ಗುಮ್ಮಟ ನಗರ ಶಾಸಕ ಯತ್ನಾಳ ಬ್ಯಾನರ್ ಕೆಸ್..ವಿಡಿಯೋ ಸಮೇತ..!
ವಿಜಯಪುರ: ಪ್ರವಾದಿ ಮಹಮ್ಮದ್ ಮೆರವಣಿಗೆಯಲ್ಲಿ ಅನ್ಯ ಕೋಮಿನ ಯುವಕರು ಶಾಸಕ ಯತ್ನಾಳ ಭಾವಚಿತ್ರ – ವಿರುವ ಬ್ಯಾನರ್ ಹರಿದಿದ್ದಾರೆ. ವಿಜಯಪುರ ನಗರದ ಶಿವಾಜಿ ಸರ್ಕಲ್‌ನಲ್ಲಿ ಶಾಸಕ ಯತ್ನಾಳ ಬ್ಯಾನರ್ ಅಳವಡಿಸಲಾಗಿದೆ. ಇನ್ನು ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಯುವಕರು ಹಸಿರು ಬಣ್ಣದ ಬಾವುಟದಿಂದ ಬ್ಯಾನರ್ ಗೆ ಚುಚ್ಚಿ, ಬ್ಯಾನರ್ ಹರಿದಿದ್ದಾರೆ. ಬ್ಯಾನರ್ ಗೆ ಬಾವುಟದಿಂದ ಚುಚ್ಚಿ ಯುವಕರು ಹರಿದ ವಿಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿ ಮೆರವಣಿಗೆಯಲ್ಲಿ ಭಾಗಿಯಾಗಿದ್ದವರನ್ನು ಚದುರಿಸಿದ ಗಾಂಧಿಚೌಕ್ ಪೊಲೀಸರು, ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.