ಮಕ್ಕಳಿಗೆ ಅತ್ಯಾಧುನಿಕ ಸಲಕರಣೆ ಜೊತೆಗೆ ಅತ್ಯುತ್ತಮ ತರಬೇತಿ ನೀಡಲು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ : ರಾಜ್ಯ ಸಭಾ ಸದಸ್ಯರಾದ ಡಾ. ಸುಧಾ ಮೂರ್ತಿ
ವಿಜಯಪುರ: ವಿಜಯಪುರ ಕ್ರೀಡೆಯಲ್ಲಿ ಹಾಗೂ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಅಂತರಾಷ್ಟçಮಟ್ಟದಲ್ಲಿ ಖ್ಯಾತಿಯನ್ನು ತಂದುಕೊಟ್ಟರೆ ಜಿಲ್ಲೆಯಲ್ಲಿ ಪ್ರತಿಭಾವಂತ ಕ್ರೀಡಾಪಟುಗಳನ್ನು ಗುರುತಿಸಿ ಅಂತವರಿಗೆ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ರಾಜ್ಯ ಸಭಾ ಸದಸ್ಯರಾದ ಡಾ. ಸುಧಾ ಮೂರ್ತಿಯವರು ಅಭಿಪ್ರಾಯಪಟ್ಟರು.
ಸೋಲ್ಹಾಪುರ ರಸ್ತೆಯಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ನಿಲಯದಲ್ಲಿ ಡಾ. ಸುಧಾ ಮೂರ್ತಿಯವರು ರಾಜ್ಯ ಸಭಾ ಸಂಸದರು, ಇವರು ಸಂಸದರ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ೨೦೦.೦೦ ಲಕ್ಷಗಳ ಅನುದಾನದಲ್ಲಿ ನೂತನವಾಗಿ ಜಿಲ್ಲಾ ಕ್ರೀಡಾ ಶಾಲೆ/ವಸತಿ ನಿಲಯದ ಕಟ್ಟಡ ಭೂಮಿ ಪೂಜಾ ಸಮಾರಂಭದ ಅಡಿಗಲ್ಲು ನೇರವೇರಿಸಿ ಮಾತನಾಡುತ್ತಾ, ಮಕ್ಕಳಿಗೆ ಅತ್ಯಾಧುನಿಕ ಸಲಕರಣೆ ಜೊತೆಗೆ ಅತ್ಯುತ್ತಮ ತರಬೇತಿ ನೀಡಲು ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗಿದೆ.
ಸೈಕ್ಲಿಂಗ್ ಹಾಗೂ ವಾಲಿಬಾಲ್, ಬಾಸ್ಕೆಟಬಾಲ್ ವಸತಿ ನಿಲಯ ಬಹಳ ಹಳೆಯದ್ದಾಗಿದ್ದರಿಂದ ಉತ್ತಮ ಗುಣಮಟ್ಟದ ಅತ್ಯಾಧುನಿಕ ವಸತಿ ನಿಲಯ ಸಂಸದರ ಅನುದಾನ ಅಡಿಯಲ್ಲಿ ನಿರ್ಮಿಸಿಕೊಡಲಾಗುವುದು. ಇದರಿಂದ ಕ್ರೀಡೆಗಳ ತರಬೇತಿಯ ಗುಣಮಟ್ಟ ಹೆಚ್ಚಾಗಲಿದೆ. ಬಾಲಕಿಯರಿಗೆ ಕ್ರೀಡೆಯಲ್ಲಿ ಹೆಚ್ಚಿನ ಸಾಧನೆ ಮಾಡಿರುವುದನ್ನು ಗುರುತಿಸಿ ಪ್ರೋತ್ಸಾಹಿಸಿದರು. ಅತ್ಯಾಧುನಿಕ ಉಪಕರಣ ಪೂರೈಸಲಾಗುವುದು ಇದರ ಜೊತೆಗೆ ಕ್ರೀಡಾ ವಸತಿ ನಿಲಯದಲ್ಲಿ ಸೈಕ್ಲಿಂಗ್ ಮತ್ತು ಬಾಸ್ಕೆಟಬಾಲ್, ವಾಲಿಬಾಲ್ ಮೈದಾನ ನಿರ್ಮಿಸಿ ಕೊಡಲಾಗುವುದು. ಇದರಿಂದ ಅಂತರಾಷ್ಟçಮಟ್ಟದ ಸಾಧನೆಗೆ ಇದು ಸಹಕಾರಿಯಾಗಿಲಿದೆ ಎಂದರು.
ಸಮಾರAಭದ ಅಧ್ಯಕ್ಷತೆ ವಹಿಸಿದ ಜಿಲ್ಲಾಧಿಕಾರಿಗಳಾದ ಡಾ. ಆನಂದ ಕೆ. ಇವರು ಮಾತನಾಡಿ ಶ್ರೀಘ್ರದಲ್ಲೇ ಸೈಕ್ಲಿಂಗ್ ವೆಲೋಡ್ರೋಂ ಉದ್ಘಾಟನೆ ಮಾಡಲಾಗುವುದು. ಜಿಲ್ಲೆಯಲ್ಲಿ ಕ್ರೀಡೆಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಡಾ. ಸುಧಾ ಮೂರ್ತಿಯವರು ಜಿಲ್ಲೆಯಲ್ಲಿ ಕ್ರೀಡಾ ಅಭಿವೃದ್ಧಿಗೆ ಸಾಕಷ್ಟು ಸಹಾಯ ನೀಡುತ್ತಿದ್ದಾರೆ ಹಾಗೂ ಸರಕಾರದ ಅನೇಕ ಅಭಿವೃದ್ಧಿಪರ ಯೋಜನೆಗಳನ್ನು ಸಹ ಅನುಷ್ಟಾನಗೊಳಿಸಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ರಾಷ್ಷçಪ್ರಶಸ್ತಿ ಪುರಸ್ಕೃತರಾದ ಡಾ. ಜಾವಿದ ಜಮಾದಾರ, ಜಿಲ್ಲಾ ವಾಲಿಬಾಲ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಭೀಮಸೇನೆ ಕೊಕರೆ, ಸಹಾಯಕ ನಿರ್ದೇಶಕರಾದ ಶ್ರೀ ರಾಜಶೇಖರ ಧೈವಾಡಿ ಮಾತನಾಡಿದರು. ರಾಜ್ಯ ಸೈಕ್ಲಿಂಗ್ ಸಂಸ್ಥೆಯ ಚೇರನಮನರಾದ ರಾಜು ಬಿರಾದಾರ, ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್.ಎಸ್. ಹಿರೇಮಠ, ವೇಟ್ ಲಿಪ್ಟಿಂಗ್ ಅಸೋಸಿಯೇಶನ್ ಕಾರ್ಯದರ್ಶಿಗಳಾದ ಶ್ರೀ ಚಂದ್ರಕಾAತ ತಾರನಾಳ, ಯೋಜನಾ ನಿರ್ದೇಶಕರಾದ ಶ್ರೀ ಆಕಾಶ ತಿಮ್ಮಶೆಟ್ಟಿ, ಶ್ರೀ ಜಿ.ಎಮ್. ಮಲ್ಜಿ, ಕಚೇರಿಯ ಅಧೀಕ್ಷಕರಾದ ಶ್ರೀಮತಿ ಪ್ರಿಯಾಂಕ ಹಾಗೂ ಇಲಾಖೆಯ ಎಲ್ಲಾ ತರಬೇತುದಾರರು ಮತ್ತು ವಸತಿ ನಿಲಯದ ಕ್ರೀಡಾಪಟುಗಳು ಭಾಗವಹಿಸಿದ್ದರು.
ಕಾರ್ಯಕ್ರಮದ ಮೊದಲಿಗೆ ಶ್ರೀ ಎಂ.ವಾಯ್. ಚಿಂಚಲಿ ಸ್ವಾಗತಿಸಿದರು, ತರಬೇತುದಾರರಾದ ಅಲ್ಕಾ ಫಡತರೆ ವಂದಿಸಿದರು.



















