ಲಿಂಗಸಗೂರ್ : ಮೊಹರಂ ಹಬ್ಬದ ಸಡಗರದಲ್ಲಿದ್ದ ಜನತೆಗೆ ಶಾಕ್ ಎದುರಾಗಿದ್ದು, ಕೆಂಡ ಸಿದ್ದಪಡಿಸುವ ವೇಳೆ ಬೆಂಕಿಗೆ ಬಿದ್ದ ವ್ಯಕ್ತಿಗೆ ಚಿಕಿತ್ಸೆ ಮುಂದುವರೆದಿದೆ.
ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದಲ್ಲಿ ಅಲಾಯಿ ಕುಣಿತಕ್ಕೆ ಕೆಂಡ ಸಿದ್ದಪಡಿಸುವ ವೇಳೆ ರಾತ್ರಿ ಘಟನೆ ನಡೆದಿದೆ. ಮೊಹರಂ ಹಬ್ಬದ ಸಡಗರದಲ್ಲಿದ್ದ ಗ್ರಾಮದಲ್ಲಿ ಇದೀಗ ಮೌನದ ವಾತಾವರಣ ನಿರ್ಮಾಣ ವಾಗಿದ್ದು ಬೆಂಕಿಯಿಂದ ಹೊರಬರಲಾಗದೆ ಒದ್ದಾಡಿ ತೀವ್ರವಾಗಿ ಗಾಯಗೊಂಡ ಯರಗುಂಟಿ ಗ್ರಾಮದ ಹನುಮಂತ ನಾಯಕಗೆ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದ್ದು ಚಿಕಿತ್ಸೆ ಮುಂದುವರೆದಿದೆ. ಲಿಂಗಸುಗೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.