಕೇಂದ್ರೀಯ ವಿದ್ಯಾಲಯದಲ್ಲಿ ಕೈಗೊಂಡ ಕಾರ್ಯಗಳು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಂಡಿರುವ ಕುರಿತು, ವೃತ್ತಿ ಶಿಕ್ಷಣದ ಆರಂಭದ ಕುರಿತು, ಪೂರ್ವ ಪ್ರಾಥಮಿಕ ಹಂತದ ಮೂರು ವರ್ಷಗಳ ಬಾಲವಾಟಿಕ ಮಾದರಿಯ ತರಗತಿಗಳ ಕುರಿತು ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡರು.
ವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಮಕ್ಕಳಿಂದ ಮಾಹಿತಿ ಪಡೆದುಕೊಂಡರು ಹುರುದುಂಬಿಸಿದರು , ವಿದ್ಯಾಲಯಕ್ಕೆ ಮಂಜೂರಾದ ಬೋಧಕ ಹಾಗೂ ಬೋಧಕೇತರ ಹುದ್ದೆಗಳ ಕುರಿತು ಮಾಹಿತಿ ಪಡೆದುಕೊಂಡರು , ಖಾಲಿ ಇರುವ ಹುದ್ದೆಗಳ ಕುರಿತು ಕೇಂದ್ರದ ಕೇಂದ್ರೀಯ ವಿದ್ಯಾಲಯ ಸಂಘಟನೆ ನವದೆಹಲಿ ಜೊತೆಗೆ ಮಾತನಾಡುವ ಭರವಸೆಯನ್ನು ನೀಡಿದರು. ನಿಯಮಿತವಾಗಿ ವಿದ್ಯಾರ್ಥಿ ಪಾಲಕ-ಶಿಕ್ಷಕ ಸಭೆಯನ್ನು ನಡೆಸುವ ಹಾಗೂ ಪ್ರತಿ ಸಭೆಯ ನಡಾವಳಿಗಳ ಕುರಿತು ತಮ್ಮ ಗಮನಕ್ಕೆ ತರಲು ಸೂಚನೆ ನೀಡಿದರು, ವಿದ್ಯಾರ್ಥಿಗಳ ಫಲಿತಾಂಶದ ಕುರಿತು ಅತೃಪ್ತಿ ವ್ಯಕ್ತಪಡಿಸಿ ಮಾದರಿಯ ಫಲಿತಾಂಶ ಸಾಧಿಸಲು ಕೈಗೊಳ್ಳಬೇಕಾದ ಕ್ರಮದ ಕುರಿತು ಮಾರ್ಗದರ್ಶನ ನೀಡಿದರು ಹಾಗೂ ಎಚ್ಚರಿಕೆ ನೀಡಿದರು.
11 ಹಾಗೂ 12ನೇ ತರಗತಿಯ ವಿಭಾಗ ಬಲಪಡಿಸುವ ಕುರಿತು ಸೂಚನೆ ನೀಡಿದರು , ವಿದ್ಯಾಲಯಕ್ಕೆ ಅಗತ್ಯವಿರುವ ಅನುದಾನ ಮತ್ತು ಅಗತ್ಯವಿರುವ ಎಲ್ಲ ರೀತಿಯ ಬೆಂಬಲ ನೀಡುವುದಾಗಿ, ವಿದ್ಯಾಲಯವನ್ನು ಇನ್ನೂ ಹೆಚ್ಚು ಪರಿಣಾಮಕಾರಿಯಾಗಿ ರೂಪಿಸುವ ಹಾಗೂ ಖಾಸಗಿ ಸಿಬಿಎಸ್ಸಿ ಶಾಲೆಗಳಿಗಿಂತ ಒಳ್ಳೆ ಗುಣಮಟ್ಟ ಕೊಡುವ ಹಾಗೆ ವಾತಾವರಣ ರೂಪಿಸಲು ಸೂಚಿಸಿದರು.ತರಗತಿ, ಲೈಬ್ರರಿ, ಪ್ರಯೋಗಾಲಯ ವಿವರ ಪರಿಶೀಲನೆ ನಡೆಸಿದರು