ರಾಯಚೂರು: ಡಾ.ಶಿವರಾಜ್ ಪಾಟೀಲ್ ಅವರು ಇಷ್ಟೊಂದು ದುರ್ಬಲತೆ ಉಳ್ಳುವರು, ಅಜ್ಞಾನಿಗಳು ಎಂದು ಭಾವಿಸಿರಲಿಲ್ಲ. ಓರ್ವ ಶಾಸಕ, ಎದುರಾಳಿಗಳಿಗೆ ಇಷ್ಟೆಲ್ಲಾ ಅವಗುಣಗಳನ್ನು ತೋರಿಸಿದ್ದಾನೆ. ಅಸಂವಿಧಾನಿಕ ಭಾಷೆ ಬಳಸಿದ್ದಲ್ಲದೆ, ಮುತ್ತಿಗೆ ಹಾಕಿದ್ದೇವು ಎಂದು ಹೇಳುವ ಮೂಲಕ ಸದನದಲ್ಲಿ ತನ್ನ ಪೆದ್ದುತನ ತೋರಿಸಿರುವುದು ಇಲ್ಲಿನ ಹೋರಾಟಗಾರರಿಗೆ ದಿಕ್ಕುತೋಚದಂತೆ ಮಾಡಿದ್ದಾರೆಂದು ಜೆಡಿಎಸ್ ಮುಖಂಡರಾದ ರಾಮನಗೌಡ ಏಗನೂರು ಅವರು ಆರೋಪಿಸಿದ್ದಾರೆ.
ನ್ಯಾಯಾಲಯದಲ್ಲಿರುವ ಒಂದು ದಾವೆಯ ವಿರುದ್ಧ ಅಸಂವಿಧಾನಿಕ ಹೇಳಿಕೆ ಅದರಲ್ಲೂ ಸದನದಲ್ಲಿ ನೀಡುತ್ತಾನೆ ಎಂದರೆ ವಿಷಾದ. ನವೋದಯ ಶಿಕ್ಷಣ ಸಂಸ್ಥೆಯ ನಡೆಯನ್ನು ದಾಖಲಾತಿಗಳೊಂದಿಗೆ ಸದನದಲ್ಲಿ ಖಂಡಿಸಬೇಕಿತ್ತು. ಅದು ಬಿಟ್ಟು ಬಾಯಿಗೆ ಬಂದ ಹಾಗೆ ಮಾತನಾಡಿದ್ದು ಖೇದಕರ ಸಂಗತಿ. ನವೋದಯ ಶಿಕ್ಷಣ ಸಂಸ್ಥೆ ನಮ್ಮ ನೆಲದಲ್ಲಿದ್ದಕೊಂಡು ಕಲ್ಯಾಣ ಕರ್ನಾಟಕದ ವಿಶೇಷ ಮೀಸಲಾತಿಯನ್ನು ಸಂವಿಧಾನದ ೩೦ (೧) ಪ್ರಕಾರ ಪಾಪನೆ ಮಾಡಲ್ಲ ಆಗುವುದಿಲ್ಲ ಎಂದು ಹೇಳಿ ನ್ಯಾಯಲಯದಲ್ಲಿ ದಾವೆ ಹೂಡಿದ್ದನ್ನು ಶಾಸಕ ಡಾ.ಶಿವರಾಜ ಪಾಟೀಲ್ ೩೭೧ (ಜೆ) ವಿಶೇಷ ಮೀಸಲಾತಿ ಅನುಷ್ಠಾನಗೊಳಿಸಲೇಬೇಕು ಹೇಗೆ ಎಂದು ಮಾತನಾಡಬೇಕಿತ್ತು.
ವೈದ್ಯಕೀಯ ಸಚಿವರಿಗೆ ದಾಖಲೆ ನೀಡಿ, ಮುಖ್ಯಮಂತ್ರಿ ಮೂಲಕ ಕೂಡಲೇ ನವೋದಯ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಿ. ಇಲ್ಲವೇ, ಆ ಶಿಕ್ಷಣ ಸಂಸ್ಥೆಯನ್ನು ರಾಜ್ಯದಿಂದ ಹೊರಹಾಕಿ ಎಂದು ಆಗ್ರಹಪಡಿಸಬೇಕಿತ್ತು. ಅದು ಬಿಟ್ಟು ಮುತ್ತಿಗೆ ಹಾಕಿ ಸೀಟು ಕೊಡ್ಸಿದೆ ಎಂದು ಸದನದಲ್ಲಿ ಗೂಂಡಗಳು ನಾವು ಎಂದು ಹೇಳಿದಂತೆ ಇದೆ. ಶಿವರಾಜ ಪಾಟೀಲ್‌ರು ಸರಳ ಜ್ಞಾನ ಇಲ್ಲದವರು ಎನ್ನುವುದಕ್ಕೆ ನಮ್ಮ ಅಧಿಕಾರಿಗಳ ತಪ್ಪು ಕೂಡ ಇದೆ ಎಂದು ಹೇಳುತ್ತಾರೆ.
ಒಂದು ಕಡೆ ಮುತ್ತಿಗೆ ಹಾಕಿದ್ದೇವೆ, ಇನ್ನೊಂದು ಕಡೆ ಅಧಿಕಾರಿಗಳ ತಪ್ಪಿದೆ ಎಂದು ಹೇಳುವಾಗ ಯಾವ ಮಾನದಂಡ ಅನುಸರಿಸಿದ್ದಾರೆ ಇವರು?.
ಸ್ವತಃ ಆಡಳಿತ ಪಕ್ಷದ ಶಾಸಕ ತನ್ನ ದೌರ್ಬಲ್ಯ ತೋರಿಸಿದಂತೆ ಅಲ್ಲವೇ ಇದು?. ಇತ್ತ ಕಡೆ ದಂಗೆ ಮಾಡಲು ಹೇಳಿ, ಅತ್ತ ಕಡೆ ಗೂಂಡಗಳು ನಾವು ಎಂದು ಹೇಳಿದಂತೆ ಅಲ್ಲವೇ? ಇದು ಎಸ್.ಆರ್.ರೆಡ್ಡಿಗೆ ಅನುಕೂಲಕರ ಅಲ್ಲವೇ?. ಒಂದು ಶಿಕ್ಷಣ ಸಂಸ್ಥೆಯ ವಿರುದ್ಧ ಕಾನೂನು, ಕಟ್ಟಳೆಯ ಚೌಕಟ್ಟಿನಲ್ಲಿ ಮಾತನಾಡದೇ ನ್ಯಾಯಲಯದ ಕಟಕಟೆಯಲ್ಲಿರುವ ದಾವೆಯ ಬಗ್ಗೆ ಅಸಂಬದ್ಧ ಹೇಳಿಕೆ ನೀಡೋದು?, ೩೭೧ (ಜೆ) ತಿದ್ದುಪಡಿಗೆ ಒಳಪಡಿಸುವುದಾದರೆ ಕಾನೂನಾತ್ಮಕ ಸಲಹೆ ನೀಡಬೇಕು. ಸರ್ಕಾರದ ವೈದ್ಯಕೀಯ ಶಿಕ್ಷಣ ಸಚಿವರಿಗೆ, ಮುಖ್ಯಮಂತ್ರಿಗಳ ಮೂಲಕ ನವೋದಯ ಶಿಕ್ಷಣ ಸಂಸ್ಥೆಯ ವಿರುದ್ಧ ತಕ್ಷಣದ ಕ್ರಮಕ್ಕೆ ಆಗ್ರಹಿಸಬೇಕಿತ್ತು. ಆದರೆ, ಓರ್ವ ಅನಾಗರಿಕನ ರೀತಿ ಮಾತನಾಡಿ ರಾಯಚೂರಿನ ಮರ್ಯಾದೆ ತೆಗೆದಿದ್ದಾರೆಂದು ಆರೋಪಿಸಿದ್ದಾರೆ.