ರಸ್ತೆ ತೇಪೆ ಕಾಮಗಾರಿ ಪರಿಶೀಲಿಸಿದ ಶಾಸಕ ಎಂ.ಆರ್ ಮಂಜುನಾಥ್
ಹನೂರು : ತಾಲ್ಲೂಕಿನ ಬಂಡಳ್ಳಿ ತೆರಳುವ ಮುಖ್ಯ ರಸ್ತೆ ಮಾರ್ಗ ಮಧ್ಯದಲ್ಲಿರುವ ಗುಂಡಿಗಳಿಗೆ ಹಾಕಲಾಗುತ್ತಿರುವ ತೇಪೆ ಕಾಮಗಾರಿಯನ್ನು ಶಾಸಕ ಎಂ.ಆರ್.ಮಂಜುನಾಥ್ ಪರಿಶೀಲಿಸಿದರು.
ಗುಂಡಿ ಬಿದ್ದಿರುವ ರಸ್ತೆಗೆ ತೇಪೆ ಕಾಮಗಾರಿ ಪ್ರಗತಿಯಲ್ಲಿ – ರುವುದರಿಂದ ಪರಿಶೀಲನೆ ನಡೆಸಿ ಅಧಿಕಾರಿಗಳು ಸ್ಥಳದಲ್ಲೇ ಇದ್ದು ಗುಣಮಟ್ಟದ ಕಾಮಗಾರಿ ನಡೆಸುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಂಜೇಶ್, ಮಹಾದೇವ ಸ್ವಾಮಿ, ಜಿ.ಎಮ್ ಮಾದೇಶ್ ಶ್ರಿ ರಂಗ , ಗೋಪಾಲ್ ನಾಯ್ಕ, ಬಂಡಳ್ಳಿ ಗ್ರಾಮದ ಅತಿಕ್, ಇನ್ನಿತರರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲೂಕು, ಚಾಮರಾಜನಗರ ಜಿಲ್ಲೆ.