ತಿಕೋಟ: ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ ಆತ್ಮಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ವಿಜಯಪುರ ತಿಕೋಟಾ ತಾಲೂಕಿನ ತೊರವಿ ತಾಂಡಾ 1 ರ ತೋಟದಲ್ಲಿ ನಡೆದಿದೆ.
ಮೃತಳ ಪತಿ ಪಿಂಟೂ ಜಾಧವ್, ಧರ್ಮು ಜಾಧವ್, ವಿಠಲ್ ಜಾಧವ್ ಬಂಧಿತ ಆರೋಪಿಗಳು. ಕೌಟುಂಬಿಕ ಕಲಹದಿಂದಾಗಿ ಮೃತ ಅನಿತಾಳಿಗೆ ಕಿರುಕುಳ ನೀಡಿದ ಹಿನ್ನಲೆ ಕೃಷಿ ಹೊಂಡಕ್ಕೆ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದರು. ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.