ಅ.1 ರಂದು ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಗೌಡ ಪಾಟೀಲ ಅವರಿಗೆ ಸನ್ಮಾನ..!
ಇಂಡಿ : ಹ್ಯಾಟ್ರಿಕ್ ಗೆಲುವು ಸಾಧಿಸಿದ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಅವರಿಗೆ ಶ್ರೀ ಶ್ರೀ ಶ್ರೀ ಡಾ.ಪುರುಷೋತ್ತಮಾನಂದರು ದಿವ್ಯ ಸಾನಿಧ್ಯದಲ್ಲಿ, ತಾಲೂಕಿನ ಭಗೀರಥ ಸಮಾಜದಿಂದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಭಗೀರಥ ಮಹರ್ಷಿ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ ಕರಂಡೆ ಹಾಗೂ ಹಿರಿಯ ಮುಖಂಡ ಮಳಸಿದ್ದ ಬ್ಯಾಳಿ ಜಂಟಿ ಸುದ್ದಿಗೋಷ್ಠಿ ನಡೆಸಿ ಹೇಳಿದರು.
ಶುಕ್ರವಾರ ಪಟ್ಟಣದಲ್ಲಿ ಕರೆದ ಸುದ್ದಿ ಗೋಷ್ಠಿಯಲ್ಲಿ ಮಾತಾನಾಡಿದ ಅವರು, ಅಕ್ಟೋಬರ್-1 ಬೆಳಿಗ್ಗೆ 10 ಘಂಟೆಗೆ ತಡವಲಗಾ ಗ್ರಾಮದ ಜೋಡಗುಡಿ ಸಭಾಭವನದಲ್ಲಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಸಮುದಾಯದ ಎಸ್ ಎಸ್ ಎಲ್ ಸಿ ಹಾಗೂ ದ್ವೀತಿಯ ಪಿಯುಸಿಯಲ್ಲಿ ಪ್ರತಿಶತ 85 ಕ್ಕಿಂತಲೂ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹಾಗಾಗಿ ತಾಲೂಕಿನ ಉಪ್ಪಾರ ಸಮುದಾಯದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಶ್ರೀಶೈಲ ಸೊನ್ನ, ಸಂಜೀವ ಮೊಟಗಿ, ಸೋಮಶೇಖರ್ ಬ್ಯಾಳಿ, ಸೋಮಶೇಖರ್ ಸೊನ್ನ, ಚಂದ್ರಾಮ ಶಿವಪೂರ, ಅರವಿಂದ ಕಟ್ಟಿ ಉಪಸ್ಥಿತರಿದ್ದರು.