ಸಂಘದ ಸದಸ್ಯರು ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಪಾವತಿಸಬೇಕು
ಮುದ್ದೇಬಿಹಾಳ – ಕುಂಟೋಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ 18.68 ಲಕ್ಷಗಳು ನಿವ್ವಳ ಲಾಭ.
ಮುದ್ದೇಬಿಹಾಳ – ಕುಂಟೋಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ 50 ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆ
ವರದಿ : ಬಸವರಾಜ ಕುಂಬಾರ, ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ಮುದ್ದೇಬಿಹಾಳ ( ಕುಂಟೋಜಿ) ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ ಬ್ಯಾಂಕು 1976 ರಲ್ಲಿ ಆರಂಭವಾದ ಸಂಘ 150 ಸದಸ್ಯರು ಹಾಗೂ 25000 ಸಾವಿರ ರೂ ಶೇರು ಬಂಡವಾಳ ಹೊಂದಿತ್ತು ಇಂದು 2295 ಸದಸ್ಯರನ್ನು ಹೊಂದಿ 97.79 ಲಕ್ಷ ಶೇರು ಸಂಗ್ರಹಿಸಿ 98.97 ಠೇವಣಿ ಮತ್ತು 87.48 ನಿಧಿಗಳನ್ನು ಕೂಡಿಸಿ ರೈತರ ಕೃಷಿ ಚಟುವಟಿಕೆಗೆ 789.08 ಲಕ್ಷ ರೂ ಸಾಲ ಒದಗಿಸಿ ಸಂಘ ಈ ವರ್ಷ 18 ಲಕ್ಷ 68 ಸಾವಿರ ನಿವ್ವಳ ಲಾಭ ಮಾಡಿದೆ ಎಂದು ಬ್ಯಾಂಕ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಿರೇಶ ಅಗ್ಗಿಮಠ ಹೇಳಿದರು.
ಮುದ್ದೇಬಿಹಾಳ – ಕುಂಟೋಜಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿಯಮಿತ 50 ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆ ಸೋಮುವಾರ ಜರುಗಿತು ಈ ಸಭೆಯಲ್ಲಿ ವಾರ್ಷಿಕ ವರದಿ ವಾಚಿಸಿ ಮಾತನಾಡಿ ಬ್ಯಾಂಕ ಶೇರುದಾರರು ಸಾಲವನ್ನು ತೆಗೆದುಕೊಂಡು ಸರಿಯಾದ ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡಿದರೆ ಸಹಕಾರಿ ಬ್ಯಾಂಕ್ ಬೆಳವಣಿಗೆ ಹೊಂದುತ್ತವೆ ಎಂದರು.
ವಿಡಿಸಿಸಿ ಬ್ಯಾಂಕ್ ನ ಕ್ಷೇತ್ರಾಧಿಕಾರಿ ಎಸ್ ಸಿ ಸಾಸನೂರ ಮಾತನಾಡಿ ಸಂಘದ ಸದಸ್ಯರು ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಪಾವತಿಸಬೇಕು ಮತ್ತು ಸದಸ್ಯರುಗಳು ರಾಷ್ಟ್ರೀಯಕೃತ ಬ್ಯಾಂಕ್ ಗಳಲ್ಲಿ ಠೇವಣಿ ಇಡದೆ ಸಂಘದಲ್ಲಿ ಠೇವಣಿ ತೊಡಗಿಸಬೇಕು ಅದಕ್ಕೆ ಆಕರ್ಷಕ ಬಡ್ಡಿ ದರವಿದೆ ಎಂದರು.
ಪ್ರಾಸಂಗಿಕವಾಗಿ ನಿರ್ದೇಶಕ ಮಲ್ಲನಗೌಡ ಬಿರಾದಾರ ಮಾತನಾಡಿದರು ಸಭೆಯಲ್ಲಿ ತೊಗರಿಕೇಂದ್ರ ಆರಂಭಿಸುವ ಹಾಗೂ ಸಂಘದ ಸದಸ್ಯರಿಗೆ ಡಿವಿಡೆಂಡ್ ನೀಡಬೇಕೆಂದು ಸದಸ್ಯರು ಒತ್ತಾಯಿಸಿದರು.
ಇದೇ ವೇಳೆ ಎಸ್ ಎಂ ಪಾಟೀಲ,ಗುರಲಿಂಗಪ್ಪ ಸುಲ್ಲೂಳ್ಳಿ,ನಾಗಲಿಂಗಯ್ಯ ಮಠ,ಎಂ ಎಂ ನಾಟಿಕಾರ, ಬ್ಯಾಂಕ್ ನ ವತಿಯಿಂದ ಗೌರವ ಸನ್ಮಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಧ್ಯಕ್ಷ ಶಿವಾನಂದ ಹುಲಗಣ್ಣಿ, ಉಪಾಧ್ಯಕ್ಷ ಈರಪ್ಪ ಬಿರಾದಾರ ನಿರ್ದೇಶಕರಾದ ಶ್ರೀಮತಿ ನಂದಾ ಬಾಗೇವಾಡಿ, ಗಂಗಾಬಾಯಿ ಬಿರಾದಾರ, ಚರಮೂರ್ತಿ ಅಬ್ಯಾಳಮಠ, ಪರಶುರಾಮ ಮಡಿವಾಳರ, ಅಪ್ಪಾಜಯ್ಯಾ ಕೂಡೆಕಲ್ ಮಠ ಎಲ್ಲಾ ನಿರ್ದೇಶಕರು ಹಾಗೂ ಗಣ್ಯರಾದ ಎಸ್ ಎಂ ಪಾಟೀಲ್, ಹೆಚ್ ಟಿ ಬಿರಾದಾರ ಶಿವಲಿಂಗಪ್ಪ ಗಸ್ತಿಗಾರ, ಸಂಗಣ್ಣ ಪಲ್ಲೆದ , ನಾಗಲಿಂಗಯ್ಯ ಮಠ, ಗುರಲಿಂಗಪ್ಪ ಸುಲ್ಲೂಳ್ಳಿ, ಎಂ ಎಂ ನಾಟಿಕಾರ ಅಕೌಂಟೆಂಟ್ ಭಾರತಿ ನಾಟಿಕಾರ, ಬ್ಯಾಂಕಿನ ಸದಸ್ಯರು ಶೇರುದಾರರು.
ಸೇರಿದಂತೆ ಗಣ್ಯಮಾನ್ಯರು ಭಾಗವಹಿಸಿದ್ದರು.
ಬಿ ಐ ಬಡಿಗೇರ ನ್ಯಾಯವಾದಿ ನಿರೂಪಿಸಿ ವಂದಿಸಿದರು