ಜ- 22,23 ಮೆಗಾ ಮಾರುಕಟ್ಟೆಯ ಮಳಿಗೆಗಳ ಹರಾಜಿಗೆ ಗ್ರೀನ್ ಸಿಗ್ನಲ್..!
ಇಂಡಿ: ಇಂಡಿ ಪಟ್ಟಣದ ಮಧ್ಯ ಭಾಗದಲ್ಲಿ ಪಾಳುಬಿದ್ದಿದ್ದ
ಜಾಗವನ್ನು ಗುರುತಿಸಿ, ಅದನ್ನು ಸದುಪಯೋಗ
ಮಾಡಿಕೊಂಡು 30 ಕೋಟಿ ರೂ, ಗಳ ವೆಚ್ಚದಲ್ಲಿ 246
ವ್ಯಾಪಾರಿ ಮಳಿಗೆಗಳುಳ್ಳ ಮೆಗಾ ಮಾರುಕಟ್ಟೆ
ನಿರ್ಮಿಸಿದ್ದು, ಅವುಗಳಲ್ಲಿ ಈಗಾಗಲೇ 100 ಮಳಿಗೆಗಳು
ವ್ಯಾಪಾರಕ್ಕೆ ಸಿದ್ದವಾಗಿವೆ. ಅವುಗಳನ್ನು ಬಹಿರಂಗ ಹರಾಜು ಮಾಡಿ ಪುರಸಭೆಗೆ ಆದಾಯ ಮಾಡಿಕೊಡಬೇಕೆಂದು ಹರಾಜು ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಅದಕ್ಕೆ ಪುರಸಭೆಯ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಶಾಸಕ ಯಶವಂತರಾಯಗೌಡ ಪಾಟೀಲ ಮನವಿ ಮಾಡಿಕೊಂಡರು.
ಅವರು ಗುರುವಾರ ಮೆಗಾ ಮಾರುಕಟ್ಟೆಯ ಆವರಣದಲ್ಲಿ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮೆಗಾ ಮಾರುಕಟ್ಟೆಗೆ ಶಾಸಕರ ಅನುದಾನದಲ್ಲಿ 8 ಕೋಟಿ ನೀಡಲಾಗಿದೆ. ಇನ್ನುಳಿದ ಹಣವನ್ನು ಸರ್ಕಾರದ ವಿವಿಧ ಸಂಸ್ಥೆಗಳಿಂದ ಸಾಲ ಪಡೆದುಕೊಳ್ಳಲಾಗಿದೆ. ಆ ಸಾಲವನ್ನು ಪುರಸಭೆ ಸಕಾಲದಲ್ಲಿ ತೀರಿಸುವ ಉದ್ದೇಶದಿಂದ ಸರ್ಕಾರಿ ನಿಯಮಾನುಸಾರ ಸಿದ್ದಗೊಂಡಿರುವ ಮೆಗಾ
ಮಾರುಕಟ್ಟೆಯ ಮಳಿಗೆಗಳನ್ನು ಹರಾಜ ಮಾಡಲಾಗುತ್ತಿದೆ. ಇದರಲ್ಲಿ ಯಾರದೇ ದುರುದ್ದೇಶವಿಲ್ಲ ಎಂದರು.
ಈ ಸಂದರ್ಭದಲ್ಲಿ ಪುರಸಭೆಯ ಸದಸ್ಯರಾದ ಅನೀಲಗೌಡ ಬಿರಾದಾರ ಮಾತನಾಡಿ, ಮುಂಬರುವ ದಿನಾಂಕ 22 ಮತ್ತು 23 ರಂದು ನಡೆಯುವ ಮೆಗಾ ಮಾರುಕಟ್ಟೆಯ ಮಳಿಗೆಗಳ ಹರಾಜಿಗೆ ಗ್ರೀನ್ ಸಿಗ್ನಲ್ ನೀಡಿದರು. ಪುರಸಭೆಯ ಮಾಜಿ ಅಧ್ಯಕ್ಷ ದೇವೇಂದ್ರ ಕುಂಬಾರ, ದಲಿತ ಸಮುದಾಯದ ಮುಖಂಡ ಪ್ರಶಾಂತ ಕಾಳೆ, ರಾಜಕೀಯ ಮುಖಂಡರಾದ ಜಗದೀಶ ಕ್ಷತ್ರಿ, ಜಟ್ಟೆಪ್ಪ ರವಳಿ, ಹುಚ್ಚಪ್ಪ ತಳವಾರ ಸೇರಿದಂತೆ ಇನ್ನಿತರ ಪುರಸಭೆಯ ಸದಸ್ಯರು ಮಾತನಾಡಿದರು.
ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಮಾತನಾಡಿ, ಜನೇವರಿ 22 ಮತ್ತು 23 ರಂದು ಜಿಲ್ಲಾಧಿಕಾರಿಗಳಮಾರ್ಗಸೂಚಿಯಂತೆ ಮೆಗಾ ಮಾರುಕಟ್ಟೆಯ 100 ಮಳಿಗೆಗಳನ್ನು ಬಹಿರಂಗ ಹರಾಜು ಮಾಡಲಾಗುತ್ತಿದೆ. ಪುರಸಭೆಯ ಸದಸ್ಯರು, ಸಾರ್ವಜನಿಕರು ಸಹಕಾರ ನೀಡಬೇಕೆಂದು ಮನವಿ ಮಾಡಿದರು. ತಹಶೀಲ್ದಾರ ಬಿ.ಎಸ್.ಕಡಕಬಾವಿ, ಪುರಸಭೆಯ ಸದಸ್ಯರು ಉಪಸ್ಥಿತರಿದ್ದರು.
ಇಂಡಿ: ಪಟ್ಟಣದಲ್ಲಿ ನಿರ್ಮಿಸಿರುವ ಮೆಗಾ ಮಾರುಕಟ್ಟೆಯ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಯಶವಂತರಾಯಗೌಡ ಪಾಟೀಲ ಮಾತನಾಡಿದರು.