ಗ್ರಾಮಾಡಳಿತ ಅಧಿಕಾರಿಗಳಿಗೆ ಕ್ರೋಮ್ ಬುಕ್ ವಿತರಿಸಿದ ಸಚಿವ ಶಿವಾನಂದ
ವಿಜಯಪುರ : ಕಂದಾಯ ಇಲಾಖೆಯ ಆಯುಕ್ತಾಲಯ ತನ್ನ ಇಲಾಖೆಯಲ್ಲಿ ಡಿಜಿಟಲ್ ಆಡಳಿತಕ್ಕಾಗಿ ನೀಡಿರುವ ಕ್ರೋಮ್ ಬುಕ್ ಗಳನ್ನು ಜವಳಿ, ಕೃಷಿ ಮಾರುಕಟ್ಟೆ, ಸಕ್ಕರೆ ಮತ್ತು ಕಬ್ಬು ಅಭಿವೃದ್ಧಿ ಸಚಿವರಾದ ಶಿವಾನಂದ ಪಾಟೀಲ ಅವರು ಗ್ರಾಮ ಆಡಳಿತಾಧಿಕಾರಿಗಳಿಗೆ ವಿತರಿಸಿದರು.
ತಾವು ಪ್ರತಿನಿಧಿಸುವ ಬಸವನಬಾಗೇವಾಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ನಿಡಗುಂದಿ ಹಾಗೂ ಕೊಲ್ಹಾರ ತಾಲೂಕಗಳ ಗ್ರಾಮ ಆಡಳಿತಾಧಿಕಾರಿಗಳಿಗೆ ನಗರದಲ್ಲಿರುವ ಗೃಹ ಕಛೇರಿಯಲ್ಲಿ ಕ್ರೋಬ್ ಬುಕ್ ವಿತರಿಸಿದರು. ಬಸವನಬಾಗೇವಾಡಿ ತಾಲೂಕಿನ ಗ್ರಾಮ ಆಡಳಿತಾಧಿಕಾರಿಗಳಿಗೆ ಈಗಾಗಲೇ ಕ್ರೋಮ್ ಬುಕ್ ವಿತರಿಸಲಾಗಿದೆ.
ಕಿರು ಲ್ಯಾಪ್‍ಟ್ಯಾಪ್ ಸದರಿ ಕ್ರೋಮ್ ಬುಕ್‍ಗಳಲ್ಲಿ ಕಂದಾಯ ಇಲಾಖೆಯಿಂಧ ನಡೆಸುವ ಬಗರ ಹುಕುಂ, ಬೆಳೆ ಸಮೀಕ್ಷೆ, ಕೆ-ಜೆಐಸಿ, ಡಿಬಿಟಿ ಆ್ಯಪ್ ಹಾಗೂ ಭೂಮಿ, ಅಟಲ್ ಜೀ ಜನಸ್ನೇಹಿ, ಇ-ಆಫೀಸ್ ಸೇರಿದಂತೆ ಇತರೆ ತಂತ್ರಜ್ಞಾನ ಅಳವಡಿಸಲಾಗಿದೆ.
ಈ ಸಂದರ್ಭದಲ್ಲಿ ನಿಡಗುಂದಿ ತಹಸೀಲ್ದಾರ ಅಮರವಾಡಗಿ, ಕೊಲ್ಹಾರ ತಹಸೀಲ್ದಾರ ನಾಯ್ಕಲಮಠ ಸೇರಿದಂತೆ ಉಭಯ ತಾಲೂಕಗಳ ಗ್ರಾಮ ಆಡಳಿತಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.