Voiceofjanata.in : Sports News : IPL 2024 :
MI Vs GJ : IPL 2024
ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಗೆ ನಿರಾಸೆ ಮೂಡಿಸಿದ ಗುಜರಾತ್ ಟೈಟನ್ಸ್
DESK NEWS : ಹದಿನೇಳನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ತಂಡ ಶುಭಾರಂಭ ಮಾಡಿದ್ದು, ಭಾನುವಾರ (ಮಾರ್ಚ್ 24) ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಐದು ಬಾರಿಯ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ಎದುರು 6 ರನ್‌ಗಳ ರೋಚಕ ಜಯ ದಾಖಲಿಸಿದೆ. ಹಾವು ಏಣಿ ಆಟದಂತೆ ಸಾಗಿಬಂದ ಪಂದ್ಯದಲ್ಲಿ ಗೆಲುವು ಯಾರ ಪಾಲಿಗಾದರೂ ಒಲಿಯುವಂತ್ತಿತ್ತು. ಕೊನೆಗೆ ಅಂತಿ ಓವರ್‌ಗಳ ಕಾದಾಟದಲ್ಲಿ ಒತ್ತಡ ನಿಭಾಯಿಸಿದ ಟೈಟನ್ಸ್ ಗೆಲುವಿನ ನಗೆ ಬೀರಿತು.
ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡ ರನ್ ಚೇಸ್ ಆಯ್ಕೆ ಮಾಡಿಕೊಂಡಿತ್ತು. ಅಂತೆಯೇ 169 ರನ್‌ಗಳ ಸವಾಲಿನ ಗುರಿ ಬೆನ್ನತ್ತಿ ಕೊನೇ ಓವರ್‌ನಲ್ಲಿ ಕೇವಲ 6 ರನ್ ಅಂತರದ ವೀರೋಚಿತ ಸೋಲನುಭವಿಸಿತು.
ಜಿದ್ದಾಜಿದ್ದಿನ ಪೈಪೋಟಿ ನಡುವೆ ಒತ್ತಡ ನಿಭಾಯಿಸಿದ ಗುಜರಾತ್ ಟೈಟನ್ಸ್ ತಂಡ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು 6 ರನ್‌ಗಳ ಜಯ ದಾಖಲಿಸುವ ಮೂಲಕ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಹಾವು ಏಣಿ ಆಟದಂತೆ ಸಾಗಿಬಂದಿದ್ದ ಪಂದ್ಯದಲ್ಲಿ ಗೆಲುವು ಯಾರ ಪಾಲಿಗಾದರೂ ಒಲಿಯುವಂತ್ತಿತ್ತು. ಆದರೆ, ಕೊನೇ ಓವರ್‌ನಲ್ಲಿ ಒತ್ತಡ ನಿಭಾಯಿಸಿದ ಗುಜರಾತ್ ಟೈಟನ್ಸ್ ತಂಡ ಗೆಲುವಿನ ನಗೆ ಬೀರಿತು.
ಕೊನೆಗೆ 20 ಓವರ್‌ಗಳ ಮುಕ್ತಾಯಕ್ಕೆ ಮುಂಬೈ ಇಂಡಿಯನ್ಸ್ ತಂಡ 9 ವಿಕೆಟ್ ನಷ್ಟದಲ್ಲಿ 162 ರನ್ ಮಾತ್ರವೇ ಗಳಿಸಲು ಶಕ್ತವಾಗಿ ಸೋಲಿಗೆ ಶರಣಾಯಿತು.