ಚಡಚಣ : ಯುವಕರು ಹುಲಿ ವೇಷ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿ ಸೊಂಗ ಹಾಕಿ ಹಿಂದೂ ಮುಸ್ಲಿಂ ರ ಭವೈಕತೆಗೆ ಪತ್ರರಾದರು. ವಿಜಯಪುರ ಜಿಲ್ಲೆಯ ಭೀಮಾತೀರದ ಖ್ಯಾತಿಯ ನೂತನ ಚಡಚಣ ತಾಲ್ಲೂಕಿನ ಪಟ್ಟಣದಲ್ಲಿ ಮೊಹರಂ ಹಬ್ಬದ ನಿಮಿತ್ಯ ಬುಡಕಟ್ಟು ಜನಾಂಗದ ತಳವಾರ ಸಮುದಾಯದ ಯುವಕರು ಹುಲಿ ವೇಷ ಧರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹುಲಿ ಸೊಂಗ ಹಾಕಿ ಹಿಂದೂ ಮುಸ್ಲಿಂ ರ ಭವೈಕತೆಗೆ ಸಾಕ್ಷಿಯಾದರು.
ಹತ್ತು ದಿನಗಳವರೆಗೆ ನಡೆಯುವ ಈ ಹಬ್ಬದ ಆಚರಣೆಯು ಹಿಂದೂ ಮುಸ್ಲಿಂ ಬೇಧವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಈ ಹಬ್ಬದಲ್ಲಿ ಬರುವ ಹೆಜ್ಜೆ ಕುಣಿತ, ಮುಳ್ತಾ ಹೆಜ್ಜೆ ಕುಣಿತ, ಮಟಕಿ ಹೆಜ್ಜೆ ಕುಣಿತ, ಮರಗಾಲು ಕುಣಿತ ಮುಂತಾದ ಪ್ರಕಾರದಲ್ಲಿ ಕುಣಿಯುತ್ತಾರೆ. ಇದನ್ನು ಜಾನಪದ ಕಲೆಗಳಲ್ಲಿ ಒಂದಾಗಿ ಪರಿಗಣಿಸಲಾಗಿದೆ. ಹಳ್ಳಿಗಳಲ್ಲಿ ಈ ಕುಣಿತಕ್ಕೆ ಅಲಾಯಿ ಹೆಜ್ಜೆ ಕುಣಿತ ಎಂದು ಕರೆಯಲಾಗುತ್ತದೆ.
ಈ ಕಾರ್ಯಕ್ರಮದಲ್ಲಿ ರಾಜು ಕೋಳಿ, ಚಂದ್ರು ಕೋಳಿ, ಮುದಕಪ್ಪ ಕೋಳಿ, ವಿಠ್ಠಲ ಕೋಳಿ, ಶಿವಪ್ಪ ಕೋಳಿ, ಅನಿಲ ಕೋಳಿ ಸೇರಿದಂತೆ ಅನೇಕರು ಉಪಸ್ಥಿತಿರು.