ತಾಯಿಯ ಪವಿತ್ರ ಪಾದ ಸ್ವರ್ಗ ಸಮಾನ
ಇಂಡಿ : ಈ ಜಗತ್ತಿನಲ್ಲಿ ಹೆತ್ತ ತಾಯಿಯ ಆಶಿರ್ವಾದಕ್ಕಿಂತ ಶ್ರೇಷ್ಠ ಅನುಗ್ರಹ ಇನ್ನೊಂದಿಲ್ಲ, ತಾಯಿಯ ಪವಿತ್ರ ಪಾದ ಸ್ವರ್ಗಕ್ಕೆ ಸಮಾನ. ದೇವರ ಆರಾಧನೆ ಮಾಡುವದು ತಾಯಿಯ ಸೇವೆ ಮಾಡುವದು ಎರಡು ಪವಿತ್ರ ಕಾರ್ಯ ಎಂದು ಸುಕ್ಷೇತ್ರ ಗೋಳಸಾರದ ಗುರುದೇವಿ ಅಮ್ಮನವರು ಹೇಳಿದರು.
ತಾಲೂಕಿನ ಗೋಳಸಾರದ ಶ್ರೀ ಪುಂಡಲಿAಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಸದ್ಗುರು ತ್ರೀಧರೇಶ್ವರ ಮಹಾಶಿವಯೋಗಿಗಳ ೩೧ ನೇ ಪುಣ್ಯಾರಾಧನೆ ಮಹೋತ್ಸವದ ಮಹಿಳಾ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾಯಿಯೇ ಪರಮ ದೈವವೆಂದು ತಿಳಿದು ತಂದೆ ತಾಯಿಯವರ ಸೇವೆಯಿಂದ ಸಕಲೈಶ್ವರ್ಯ ಪ್ರಾಪ್ತವಾಗಿ ನೆಮ್ಮದಿಯ ಬದುಕು ಸಾಧ್ಯವಾಗುತ್ತದೆ. ಗುರು ಭಕ್ತಿಯನ್ನೇ ಉಸಿರಾಗಿಸಿಕೊಂಡು ಸತ್ಕಾರ್ಯ ಮಾಡುತ್ತಿರುವ ಗೋಳಸಾರ ಮತ್ತು ಜಿಲ್ಲೆಯ ಜನತೆಗೆ ಶ್ರೀ ಅಭಿನವ ಪುಂಡಲಿAಗ ಶ್ರೀಗಳು ಮತ್ತು ಗೋಳಸಾರ ಮಠದ ದಿವ್ಯ ಕೃಪೆಯಿಂದ ಶ್ರೇಯಸ್ಸಿನ ಬದುಕು ಸಾಧ್ಯವಾಗಲಿ ಸರ್ವರಿಗೂ ಶೂಭವಾಗಲಿ ಎಂದರು.
ಬುರಾಣಪೂರ ಶ್ರೀ ಸಿದ್ದಾರೂಢ ಮಠದ ಮಾತೋಶ್ರೀ ಯೋಗೀಶ್ವರಿ ಅಮ್ಮನವರು ಮಾತನಾಡಿ ಆಧ್ಯಾತ್ಮದ ಅನುಸಂಧನವೇ ಗುರು ಶಿಷ್ಯರ ನಿಜವಾದ ಸಂಬAಧ
ನಾವು ಸನ್ಮಾರ್ಗದಲ್ಲಿ ನಡೆದಾಗಲೂ ಲೋಕ ನಿಂದನೆಗಳು ಬರುವದು ಸಹಜ, ಲೋಕ ನಿಂದನೆಗೆ ದೃತಿಗೆಡೆದೆ ಸರ್ವರಿಗೂ ಪ್ರೀತಿಯಿಂದ ಹಿತವನ್ನೇ ಬಯಸುವವ ದೇವಮಾನವನಾಗುತ್ತಾನೆ ಅಂತಹ ಕಾರ್ಯ ಗೋಳಸಾರ ಮಠ ಮಾಡುತ್ತಿದೆ ಎಂದರು.
ಶಿವಮೊಗ್ಗಾದ ರಂಗನಾಯಕಿ ಗುರು ಪ್ರಸಾದ ಹತ್ವಾರ ಮಾತನಾಡಿದೇಶದ ಸರ್ವಾಂಗೀಣ ಸದ್ವಿಕಾಸಕ್ಕಾಗಿ ಸಮರ್ಥ ಯುವಶಕ್ತಿಯ ಅಗತ್ಯವಿದ್ದು ರಾಷ್ಟç ಮಾತೆ ಜೀಜಾ ಮಾತೆ ಯಂತೆ ಎಲ್ಲ ತಾಯಂದಿರು ತಮ್ಮ ಮಕ್ಕಳನ್ನು ಸಾಮ್ರಾಟ ಛತ್ರಪತಿ ಶಿವಾಜಿ ಮಹಾರಾಜರ ಚೈತನ್ಯ ಕುಡಿಗಳಂತೆ ಬೆಳೆಸಬೇಕು ಬಸವಾದಿ ಶರಣರ ಪುಣ್ಯಭೂಮಿ ಸಾಧ್ಯತೆಗಳ ಶ್ರೇಷ್ಠ ಭೂಮಿಯಾಗಿದ್ದು ಈ ನೆಲದ ವಾರಸುದಾರರು ನಾವುಗಳು ಎನ್ನುವದು ಹೆಮ್ಮೆ ನಮಗಿರಬೇಕು ಎಂದರು.
ಉಪನ್ಯಾಸಕಿ ಕವಿತಾ ಸುದೀಂದ್ರ ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟರು.. ಸುಕ್ಷೇತ್ರ ಗೋಳಸಾರದ ಅಭಿನವ ಪುಂಡಲಿAಗ ಮಹಾಶಿವಯೋಗಿಗಳು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮಸಳಿ ಬಿಕೆಯ ತುಕಾಬಾಯಿ ಪೀರಪ್ಪ ತಳವಾರ, ಸಾತಲಗಾಂವದ ಜಯರಾಬಿ ನದಾಫ, ಸಂಗೋಗಿಯ ಚಂದ್ರಭಾಗಾ ಸುರಗಿಹಳ್ಳಿ ಇವರು ಮಾಡಿಸ ಸಮಾಜಮುಖಿ ಕಾರ್ಯಕ್ಕೆ ಮಠದ ವತಿಯಿಂದ ಇವರನ್ನು ಸನ್ಮಾನಿಸಲಾಯಿತು.
ರವಿ ಆಳೂರ ಮತ್ತು ಎ.ಎಸ್.ಪಾಸೋಡಿ ಮಾತನಾಡಿದರು.
ಇಂಡಿ ತಾಲೂಕಿನ ಗೋಳಸಾರದ ಶ್ರೀ ಪುಂಡಲಿಂಗ ಮಹಾಶಿವಯೋಗಿಗಳ ಮಠದಲ್ಲಿ ಹಮ್ಮಿಕೊಂಡ ಮಹಿಳಾ ಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಗುರುದೇವಿ ಅಮ್ಮ ಮಾತನಾಡಿದರು.



















