ಉಡುತೊರೆ ಹಳ್ಳ ಜಲಾಶಯಕ್ಕೆ ಶಾಸಕ ಎಂ.ಆರ್ ಮಂಜುನಾಥ್ ಬೇಟಿ ನೀಡಿ ಪರಿಶೀಲನೆ
ವರದಿ: ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು: ತಾಲೂಕಿನ ಅಜ್ಜೀಪುರ ಉಡುತೊರೆ ಹಳ್ಳ ಜಲಾಶಯಕ್ಕೆ ಶಾಸಕ ಎಂ.ಆರ್.ಮಂಜುನಾಥ್ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಮಯದಲ್ಲಿ ಅಲ್ಲಿನ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಬೇಸಿಗೆ ಕಾಲದ ಸಮಯ ಇರುವಂತಹ ಕಾರಣದಿಂದ ನೀರಿನ ಅಭಾವವು ಉಂಟಾಗುವ ಸಾಧ್ಯತೆ ಇದ್ದು ನೀರು ಯಾವುದೇ ರೀತಿಯಲ್ಲಿ ಸೋರಿಕೆಯಾಗದಂತೆ ಕ್ರಮವಹಿಸಿ. ಉಡುತೊರೆ ಹಳ್ಳ ಜಲಾಯಶ ವ್ಯಾಪ್ತಿಗೆ ಬರುವಂತಹ ರೈತರಿಗೆ ಹಾಗೂ ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ತಮ್ಮ ಕೆಲಸವನ್ನು ನಿರ್ವಹಿಸಲು ಸೂಚನೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್ ಕರುಣಾಮಯಿ,ಗ್ರಾ. ಪಂ ಅಧ್ಯಕ್ಷ ಮುತ್ತುರಾಜು, ಸದಸ್ಯರಾದ ಗುರು,ಜಡೆಸ್ವಾಮಿ, ಕೃಷ್ಣ ಮೂರ್ತಿ, ಹೊನ್ನಪ್ಪ, ರೈತ ಮುಖಂಡರಾದ ರಫೀಕ್, ವಿಜಯ್ ಕುಮಾರ್,ಅಮ್ಜದ್ ಖಾನ್, ರಾಜಣ್ಣ,ಬಾಬು,ಬೈರಪ್ಪ,ಹಾಗೂ ಇನ್ನು ಮುಂತಾದವರು ಹಾಜರಿದ್ದರು.