ಹೊಲಿಗೆ ಯಂತ್ರ ವಿತರಿಸಿದ ಶಾಸಕ ಎಂಆರ್ ಮಂಜುನಾಥ್
ಹನೂರು: ಡಿ ದೇವರಾಜು ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಹಿಂದುಳಿದ ವರ್ಗಗಳ ಮಹಿಳೆಯರಿಗೆ ಪಿಡಬ್ಲ್ಯೂಡಿ ಅಥಿತಿ ಗೃಹದ ಮುಂಭಾಗ ಅರ್ಹ ಫಲಾನುಭವಿಗಳಿಗೆ 36 ಹೊಲಿಗೆ ಯಂತ್ರಗಳನ್ನು ಶಾಸಕ ಎಂ. ಆರ್ ಮಂಜುನಾಥ್ ವಿತರಣೆ ಮಾಡಿದರು.
ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿ ಡಿ ದೇವರಾಜ ಅರಸು ನಿಗಮದಿಂದ 36 ಹಿಂದುಳಿದ ವರ್ಗಗಳ ಮಹಿಳೆಗೆ 2023-24ನೇ ಸಾಲಿನಲ್ಲಿ ಹೊಲಿಗೆ ಯಂತ್ರವನ್ನು ನೀಡುತ್ತಿರುವುದರಿಂದ ಮಹಿಳೆಯರ ಆರ್ಥಿಕವಾಗಿ ಸ್ವಯಂ ಉದ್ಯೋಗದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳುವ ಮೂಲಕ,ಮಹಿಳೆಯರು ಹೊಲಿಗೆ ಯಂತ್ರವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯುವುದಕ್ಕೆ 180 ಜನ ಅರ್ಜಿ ಸಲ್ಲಿಸಿದ್ದು, ಅದರಲ್ಲಿ 36 ಮಂದಿ ಆಯ್ಕೆಯಾಗಿದ್ದಾರೆ. ಪ್ರವರ್ಗಗಳ ಅನುಸಾರವಾಗಿ ಕುರುಬ ಸಮುದಾಯಕ್ಕೆ 20 ವನ್ನಿಕುಲ ಕ್ಷತ್ರಿಯ ಸಮುದಾಯಕ್ಕೆ 9, ದೇವಾಂಗ ಸಮುದಾಯಕ್ಕೆ 3, ಬಣಜಿಗ ಸಮುದಾಯಕ್ಕೆ 3, 24 ಮನೆ ತೆಲುಗು ಶಟ್ರು ಸಮುದಾಯಕ್ಕೆ 1, ಹೊಲಿಗೆ ಯಂತ್ರವನ್ನು ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ವ್ಯವಸ್ಥಾಪಕರಾದ ಹೆ.ಚ್ ಶೋಭಾ, ಸಹಾಯಕ ಅಭಿವೃದ್ಧಿ ಅಧಿಕಾರಿಗಳಾದ ನಂಜುಂಡ ಸ್ವಾಮಿ,ಶಿವಣ್ಣ,ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ.