ಅರಣ್ಯ ಇಲಾಖೆಯ ವಿರುದ್ದ ಗ್ರಾಮಸ್ಥರ ಪ್ರತಿಭಟನೆ ಸ್ಥಳಕ್ಕೆ ಶಾಸಕ ಎಂ ಆರ್ ಮಂಜುನಾಥ್ ಬೇಟಿ
ವರದಿ : ಚೇತನ್ ಕುಮಾರ್ ಎಲ್,ಚಾಮರಾಜನಗರ
ಹನೂರು :ಪೂರ್ವಿಕರ ಕಾಲದಿಂದಲು ನಾವುಗಳೆ ಇದೇ
ನಾಲ್ ರೋಡ್ ಸಮೀಪದ ಜಾಗದಲ್ಲಿ ವಾಸವಿದ್ದು ನಮಗೆ ಅರಣ್ಯ ಇಲಾಖೆಯವರು ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ ಎಂದು ಗ್ರಾಮಸ್ಥರು ಪ್ರತಿಭಟನೆಯನ್ನು ಮಾಡಿದರು .ಮತ್ತೆ ಕೆಲವು ಜನರು ನಮಗೆ ಅಂಗಡಿ ತೆರೆಯಲು ನಮಗೂ ಅವಕಾಶ ಕೊಡಿ ಇದು ನಮ್ಮ ಜಾಗ ಎಂದು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿದರು .
ವಿಷಯ ತಿಳಿದ್ದ ನಂತರ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು .
ಪ್ರತಿಭಟನಾಕಾರರು ಕುರಿತು ಮತನಾಡಿದ ಶಾಸಕರಾದ ಎಂ ಆರ್ ಮಂಜುನಾಥ್ ನಾನು ಈಗಾಗಲೇ ಸ್ಥಳವನ್ನು ಪರಿಶೀಲನೆ ಮಾಡಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸುತ್ತೇನೆ ಆ ಸ್ಥಳ ಕಂದಾಯ ಇಲಾಖೆ ವ್ಯಾಪ್ತಿಗೆ ಬರುತ್ತದೊ ಅಥವಾ ಅರಣ್ಯ ಇಲಾಖೆಗೆ ಬರುತ್ತಾ ಎಂದು ತಿಳಿದು ಸಮಸ್ಯೆಯನ್ನು ಬಗೆಹರಿಸುತ್ತೇನೆ ಎಂದು ತಿಳಿಸಿದರು.ಆದರೆ ನಿಮ್ಮೆಲ್ಲರಿಗೂ ಮನೆ ನಿರ್ಮಾಣ ಮಾಡಲು ಕುರಿತು ಸ್ಥಳ ಇಲ್ಲದೆ ಇರುವ ಕುಟುಂಬಕ್ಕೆ ಸ್ಥಳ ಗುರುತಿಸಿ ಸರ್ಕಾರಿ ಅನುದಾನ ನೀಡಿ ಮನೆ ನಿರ್ಮಾಣ ಮಾಡವ ಚಿಂತನೆಯಲ್ಲಿ ಇದ್ದೇವೆ ಇದಕ್ಕೆ ಸ್ವಲ್ಪ ದಿನ ಕಾಲಾವಕಾಶ ಕೋಡಿ ಎಂದು ಮೌಖಿಕವಾಗಿ ತಿಳಿಸಿದರು .
ಶಾಸಕರ ಮಾತಿಗೆ ಸ್ಪಂದಿಸಿದ ಗ್ರಾಮಸ್ಥರು ಪ್ರತಿಭಟನೆಯನ್ನು ಕೈಬಿಟ್ಟರು .
ಇದೇ ಸಂದರ್ಭದಲ್ಲಿ ರಾಮಾಪುರ ಇನ್ಸ್ಪೆಕ್ಟರ್ ಶೇಷಾದ್ರಿ, ಅರಣ್ಯ ಇಲಾಖೆಯ ಅಧಿಕಾರಿ ಮಾದೇಶ್, ಉಪತಹಸೀಲ್ದಾರ್ ಸುರೇಖಾ, ಗ್ರಾಮ ಅಭಿವೃದ್ಧಿ ಅಧಿಕಾರಿ ಸುರೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.