ಪರ್ವತಾರೋಹಿ ಅರುಣಿಮಾಳ ಛಲವಂತಿಕೆ ಬೆಳಸಿಕೊಳ್ಳಿ.! ಸಾಹಿತಿ, ಶಿಕ್ಷಕ ಕೋರಿ
ಇಂಡಿ- ಜಗತ್ತಿನ ಅತ್ಯಂತ ದುರ್ಗಮವಾದ ಏಳು ಪರ್ವತಗಳನ್ನು ಏರಿದ ದಿವ್ಯಾಂಗ ಪರ್ವತಾರೋಹಿ ಮಹಿಳೆ ಅರುಣಿಮಾ ಸಿನ್ಹಾಳ ಹೋರಾಟದ ಬದುಕು ಮತ್ತು ಅವಳಲಿದ್ದ ಛಲವಂತಿಕೆಯನ್ನು ವಿದ್ಯಾರ್ಥಿಗಳು ಅಳವಡಿಕೊಳ್ಳಬೇಕೆಂದು ಸಾಹಿತಿ ಶಿಕ್ಷಕ ದಶರಥ ಕೋರಿಯವರು ತಿಳಿಸಿದರು.
ಪಟ್ಟಣದ ಸಕ್ಸಸ್ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲಾ ವಾರ್ಷಿಕೋತ್ಸವದ ನಿಮಿತ್ಯ ಹಮ್ಮಿಕೊಂಡಿದ್ದ ಬಹುಮಾನ ವಿತರಣಾ ಸಮಾರಂಭದಲ್ಲಿ ಅವರು ಉಪನ್ಯಾಸ ನೀಡುತ್ತ ಮಾತನಾಡಿದರು.
ಮೊದಲಿಗೆ ವ್ಹಾಲಿಬಾಲಾ ಕ್ರೀಡಾಪಟುವಾಗಿದ್ದ ಉತ್ತರ ಪ್ರದೇಶದ ಅರುಣಿಮಾ ಸಿನ್ಹಾ ಒಮ್ಮೆ ರೈಲ್ವೆಯಲ್ಲಿ ಪ್ರಯಾಣಿಸುವಾಗ ದರೋಡೆಕೋರ ತಂಡದಿಂದ ಭೀಕರವಾಗಿ ದಾಳಿಗೊಳಗಾಗಿದ್ದಳು.ಅಂದು ರಾತ್ರಿ ದರೋಡೆಕೋರರಿಂದ ರೈಲು ಬೋಗಿಯೊಳಗೆ ಮಾರಣಾಂತಿಕವಾಗಿ ಪೆಟ್ಟು ತಿಂದು ಅರುಣಿಮಾ ಚಲಿಸುವ ರೈಲ್ವೆಯಿಂದ ಎಸೆಯಲ್ಪಟ್ಟ ಅರುಣಿಮಾಳ ಒಂದು ಕಾಲು ಸಂಪೂರ್ಣವಾಗಿ ನುಜ್ಜುಗುಜ್ಜಾಗಿತ್ತು.ಕಳ್ಳರ ರಾಕ್ಷಸಿ ಕೃತ್ಯದಿಂದ ಅಪಘಾತಕ್ಕೊಳಗಾದ ಅರುಣಿಮಾಳ ಕಾಲು ಇಡೀ ರಾತ್ರಿ ನಾಯಿ. ನರಿ, ಇಲಿ ಹೆಗ್ಗಣಗಳು ಮೂರ್ಚಿತ ಕ್ರೀಡಾಪಟುವಿನ ಕಾಲನ್ನು ಕಚ್ಚಿದ್ದವು.ಪರಿಣಾಮ ವೈದ್ಯರಿಂದ ಅವಳ ಕಾಲು ಕತ್ತರಿಸಲ್ಪಟ್ಟಿತ್ತು.
ಈ ಆಘಾತಕಾರಿ ಘಟನೆಯಿಂದ ತನ್ನ ಬಾಳಿನಲ್ಲಿ ವಿಚಿಲತಳಾಗದ ಅರುಣಿಮಾ ಜೀವನದಲ್ಲಿ ಎದೆಗುಂದದೆ ಸಾಧನೆಗಾಗಿ ಹೋರಾಟದ ಕಿಚ್ಚು ಅಪ್ರತಿಮ ಛಲವಂತಿಕೆಯನ್ನು ಮೈಗೂಡಿಸಿಕೊಂಡು ಭಾರತದ ಅತ್ಯುನ್ನತ ಶಿಖರವಾದ ಮೌಂಟ್ ಎವರೆಸ್ಟ ಶಿಖರವೇರಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿ ದೇಶದಲ್ಲಿ ಹೊಸ ಸಾಹಸ ಮೆರೆದಳು.ಇದಲ್ಲದೆ ಇವಳ ಸಾಧನೆ ಇಷ್ಟಕ್ಕೆ ನಿಲ್ಲದೇ ಅವಳು ವಿಶ್ವದ ಅತೀ ಎತ್ತರದ ಆರು ಗಿರಿ ಶಿಖರ ಪರ್ವತಗಳನ್ನು ಏರಿ ಜಗತ್ತು ನಿಬ್ಬೆರಗಾಗುವಂತೆ ಸಾಧನೆ ಮಾಡಿ ತೋರಿಸಿದಳು.
ಇವಳ ಸಾಧನೆಯನ್ನು ಕಂಡು ಭಾರತ ಸರ್ಕಾರ ಮೆಚ್ಚಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತು.
ಹಾಗೆ ಭಾರತದಲ್ಲಿ ಕ್ರೀಡೆಯಿಂದಲೂ ಕೂಡಾ ಭಾರತದ ಮಹೋನ್ನತವಾದ ಶ್ರೇಷ್ಠ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿಯನ್ನು ಪಡೆಯಬಹುದೆಂದು ಖ್ಯಾತ ಕ್ರಿಕೇಟಿಗ ಸಚಿನ್ ರಮೇಶ ತೆಂಡೂಲ್ಕರ್ ರವರು ಈ ದೇಶದ ಮುಂದೆ ಈಗಾಗಲೇ ಈ ಸಾಧನೆ ಮಾಡಿ ತೋರಿಸಿದ್ದಾರೆ ಎಂದರು.
ಸಮಾರಂಭದಲ್ಲಿ ಪ್ರಜಾವಣಿಯ ದಿನಪತ್ರಿಕೆಯ ಹಿರಿಯ ವರದಿಗಾರರಾದ ಎ,ಸಿ ಪಾಟೀಲ,ಲಕ್ಷ್ಮೀ ಕಾಂತ ಪತ್ತಾರ, ಅವಿನಾಶ ಘಿರಡಿಮಠ, ದೈಹಿಕ ಶಿಕ್ಷಕರ ಕಾಂಬಳೆ,ಮುಖ್ಯ ಗುರುಮಾತೆ ಹಾಗೂ ಸಿಬ್ಬಂದಿಗಳು ಪಾಲಕರು ಪ್ರೇಕ್ಷಕರು ಹಾಜರಿದ್ದರು.