ಇಂದು ನಟಿ ‘ಪೂನಂ ಪಾಂಡೆ” ಅಂತ್ಯಕ್ರಿಯೆ
Voice Of Janata DesK News : Dehali
ಬಾಲಿವುಡ್ ನಟಿ, ರೂಪದರ್ಶಿ ಪೂನಂ ಪಾಂಡೆ ಅವರು ನಿಧನರಾಗಿದ್ದಾರೆ. ಗರ್ಭಕಂಠ ಕ್ಯಾನ್ಸರ್‌ಗೆ ಅವರು ಬಲಿಯಾಗಿದ್ದಾರೆ. ಕೆಲ ತಿಂಗಳಿಂದ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಗರ್ಭಕಂಠದ ಕ್ಯಾನ್ಸರ್ ನೊಂದಿಗೆ ಹೋರಾಡಿದ ನಟಿ ಪೂನಂ ಪಾಂಡೆ ಗುರುವಾರ ಕೊನೆಯುಸಿರೆಳೆದಿದ್ದರು. 32 ವರ್ಷದ ನಟಿ ದುರಂತ ಅಂತ್ಯ ಕಂಡಿದ್ದು, ಅವರ ಸಾವಿಗೆ ಅಭಿಮಾನಿಗಳು ಮಮ್ಮುಲ ಮರುಗಿದ್ದಾರೆ. ಪೂನಂ ಅವರ ಅಂತಿಮ ವಿಧಿ ವಿಧಾನಗಳು ಉತ್ತರ ಪ್ರದೇಶದಲ್ಲಿ ಇಂದು ನಡೆಯಲಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪೂನಂ ಉತ್ತರ ಪ್ರದೇಶದ ತನ್ನ ಹುಟ್ಟೂರು ಕಾಲ್ಪುರದಲ್ಲಿ ಕೊನೆಯುಸಿರೆಳೆದಿದ್ದು, ಅವರ ಅಂತ್ಯಕ್ರಿಯೆ ಅಲ್ಲಿಯೇ ನಡೆಯಲಿದ್ದು, ಈಗಾಗಲೇ ಎಲ್ಲಾ ಸಿದ್ಧತೆಗಳು ಆರಂಭವಾಗಿದೆ ಎಂದು ಹೇಳಲಾಗಿದೆ.
ರೂಪದರ್ಶಿ ಮತ್ತು ನಟಿ ಪೂನಂ ಪಾಂಡೆ ಫೆಬ್ರವರಿ 1 ರಂದು ಗರ್ಭಕಂಠದ ಕ್ಯಾನ್ಸರ್ ನೊಂದಿಗೆ ಹೋರಾಡಿದ ನಂತರ ನಿಧನರಾದರು ಎಂದು ಅವರ ತಂಡ ಶುಕ್ರವಾರ ಬೆಳಿಗ್ಗೆ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.