2025-26ನೇ ಸಾಲಿನ ಮುಂಗಾರು ಬೀಜ ವಿತರಣೆ : ರೈತ ಭಾಂದವರು ಇದರ ಸದುಪಯೋಗ ಪಡೆದುಕೊಳ್ಳಿ ಕೆಂಗನಾಳ
ವಿಜಯಪುರ : ಈ ವರ್ಷ ಉತ್ತಮ ಮುಂಗಾರು ನಿರೀಕ್ಷೆಯಲ್ಲಿ ಇರುವ ರೈತ ಬಾಂಧವರು 2025-26 ನೇ ಸಾಲಿನ ಮುಂಗಾರು ಬೆಳೆಗಳಾದ ತೊಗರಿ ಹಾಗೂ ಮೆಕ್ಕೆಜೋಳ ರೈತ ಸಂಪರ್ಕ ಕೇಂದ್ರದಲ್ಲಿ ಪಡೆದುಕೊಂಡು ಉತ್ತಮ ಇಳುವರಿ ಪಡೆಯಬೇಕೆಂದು ವಿಜಯಪುರ ಜಿಲ್ಲಾ ಬಿಜೆಪಿ ರೈತ ಮೋರ್ಚ ಉಪಾಧ್ಯಕ್ಷ ಶಿವರಾಜ್ ಕೆಂಗನಾಳ ತಾಂಬಾ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಮಾಡಿ ಮಾತನಾಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷ ರಜಾಕ್ ಚಿಕ್ಕಗಸಿ ಉಪಾಧ್ಯಕ್ಷ ರಾಮಚಂದ್ರ ದೊಡ್ಡಮನಿ ಹಾಗೂ ಗುತ್ತಿ ಬಸವಣ್ಣ ಸಲಹಾ ಸಮಿತಿಯ ಅಧ್ಯಕ್ಷ ಮಲ್ಲಯ್ಯ ಸಾರಂಗಮಠ, ಅಪ್ಪು ಕಲ್ಲೂರು, ಸಿದ್ದು ಹತ್ತಳ್ಳಿ, ಪರಶು ಬಿಸನಾಳ, ದಯಾನಂದ್ ನಿಂಬಾಳ, ಮಾಸೀಮ ವಾಲಿಕರ್, ಮಹಾದೇವ ಮೂಲಿಮನಿ, ಸಿದ್ದಪ್ಪ ತೊರವಿ ಮತ್ತು ರೈತ ಸಂಪರ್ಕ ಕೇಂದ್ರದ ನಿರ್ವಾಹಕರಾದ ಹಣಮಂತ ಹೂಗಾರ್ ಹಾಗೂ ದವಲಸಾಬ್ ಕಸಾಬ್ ಮತ್ತಿತ್ತರಿದ್ದರು.