ಮನೆ ಮಂಜೂರಾತಿ ಆದೇಶ ಪ್ರತಿ ವಿತರಿಸಿದ ಶಾಸಕ ಎಂ ಆರ್ ಮಂಜುನಾಥ್
ಹನೂರು: ವಸತಿ ಫಲಾನುಭವಿಗಳು ನಿಗಧಿತ ಅವಧಿಯೊಳಗೆ ವಸತಿ ಕಟ್ಟಡ ಕಾಮಗಾರಿಯನ್ನು ಪ್ರಾರಂಭಿಸಿ ಸಾಕಾರಗೊಳಿಸಬೇಕೆಂದು ಶಾಸಕ ಎಂ.ಆರ್.ಮಂಜುನಾಥ್ ತಿಳಿಸಿದರು.
ತಾಲೂಕಿನ ಲೋಕ್ಕನಹಳ್ಳಿ ಗ್ರಾಮ ಪಂಚಾಯತಿ ಹಾಗೂ ಚಿಕ್ಕ ಮಾಲಾಪುರ ಗ್ರಾ. ಪಂ ವತಿಯಿಂದ ಲೋಕ್ಕನಹಳ್ಳಿ ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಬಸವ ವಸತಿ ಯೋಜನೆ ಯಡಿ ಮನೆ ಮಂಜೂರಾತಿ ಆದೇಶ ಪ್ರತಿ ವಿತರಿಸಿದರು.
ಶಾಸಕರು ಎಂ ಆರ್ ಮಂಜುನಾಥ್ ಮಾತನಾಡಿ
ಯಾರಿಗೆ ಮನೆ ಇಲ್ಲವೋ ಅವರನ್ನ ಗುರುತಿಸಿ ಪ್ರತಿ ಕುಟುಂಬವೂ ಸ್ವಂತ ಸೂರನ್ನು ಹೊಂದಬೇಕು ಎನ್ನುವ ಉದ್ದೇಶದಿಂದ ಸರ್ಕಾರ ವಿವಿಧ ಯೋಜನೆಯಡಿ ಮನೆಗಳನ್ನು ಮಂಜೂರು ಮಾಡಿದೆ. ಆದ್ದರಿಂದ ಆಯ್ಕೆಯಾಗಿರುವ ಫಲಾನುಭವಿಗಳು ನಿಗದಿತ ಅವಧಿಯೊಳಗೆ ಮನೆ ನಿರ್ಮಾಣ ಕಾಮಗಾರಿ ಆರಂಭಿಸ ಬೇಕು. ಈ ಯೋಜನೆಯಡಿ ಜಿಪಿಎಸ್ ಮೂಲಕ ಅಡಿಪಾಯ, ಗೋಡೆ, ಛಾವಣಿ ಹಾಗೂ ಮನೆ ಪೂರ್ಣಗೊಂಡ 4 ಹಂತಗಳಲ್ಲಿ ಸರ್ಕಾರದಿಂದ ಸಹಾಯ ಧನ ಸಿಗಲಿದೆ. ಆದ್ದರಿಂದ ಇದರ ಪ್ರಯೋಜನ ಪಡೆದುಕೊಂಡು ಶೀಘ್ರ ಮನೆ ನಿರ್ಮಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಸರ್ಕಾರ ವಸತಿ ಯೋಜನೆಯಡಿ ಪ.ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ 2 ಲಕ್ಷ ಅನುದಾನ ಜೊತೆಗೆ ನರೇಗಾ ಯೋಜನೆಯಡಿ 90 ಮಾನವ ದಿನಗಳು 28,440 ರೂ ಒಟ್ಟು 2.28,440 ರೂ .ಸಿಗುತ್ತದೆ. ಸಾಮಾನ್ಯರಿಗೆ 1.20 ಲಕ್ಷ ರೂ. ಅವರಿಗೂ ನರೇಗಾದಡಿ 90 ಮಾನವ 28,440 ರೂ . ಸೇರಿ 1,48,440 ಲಕ್ಷ ರೂ.ಗಳು ಪಡೆಯಬಹುದು.ನರೇಗಾ ಯೋಜನೆಯಡಿ ಅನುದಾನ ಪಡೆದು ಪ್ರತಿ ಯೊಬ್ಬರೂ ಶೌಚ ಗೃಹ ಹೊಂದಬೇಕು ಎಂದು ತಿಳಿಸಿದರು. ಆಗಾಗಿ ಮನೆ ದೊರೆತಿರುವ ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳುವಂತೆ ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್ ತಿಳಿಸಿದರು.
ಕಾರ್ಯಕ್ರಮದಲ್ಲಿ ದೇಶದಲ್ಲಿಯೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದಲ್ಲಿ ಅನುಷ್ಠಾನಕ್ಕೆ ತರಲಾಗಿರುವ ವ್ಯಾಟ್ಸಾಪ್ ಮೂಲಕ ಮಾಹಿತಿಯ ಆರ್.ಡಿ.ಪಿ.ಆರ್. ಯನ್ನು ಬಿಡುಗಡೆಗೊಳಿಸಿದರು. ಬೇಸಿಗೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗ್ರತೆ ಕ್ರಮ ವಹಿಸಿದೆ. ಆ ನಿಟ್ಟಿನಲ್ಲಿ ಸರ್ಕಾರದ ವಾಟ್ಸಾಫ್ ಸಹಾಯವಾಣಿ 08224-200134 ಗೆ ಮೆಸೇಜ್ ಮಾಡಿ ಸಮಸ್ಯೆ ಇತ್ಯಾರ್ಥ ಪಡಿಸಿಕೊಳ್ಳುವಂತೆ ಇಓ ಉಮೇಶ್ ತಿಳಿಸಿದರು.
ಇದೇ ಸಂದರ್ಭದಲ್ಲಿ , ನೋಡಲ್ ಅಧಿಕಾರಿ ತಾಲ್ಲೂಕು ಪಂಚಾಯತಿ ಸತೀಶ್,ಎ ಇ ಇ ಹರೀಶ್, ಒಳಚರಂಡಿ ಹಾಗೂ ಕುಡಿಯುವ ನೀರು ಇಲಾಖೆಯ ಪೂರ್ಣಿಮಾ
ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳಾದ ನಾಗೇಶ್,ಚಾಮಮ್ಮ, ಉಪಾಧ್ಯಕ್ಷರುಗಳಾದ ನಂದಿನಿ,ಚೆನ್ನಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್, ಕಾರ್ಯದರ್ಶಿ ವೆಂಕಟೇಶ್ ಹಾಗೂ ಸದಸ್ಯರುಗಳು ಲೋಕ್ಕನಹಳ್ಳಿ ಹಾಗೂ ಚಿಕ್ಕ ಮಾಲಾಪುರ ಗ್ರಾಮಸ್ಥರು ಹಾಜರಿದ್ದರು.
ವರದಿ: ಚೇತನ್ ಕುಮಾರ್ ಎಲ್, ಹನೂರು ತಾಲ್ಲೂಕು, ಚಾಮರಾಜನಗರ ಜಿಲ್ಲೆ