ಇಂಡಿಯಲ್ಲಿ ಮಿಸ್ಡ ಕಾಲ್ ಅಂದೋಲನ್..! ಹೂಗಾರ
ಇಂಡಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಬಹುದೊಡ್ಡ ಲಕ್ಷö್ಯ ಸಾದಿಸಲು ಶಿಕ್ಷಣ ಇಲಾಖೆ ಅರ್ಹನಿಷಿ ಪ್ರಯತ್ನಿಸುತ್ತಿದೆ. ಅದಕ್ಕಾಗಿ ತಾಲೂಕಿನಲ್ಲಿ ಮಿಸ್ಡ ಕಾಲ್ ಅಂದೋಲನ ಮತ್ತು ಶಿಕ್ಷಕರ ಬೀಟ್ ವ್ಯವಸ್ಥೆ ಶುರು ಮಾಡಿಲಾಗಿದೆ ಎಂದು ಎಸ್ಸೆಸ್ಸೆಲ್ಸಿ ಪರೀಕ್ಷೆ ನೋಡಲ್ ಅಧಿಕಾರಿ ಎ.ಓ.ಹೂಗಾರ ಹೇಳಿದರು.
ತಾಲೂಕಿನ ನಾದ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸುವ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎಸ್.ಅಲಗೂರ ಮಾತನಾಡಿ, ಇಂಡಿ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಸಮರೋಪಾದಿಯಾಗಿ ವಿಭಿನ್ನ ಕಾರ್ಯಾಗಾರ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳ ಮನೋಸ್ಥೆöÊರ್ಯ ಹೆಚ್ಚಿಸಿ ಸಾಮಾನ್ಯ ವಿದ್ಯಾರ್ಥಿಯೂ ಸುಲಭವಾಗಿ ಪರೀಕ್ಷೆ ಎದುರಿಸಲು ತರಬೇತಿ ನೀಡಲಾಗುತ್ತಿದೆ ಎಂದರು.
ನಾದ ಪ್ರೌಢಶಾಲೆಯ ಮುಖ್ಯ ಗುರು ಚಿದಂಬರ ಬಂಡಗರ ಮಾತನಾಡಿ, ಪೋಷಕರು ಮತ್ತು ಹಳ್ಳಿಗಳಲ್ಲಿ ಇದರ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಬಿಲೋ ಎವರೇಜ್ ವಿದ್ಯಾರ್ಥಿಗಳಿಗೆ ಪಾಸಿಂಗ್ ಪ್ಯಾಕೇಜ ಸಿದ್ದಪಡಿಸಲಾಗುತ್ತಿದ್ದು ಶಾಲೆಯ ಮುಖ್ಯ ಶಿಕ್ಷಕರು ವಿದ್ಯಾರ್ಥಿಗಳ ಪೋಷಕರಿಗೆ ಬೆಳಗ್ಗೆ ೫ ಗಂಟೆಗೆ ಸಂಜೆ ೮ ಗಂಟೆಗೆ ಮೋಬೈಲ ಮೂಲಕ ವಿದ್ಯಾರ್ಥಿಯ ಅಭ್ಯಾಸದ ಬಗ್ಗೆ ಗಮನ ನೀಡಲಾಗುತ್ತಿದೆ ಎಂದರು.
ವಿಜ್ಞಾನ ವಿಷಯವನ್ನು ಮಕ್ಕಳಿಗೆ ಹೇಗೆ ಸರಳವಾಗಿ ಅರ್ಥೈಸಿಕೊಳ್ಳುವಂತೆ ಮಕ್ಕಳಿಗೆ ಬೋಧಿಸುವ ಕುರಿತು ಚರ್ಚಿಸಲಾಯಿತು.
ತಂದೆ ತಾಯಿಯರ ಸಭೆ ಮಾಡಿ ಜವಾದ್ಬಾರಿ ಕುರಿತು ಮತ್ತು ಮಕ್ಕಳಿಗೆ ಶಿಕ್ಷಣ ಕುರಿತು ಅಭ್ಯಾಸದ ಚರ್ಚಿಸಿದರು.
ಕಾರ್ಯಕ್ರಮದಲ್ಲಿ ವಿಜ್ಞಾನ ಶಿಕ್ಷಕಿ ಶಶಿಕಲಾ ಬಡಿಗೇರ, ಅಂಜನೇಯಸ್ವಾಮಿ, ಸಂಗನಗೌಡ ಹಚಡದ, ಅಣ್ಣಾರಾಯ ಗುಗದಡ್ಡಿ, ರಾಮಚಂದ್ರ ಬಿರಾದಾರ, ರೇಖಾ ನಾಗಠಾಣ, ಅನಿತಾ ಅರಳಗುಂಡಗಿ ಮತ್ತಿತರಿದ್ದರು.
ಇಂಡಿ: ತಾಲೂಕಿನ ನಾದ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಕರಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಹೆಚ್ಚಿಸುವ ಕುರಿತು ನಡೆದ ತರಬೇತಿ ಕಾರ್ಯಕ್ರಮದಲ್ಲಿ ಎ.ಓ.ಹೂಗಾರ ಮಾತನಾಡಿದರು.


















