ಜೀವನದ ಕಲೆಗೆ ಶಿಕ್ಷಣ ಅತೀ ಅವಶ್ಯಕ..!
ಶಾಸಕ ಯಶವಂತರಾಯಗೌಡ ಪಾಟೀಲ..
ಮಾಡೆಲ್ ಪಬ್ಲಿಕ್ ಶಾಲೆಯ 10ನೇ ವಾರ್ಷಿಕೋತ್ಸವ..
ಇಂಡಿ: ಮಕ್ಕಳಿಗೆ ಓದುವ ಸ್ಪರ್ಧೆಗಿಂತ ಸಮಾಜವನ್ನು ಎದುರಿಸಲು ಬೇಕಾದ ಜಾಣ್ಮೆ ಸಾಮರ್ಥ್ಯವನ್ನು ನೀಡಬೇಕು. ಜೀವನದ ಕಲೆಯನ್ನು ಅನುಭವಿಸಲು ಸಾಧ್ಯವಾಗುವಂತಹ ಮೌಲ್ಯಗಳನ್ನು ನೀಡುವುದು ಅವಶ್ಯಕ ಎಂದು ಇಂಡಿ ಶಾಸಕರಾದ ಯಶವಂತರಾಯಗೌಡ ಪಾಟೀಲ ಹೇಳಿದರು.
ಪಟ್ಟಣದ ಮಾಡೆಲ್ ಪಬ್ಲಿಕ್ ಶಾಲೆಯ 10ನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿಯ ತಿಳಿವಳಿಕೆಯನ್ನು ಮಾಡೆಲ್ ಶಾಲೆಯು ಮಾಡುತ್ತಾ ಬಂದಿರುವುದು ತುಂಬಾ ಸಂತಸ ತಂದಿದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಇಂಡಿ ಉಲ್ಮಾ ಕಮಿಟಿ ಅಧ್ಯಕ್ಷ ಮುಫ್ತಿ ಅಬ್ದುಲ್ ರಹಿಮಾನ್ ಅರಬ ಮಾತನಾಡಿ, ಸಾಧಿಸುವ ಛಲ ಎಲ್ಲರಲ್ಲಿಯೂ ಆವಶ್ಯಕ. ಆದರೆ ತಮ್ಮ ಸಾಧನೆಯ ಸಮಯದಲ್ಲಿ ಸಂಕಷ್ಟದಲ್ಲಿರುವವರನ್ನು ರಕ್ಷಣೆ ಮಾಡುವುದೇ ನಿಜವಾದ ಸಾಧನೆ ಎಂದು ಹೇಳಿದರು.
ದಿವ್ಯ ಸಾನಿಧ್ಯ ಮೌಲಾನಾ ಶಾಕಿರ್ ಹುಸೇನ್ ಕಾಸ್ಮಿ, ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ, ಉರ್ದು ಸಿ ಆರ್ ಪಿ ಪರ್ವೇಜ್ ಪಟೇಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಾವೇದ್ ಮೋಮಿನ್,ಪುರಸಭೆ ಉಪಾಧ್ಯಕ್ಷ ಇಸ್ಮಾಯಿಲ್ ಅರಬ, ಸದಸ್ಯ ಅಯೂಬ್ ಬಾಗವಾನ, ಮುಸ್ತಾಕ್ ಅಹಮದ್ ಇಂಡೀಕರ, ಶಬ್ಬೀರ್ ಕಾಜಿ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಪ್ರಶಾಂತ ಕಾಳೆ, ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಅಫಜಲ್ ಹವಾಲ್ದಾರ, ಇಲಿಯಾಸ್ ಸುರತಿ, ಮುದಸ್ಸರ್ ಬಳಗಾನೂರ, ಹುಸೇನ್ ಬೇಪಾರಿ, ಇಲಿಯಾಸ್ ಬೋರಾಮಣಿ, ಹಮೀದ್ ಮುಲ್ಲಾ, ಫಯಾಜ್ ಬಾಗವಾನ, ಮಜೀದ್ ಸೌದಾಗರ, ಹಸನ್ ಮುಜಾವರ, ದಾದಾಹಯಾತ್ ನಾಯ್ಕೊಡಿ, ಮುಖ್ಯ ಶಿಕ್ಷಕ ರಫೀಕ್ ಜಾವೇದ್ ಮುಲ್ಲಾ, ಶಿಕ್ಷಕ ಸಲವಾದ್ದೀನ್ ನಾಗೂರ, ಮುಜೀಬ್ ಅಫಜಲಪುರ, ನಸಿರ್ ಇನಾಮದಾರ, ಅಬ್ದುಲ್ಲಾ ಪಟೇಲ್, ಜಮೀರ್ ಇಂಡೀಕರ, ನಬಿರಸೂಲ್ ಬಾಗವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.