ಲಿಂಗಸೂಗೂರು: ತಾಲೂಕಿನ ಜೆಡಿಎಸ್ ಪಕ್ಷದಿಂದ ಉಚ್ಛಾಟಿತಗೊಂಡ ಜೆಡಿಎಸ್ ಪಕ್ಷದ ಮಾಜಿ ಅಧ್ಯಕ್ಷ ಕೆ ನಾಗಭೂಷಣ, ಹಾಗೂ ಬೆಂಬಲಿಗರು ಮತ್ತು ಮುದಗಲ್, ಹಟ್ಟಿ ಚಿನ್ನದ ಗಣಿ ಪಟ್ಟಣದ ಯುವಕರು ಮಾಜಿ ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ಅಧ್ಯಕ್ಷರಾದ ಮಾನಪ್ಪ ಡಿ ವಜ್ಜಲ್ ನೇತೃತ್ವದಲ್ಲಿ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರಿದರು.
ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ವೀರನಗೌಡ ಪಾಟೀಲ್ ಲೆಕ್ಕಿಹಾಳ, ಶ್ರೀನಿವಾಸ ನಾಯಕ ಟಿ, ಆರ್, ನಾಯ್ಕ್, ಪುರಸಭೆ ಅಧ್ಯಕ್ಷೆ ಸುನೀತಾ ಕೆಂಬಾವಿ, ಗೋವಿಂದ ನಾಯಕ, ಮುದಗಲ್ನ ವೆಂಕಟೇಶ್ ಹಿರೇಮನಿ, ಬಸವರಾಜ ಹಾವಳಿ, ದುರಗಪ್ಪ, ಚಿರಂಜೀವಿ ಹಾವಳಿ, ಅಶೋಕ್ ಗೊಡಳಿಗ,ಬೀಮಣ್ಣ ಗೋಡಳಿಗ, ಸೇರಿದಂತೆ ನೂರಾರು ಭಾರತೀಯ ಜನತಾ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.