ಇಂಡಿ : ಬೆನ್ನುಹುರಿ ತೊಂದರೆಯಿಂದ ಬಳಲಿ ನಿಶ್ಚಲ ಸ್ಥಿತಿಯಲ್ಲಿರುವ ವಿಕಲಚೇತನರ ಮನೆಗೆ ಬೇಟಿ ನೀಡಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ಶಾಸಕ ಯಶವಂತರಾಯಗೌಡ ಪಾಟೀಲ ಅವರು ಮಾಡಿದರು. ಇಂಡಿಯ ಪಾರ್ಶನಾಥ ಮಂದಿರದ ಬಡಾವಣೆಯಲ್ಲಿರುವ ಬೆನ್ನುಹುರಿ ತೊಂದರೆಯಿಂದ ಬಾಧಿತನಾದ ವಿಕಲಚೇತನ ರಾಮಕುಮಾರ ಮಲ್ಲಪ್ಪ ಒಡೆಯರ ಅವರ ಮನೆಗೆ ಬೇಟಿ ನೀಡಿ ಹೀಗೆ ಬೆನ್ನುಹುರಿಯಿಂದ ತೊಂದರೆಗೊಳಗಾಗಿ ಚಲಿಸದ ಸ್ಥಿತಿಯಲ್ಲಿರುವ ವಿಕಲಚೇತನರ ಬದುಕು ದುರ್ಭರ.

ಮತ್ತೊಬ್ಬರ ಸಹಾಯವಿಲ್ಲದೇ ಕುಳಿತ ಜಾಗದಿಂದ ಬೇರೆ ಕಡೆ ಹೋಗದ ಸ್ಥಿತಿಯಲ್ಲಿರುವ ಹೋಗಬೇಕೆಂದರೂ ಮತ್ತೊಬ್ಬರ ಸಹಾಯ ಅಗತ್ಯತೆ ಇದೆ. ಅಂಥ ಸ್ಥಿತಿಯಲ್ಲಿರುವ ದಿವ್ಯಾಂಗರಿಗೆ ಸುತ್ತಮುತ್ತಲಿನವರ ಮಾನವೀಯ ಸಹಕಾರ ಅತ್ಯಗತ್ಯ, ನಿಮ್ಮ ಜೊತೆಗೆ ನಾವಿದ್ದೇವೆ ಎಂದರು. ಇಂಥ ಬೆನ್ನುಹುರಿಯಿಂದ ತೊಂದರೆಗೊಳಗಾಗಿ ೮೦% ಕ್ಕಿಂತ ಹೆಚ್ಚು ವಿಕಲಚೇತನತೆ ಹೊಂದಿರುವ ೧೮ಕ್ಕೂ ಹೆಚ್ಚು ಜನ ವಿಕಲಚೇತನರು ತಾಲ್ಲೂಕಿನಲ್ಲಿದ್ದು ಅವರಿಗೆ ಸರ್ಕಾರದಿಂದ ಸಿಗುವ ಅಗತ್ಯ ನೆರವು ಕಲ್ಪಿಸಲು ಸಿದ್ಧರಿದ್ದೆವೆ ಸಹಾಯ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಬರಗುಡಿ ಗ್ರಾಮದ ಸೋಮಲಿಂಗೌಡ ಪಾಟೀಲ್, ಅಪ್ಪಶಾ ಪಟೇಲ್, ಪಡನೂರಿನ ಪಿಕೆಪಿಎಸ್ ನಿರ್ದೇಶಕರಾದ ಸಂಜೀವ ಶೆಂಡಗಿ, ಆಳೂರ ಗ್ರಾಮದ ಮಾಸಿದ್ದ ಒಡೆಯರ ಉಪಸ್ಥಿತರಿದ್ದರು.