ಇಂಡಿ : ಅಂಗಡಿಯಲ್ಲಿ ಆಕಸ್ಮಿಕ ಅಗ್ನಿ ಅವಘಡದಿಂದ ಲಕ್ಷಾಂತರ ಮೌಲ್ಯದ ಯಂತ್ರೋಪಕರಣಗಳು ಹಾಗೂ ಸಾಗವಾನಿ ಕಟ್ಟಿಗೆ ಬೆಂಕಿಗಾಹುತಿ ಆಗಿರುವ ಘಟನೆ ಇಂಡಿ ಪಟ್ಟಣದ ಸ್ಟೇಷನ್ ರಸ್ತೆಯಲ್ಲಿ ನಡೆದಿತ್ತು. ಅವಘಡಕ್ಕೆ ಒಳಗಾಗಿ ಸಂಕಷ್ಟದಲ್ಲಿರುವ ವಿಶ್ವಕರ್ಮ ಸಮಾಜದ 5 ಸಾಗುವಾನಿ ಅಂಗಡಿ ಮಾಲಿಕರಿಗೆ ಶಾಸಕ ಯಶವಂತರಾಯಗೌಡ ಪಾಟೀಲ್ ಬೇಟಿಯಾಗಿ ಸ್ವಾಂತನ ಹೇಳಿ, ವ್ಯಯಕ್ತಿಕವಾಗಿ 1 ಲಕ್ಷ ರೂಪಾಯಿ ಧನ ಸಹಾಯ ಮಾಡಿದರು. ಅಪಾರ ಪ್ರಮಾಣದಲ್ಲಿ ಹಾನಿಯಾದ ಬಗ್ಗೆ ಸರಕಾರದಿಂದ ಬರುವ ನೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡುವೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಸಿಎಸ್ ಕುಲಕರ್ಣಿ, ಶೀವು ಬಡಿಗೇರ, ಸಂಗಪ್ಪ ಬಡಿಗೇರ, ಬಸವರಾಜ ಬಡಿಗೇರ, ಮಲ್ಲಿಕಾರ್ಜುನ ಪತ್ತಾರ, ಸಂತೋಷ ಬಡಿಗೇರ, ಧರ್ಮರಾಜ ವಾಲಿಕಾರ, ಜಾವೀದ ಮೋಮಿನ್, ಶೀವು ಬಿಸನಾಳ, ಸತೀಶ ಕುಂಬಾರ, ಶ್ರೀಕಾಂತ್ ಕುಡಿಗನೂರ ಇನ್ನೂ ಅನೇಕರು ಉಪಸ್ಥಿತರು.