ಲಿಂಗಸೂಗೂರು: ತಾಲೂಕಿನ ಮದಗಲ್ ಪಟ್ಟಣದ ಮದರ್ ತೆರೇಸಾ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಹಿಫ್ಜ ಸದಾಫ್ ಹಾಗೂ 10ನೇ ತರಗತಿಯ ವಿದ್ಯಾರ್ಥಿ ಸ್ವಯಂ ಸುರಪುರ 2021-22ನೇ ಸಾಲಿನ ಇನ್ಸ್ಪೈರ್ ಅವಾರ್ಡ್ ಗೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳು ಬೆಳಕಿನ ಸಂವೇದಕಗಳನ್ನು ಬಳಸಿ ಹೇಗೆ ಬೆಳಕಿನ ಮಟ್ಟವನ್ನು ಕಂಡುಹಿಡಿಯಬಹುದೆಂದು ಬೀದಿದೀಪ, ಸ್ವಯಂಚಾಲಿತ ಭದ್ರತಾ ಬೆಳಕು ಇವುಗಳ ಸಹಾಯದಿಂದ ಹಾಗೂ ಪದಗಳನ್ನು ಬಳಸದೆ ಬರೀ ಸನ್ನೆಯ ಮುಖಾಂತರ ಹೇಗೆ ನರ್ಸ್ಗಳ ಸಹಾಯ ಪಡೆಯಬಹುದು ಎಂದು ತಿಳಿಸಿಕೊಟ್ಟಿರುತ್ತಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕೇಂದ್ರ ಸರ್ಕಾರ ₹ 10,000 ನಗದು ಬಹುಮಾನ ಹಾಗೂ ಜಿಲ್ಲಾಮಟ್ಟಕ್ಕೆ ಆಯ್ಕೆ ಮಾಡುವದರ ಮೂಲಕ ಪ್ರೋತ್ಸಾಹಿಸಿರುತ್ತಾರೆ.
ಸಂಸ್ಥೆಯ ಅಧ್ಯಕ್ಷರಾದ ಮೊಹಮ್ಮದ್ ಸಾದಿಕ್ ಅಲಿ, ಹಾಗೂ ಶಾಲೆಯ ಪ್ರಾಂಶುಪಾಲರು ಮತ್ತು ಎಲ್ಲ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಶುಭ ಕೋರಿದ್ದಾರೆ.