ಮುದಗಲ್ : ಸಮೀಪದ ಮಟ್ಟೂರು ಗ್ರಾಮ ಹಾಗೂ ವ್ಯಾಪ್ತಿಯಲ್ಲಿ ಮೆಟ್ಲಿಂಗ್ ( ರಸ್ತೆ) ಹಾಗೂ ಸಿಡಿ ಕಾಮಗಾರಿ ನಡೆಯುತ್ತಿದ್ದು, ಯೋಜನೆಯಂತೆ ಕಾಮಗಾರಿ ಮಾಡದೇ ಸಂಪೂರ್ಣ ಕಳಪೆ ಮಟ್ಟದಲ್ಲಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಮಟ್ಪೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೆಡೆದಿರುವ ಹೆಚ್ಚುವರಿ ಯೋಜನೆಡಿಯಲ್ಲಿ ಮೆಟ್ಲಿಂಗ್ ಹಾಗೂ ಸಿಡಿ ನಿರ್ಮಾಣದ ಕೆಲಸಕ್ಕೆ ಕಳಪೆ ಮಟ್ಟದ ಮಣ್ಣು ಉಯೋಗಿಸಲಾಗಿದೆ. ಗುಣ ಮಟ್ಟದ ಕಾಮಗಾರಿ ನಿಯಮಗಳನ್ನು ಉಲ್ಲಂಘಿಸಿ ರಸ್ತೆ ಕೆಲಸ ಮಾಡುತ್ತಿದ್ದಾರೆ.
ಈ ಸಂಬಂಧ ಈಗಾಗಲೇ ಕಾಮಗಾರಿ ಕುರಿತು ಇಲಾಖೆ ಎಂಜಿನೀಯರ್ ಗಮನಕ್ಕೆ ತರಲಾಗಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ಕೇಳಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ. ಮಟ್ಟೂರು ಭಾಗದಲ್ಲಿ ಕಳಪೆ ಕಾಮಗಾರಿಗಳು ಹೆಚ್ಚಾಗಿದ್ದು, ಸರಕಾರದ ಹಣ ವ್ಯರ್ಥವಾಗುತ್ತಿದೆ. ಈ ಬಗ್ಗೆ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳ ಗಮನಹರಿಸಿ ತಪ್ಪಿತಸ್ಥರ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಂಡು ಉತ್ತಮ ರಸ್ತೆ ನಿರ್ಮಾಣ ಮಾಡಬೇಕು ಎಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ. ಈಗಾಗಲೇ ಮೆಟ್ಲಿಂಗ್ ಹಾಗೂ ಸಿಡಿ ಕಾಮಗಾರಿ ಕಳಪೆ ಮಟ್ಟದಿಂದ ಕೂಡಿದ್ದರೂ ಒಂದು ಮೆಟ್ಲಿಂಗ್ ಕೆಲಸಕ್ಕೆ 10 ಲಕ್ಷ ರೂಪಾಯಿ ಇದ್ದು, ಈ ಕೆಲಸಕ್ಕೆ ಸುಮಾರು 8 ಲಕ್ಷ ಮೇಟ್ರೋಲ್ ( ಸಾಮಗ್ರಿಗಳ) ವೆಚ್ಚ ಬಿಓಸಿ ಸೇವ್ ಮಾಡಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ಮಟ್ಟೂರು ಗ್ರಾಮ ಹಾಗೂ ವ್ಯಾಪ್ತಿಯಲ್ಲಿ ನಡೆದಿರುವ ಉದ್ಯೋಗ ಖಾತ್ರಿ ಕೆಲಸಕ್ಕೆ ಬರದೆ ಇರುವವರ ಖಾತೆಗೆ ಖಾತ್ರಿ ಹಣ ಜಮಾ ಮಾಡಿದ ಆರೋಪ ಕೂಡ ಇದೆ. ಇತ್ತೀಚೆಗೆ ಸರ್ಕಾರ ಗ್ರಾಮೀಣ ಭಾಗದ ಜನರು ಗುಳೆ ಹೋಗಬಾರದು ಎಂದು ಉದ್ಯೋಗ ಖಾತ್ರಿ ಪ್ರಾರಂಭ ಮಾಡಲಾಯಿತು. ಆದರೆ ಗ್ರಾಮ ಪಂಚಾಯಿತಿಯ ಅಧಿಕಾರಿಗಳ ಕಮಿಷನ್ ಸಲುವಾಗಿ ಖಾತ್ರಿ ಕೆಲಸಕ್ಕೆ ಹೋಗದೆ ಇರುವ ಜನರ ಖಾತೆ ಗೆ ಹಣ ಸಂದಾಯ ಮಾಡಿದ್ದಾರೆ. ಅಲ್ಲದೇ ಸರ್ಕಾರಿ ನೌಕರರಿಗೆ ಕೂಡ ಖಾತ್ರಿ ಹಣ ಹಾಕಲಾಗಿದೆ. ಈಗಾಗಲೇ ಕೆಲ ಸರ್ಕಾರಿ ನೌಕರರ ಹೆಸರಲ್ಲಿ ಜಾಬ್ ಕಾರ್ಡ್ ಇದ್ದು ಸುಮಾರು ವರ್ಷಗಳಿಂದ ಅವರ ಖಾತೆಗೆ ಉದ್ಯೋಗ ಖಾತ್ರಿ ಹಣ ಜಮಾ ಆಗುತ್ತಿರುವ ದಾಖಲೆ ಕೂಡ ಹೊರ ಬಂದಿದ್ದಾವೆ. ಈ ಭಾಗದಲ್ಲಿ ಸುಮಾರು 10 ರಿಂದ 20 ಜನ ಸರ್ಕಾರಿ ನೌಕರರಿಗೆ ಹಣ ಜಮಾ ಆಗಿದೆ. ಹಾಗೂ ಕೆಲಸಕ್ಕೆ ಬರದೆ ದೂರದ ಬೆಂಗಳೂರು, ಮಂಗಳೂರು, ಹೊಸಪೇಟೆಯಲ್ಲಿ ಕೆಲಸಕ್ಕೆ ಹೋದವರ ಖಾತೆಗೆ ಹಣ ಜಮಾ ಮಾಡಿರುವ ಆರೋಪ ಕೇಳಿ ಬರುತ್ತಿದೆ.
ಮಟ್ಟೂರು ಗ್ರಾಮ ಪಂಚಾಯತಿ ಹಾಗೂ ಆ ವ್ಯಾಪ್ತಿಯಲ್ಲಿ ಹೆಚ್ಚುವರಿ ಯೋಜನೆಯ ಅನುದಾನದಲ್ಲಿ ಅರೆ ಬರೆ ಕಳಪೆ ಮಟ್ಟದ ಮಣ್ಣು ಹಾಕಿ ಒಂದು ಮೆಟ್ಲಿಂಗ್ ರಸ್ತೆ 10 ಲಕ್ಷದಂತೆ ಇದ್ದು ಸಂಪೂರ್ಣ ಕಳಪೆ ಮಟ್ಟದಿಂದ ಕೂಡಿದ್ದಾವೆ. ಈ ಬಗ್ಗೆ ಮೇಲಾಧಿಕಾರಿಗಳ ಗಮನ ಹರಿಸುತ್ತಿಲ್ಲ. ಕೋಟಿಗಟ್ಟಲೆ ಹಣ ವ್ಯರ್ಥ
ವಾಗುತ್ತಿದೆ ಎಂದು ಸಾದೇವ ಬುದ್ದಿನ್ನಿ ನಿವಾಸಿ ಹೇಳುತ್ತಾನೆ.
ಮಟ್ಟೂರು ಗ್ರಾಮದಲ್ಲಿ ಕೋಟಿಗಟ್ಟಲೆ ಹಣ ದುರುಪಯೋಗ ಮಾಡಿಕೊಳ್ಳುತ್ತಿದ್ದು, ಅದರಲ್ಲಿ ಎಸ್ಸಿ ಎಸ್ಟಿ ಅನುದಾನ ದಲ್ಲಿ ಕೂಡ ವಾಲ್ಮೀಕಿ ಭವನ, ಅಂಬೇಡ್ಕರ್ ಭವನ ಆಯ ಜನಾಂಗದ ಜಾಗದಲ್ಲಿ ಮಾಡದೆ ಬೇರೆ ಬೇರೆ ಸ್ಥಳದಲ್ಲಿ ನಿರ್ಮಾಣ ಮಾಡಿ ಸರ್ಕಾರದ ಹಣವನ್ನು ಸಂಪೂರ್ಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕೂಡಲೇ ಸಚಿವರ ಗಮನಕ್ಕೆ ತರುತ್ತೇವೆ ಎಂದು ನವಕರ್ನಾಟಕ ಮಾನವ ಹಕ್ಕುಗಳು ಹಾಗೂ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಮಿತಿಯ ರಾಜ್ಯ ಅಧ್ಯಕ್ಷ ಸುರೇಶ್ ಪಾಟೀಲ್, ಕಾರ್ಯದರ್ಶಿ ಅಮರೇಶ ಹೇಳಿದ್ದಾರೆ.