ವಿಜಯಪುರ : ಹಿಜಾಬ್, ಶಿವಮೊಗ್ಗ ಹತ್ಯೆ ಮರೆಮಾಚಲು ಕಾಂಗ್ರೆಸ್ ನವರು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಮೇಕೆದಾಟು ಪಾದಯಾತ್ರೆ ಚುನಾವಣೆ ಸ್ಟಂಟ್ ಆಗಿದೆ. ಕಾಂಗ್ರೆಸ್‌ಗೆ ಉದ್ಯೋಗ ಇಲ್ಲ. ಅದಕ್ಕಾಗಿ ಚುನಾವಣೆ ಸಲುವಾಗಿ ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ ಎಂದರು. ಹಿಂದಿನ ಸರ್ಕಾರದಲ್ಲಿ ಡಿಕೆಶಿ, ಎಂಬಿಪಿ ನೀರಾವರಿ ಸಚಿವರಿದ್ರೂ ಮೇಕೆದಾಟು ಯೋಜನೆ ಜಾರಿಗೆ ಮಾಡಿಲ್ಲ ಎಂದು ಟಾಂಗ್ ನೀಡಿದರು. ಗೃಹ ಸಚಿವ ಅರಗ ಜ್ಞಾನೇಂದ್ರ ಗಟ್ಟಿಯಾಗಬೇಕು. ಇನ್ನು ಹರ್ಷನ ಹತ್ಯೆಯ ಆರೋಪಿಗಳನ್ನು ಬಂಧನ ಮಾಡಿದ್ರೇ ಆಗುವುದಿಲ್ಲ. ಶೀಘ್ರದಲ್ಲೇ ನ್ಯಾಯ ಎನ್ನುವುದು ಬೇಡ. ಆರೋಪಿಗಳಿಗೆ ಸರಿಯಾದ ಬುದ್ಧಿ ಕಲಿಸಬೇಕು ಎಂದರು. ಅಲ್ಲದೇ, ಆರೋಪಿಗಳನ್ನು ಎನ್ಕೌಂಟರ್ ಮಾಡುವ ವಿಚಾರಕ್ಕೆ ಉತ್ತರಿಸಿದ ಶಾಸಕ ಯತ್ನಾಳ, ಕರ್ನಾಟಕ ಪೊಲೀಸರು ಸಮರ್ಥರು ಇದ್ದಾರೆ. ಎಲ್ಲಿ ಏನ ಮಾಡಬೇಕು ಎನ್ನುವುದ ಗೊತ್ತಿದೆ. ಸಂದರ್ಭ ಹೇಗೆ ಬರುತ್ತದೆ ಗೊತ್ತಿಲ್ಲ ಎಂದರು.