ನಿಂಬೆಹುಳಿಯಾದ ಮೇಘಾ ಮಾರುಕಟ್ಟೆ ಆರಂಭ..? ಯಾಕೆ ಗೊತ್ತಾ..?
ಇಂಡಿ : ಮೇಗಾ ಮಾರುಕಟ್ಟೆ ಪ್ರಾರಂಭಿಸುವ ಸಂದರ್ಭದಲ್ಲಿ ಯಾವೊಬ್ಬ ಪುರಸಭೆ ಸದಸ್ಯರನ್ನ ವಿಸ್ವಾಸ ತೆಗೆದುಕೊಳ್ಳದೆ, ಏಕಾಏಕಿಯಾಗಿ ನಿರ್ಧಾರ ತೆಗೆದುಕೊಂಡಿದ್ದು ಎಷ್ಟು ಸರಿ..? ಇನ್ನೂ ಹರಾಜು ಪ್ರಕ್ರಿಯೆಯಲ್ಲಿ ಯಾವೊಬ್ಬ ಸದಸ್ಯರ ವಿಸ್ವಾಸ ತೆಗೆದುಕೊಂಡಿಲ್ಲ. ನಿಮ್ಮ ಜೊತೆ ಆಡಳಿತದಲ್ಲಿ ಪಾಲ್ಗೊಳವ ಸದಸ್ಯರನ್ನ ಕೈ ಬಿಟ್ಟಿದ್ದು ಯಾವ ಉದ್ದೇಶ, ಯಾವ ದುರದ್ದೇಶವೆಂದು ಅರ್ಥವಾಗುತ್ತಿಲ್ಲ. ಎಸಿ ಎಸ್ಟಿ ಸಮುದಾಯ ಹಾಗೂ ಅಂಗವಿಕಲರಿಗೆ, ಮಾಜಿ ಸೈನಕರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಆಕ್ರೋಶ ವ್ಯಕ್ತಪಡಿಸಿದರು.
ಗುರುವಾರ ಪಟ್ಟಣದ ಪುರಸಭೆಯ ದ್ವಾರ ಬಾಗಿಲು ಎದುರು ಅಂಗಡಿಕಾರರು ಹಾಗೂ ವಿವಿಧ ಸಂಘ ಸಂಸ್ಥೆಗಳು ಮುಖಂಡರು ಹಾಗೂ ಪುರಸಭೆ ಸದಸ್ಯರು, ಪ್ರತಿಭಟನೆ ಮಾತಾನಾಡಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ಬುದ್ದುಗೌಡ ಪಾಟೀಲ ಮಾತಾನಾಡಿದ ಅವರು, ಈ ಹಿಂದೆ ರಸ್ತೆ ಅಗಲೀಕರಣ ಸಂದರ್ಭದಲ್ಲಿ ಅಂಗಡಿ ಕಳೆದುಕೊಂಡ ಅಂಗಡಿಕಾರರಿಗೆ ಮೇಗಾ ಮಾರುಕಟ್ಟೆಯಲ್ಲಿ ಅನುಕೂಲ ಕಲ್ಪಿಸಲಾಗುವುದು ಎಂದು ಶಾಸಕರು ಹಾಗೂ ಪುರಸಭೆ ಸದಸ್ಯರು ಭರವಸೆ ನೀಡಿದ್ದಾರೆ. ಆದರೆ ಇಂದು ಏಕಾಏಕಿಯಾಗಿ ಮೇಗಾ ಮಾರುಕಟ್ಟೆ ಮೊದಲ ಮಹಡಿಯ ಅಂಗಡಿಗಳು ಹರಾಜು ಪ್ರಕ್ರಿಯೇಗೆ ಪುರಸಭೆ ಮುಂದಾಗಿದ್ದು, ಅಂಗಡಿಗಳ ಠೇವಣಿ ಹಾಗೂ ಬೇಡಿಕೆ ಹೆಚ್ಚಾಗಿರುವುದರಿಂದ ಬಡ, ಮಧ್ಯಮ ವ್ಯಾಪಾರಸ್ಥರಿಗೆ ಮಳಿಗೆ ಬಾಡಿಗೆ ತೆಗೆದುಕೊಳ್ಳಲು ಅಸಾಧ್ಯವಾದ ಮಾತಾಗಿದೆ ಎಂದು ಹೇಳಿದರು. ಹಾಗಾಗಿ ಸೆ- 18 ರಂದು ನಡೆಯುವ ಹರಾಜು ಪ್ರಕ್ರಿಯೇ ಕೂಡಲೇ ಕೈ ಬಿಟ್ಟು, ಪುರಸಭೆ ಸದಸ್ಯರನ್ನ, ವ್ಯಾಪಾರಸ್ಥರನ್ನ ಹಾಗೂ ಸಾರ್ವಜನಿಕರನ್ನ ವಿಸ್ವಾಸ ತೆಗೆದುಕೊಂಡು ನಿರ್ಧಾರ ತೆಗೆದುಕೊಳ್ಳುಬೇಕು ಎಂದು ಪಟ್ಟು ಹಿಡಿದು ಧರಣಿ ಸತ್ಯಾಗ್ರಹ ನಡೆಸಿದರು. ಅದಲ್ಲದೇ ಪಟ್ಟಣದ ರಸ್ತೆ ಅಗಲೀಕರಣದಲ್ಲಿ ಅಂಗಡಿ ಕಳೆದು – ಕೊಂಡುವರಿಗೆ ಮೊದಲು ಪ್ರಾಶಸ್ತ್ಯ ನೀಡಬೇಕು. ಅಂಗವಿಕಲರಿಗೆ ರೀಯಾಯತಿ ದರದಲ್ಲಿ ಹಾಗೂ ಎಸಿ ಎಸ್ಟಿ ಸಮುದಾಯಕ್ಕೆ ಮೀಸಲಿರಿಸಿದ ಅಂಗಡಿಗಳಿಗೆ ಬಾಡಿಗೆ ಅತೀ ಕಡಿಮೆ ಹಾಗೂ ಠೇವಣಿ ಹಿತವಾಗಿರಬೇಕು. ಇನ್ನೂ ಪುರಸಭೆ ಮುಂಭಾಗದಲ್ಲಿ 15 ಮತ್ತು 16 ನೇ ಸಾಲಿನಲ್ಲಿ ತೆರವುಗೊಳಿಸಿದ 32 ಅಂಗಡಿಕಾರರ ಠೇವಣಿ ಸಹ ಪುರಸಭೆಯಲ್ಲಿಯೇ ಉಳಿದಿದ್ದು ಅವರಿಗೂ ಸಹ ಇಂದು ಮಳಿಗೆಗಳು ಒದಗಿಸಬೇಕು. ಒಟ್ಟಾರೆಯಾಗಿ ಪಟ್ಟಣ ಅಭಿವೃದ್ಧಿ ಜೊತೆಗೆ ಬೆಳೆವಣಿಗೆ ಹೊಂದಿದೆ. ಆದರೆ ಪಟ್ಟಣಕ್ಕೆ ಸಂಪರ್ಕಿಸುವ ಹೆದ್ದಾರಿಗಳು ಇಲ್ಲದೆ ಇರುವುದರಿಂದ, ವ್ಯಾಪಾರ ವಹಿವಾಟು ಕಡಿಮೆ ಇರುವುದರಿಂದ ಸದ್ಯ ಅಂಗಡಿಗಳಿಗೆ ವಿಧಿಸಿದ ಠೇವಣಿ ಹಾಗೂ ಬಾಡಿಗೆ ಅತೀ ಕಡಿಮೆ ಮಾಡಬೇಕು ಎಂದು ಪ್ರತಿಭಟನೆ ಮಾಡಿದರು.
ಇನ್ನೂ ಸ್ಥಳಕ್ಕೆ ಆಗಿಮಿಸಿದ ಕಂದಾಯ ಉಪವಿಭಾಗ ಅಧಿಕಾರಿ ಹಾಗೂ ಪುರಸಭೆಯ ಆಡಳಿತ ಅಧಿಕಾರಿಯಾಗಿರುವ ಆಬೀದ್ ಗದ್ಯಾಳ ಮತ್ತು ಪುರಸಭೆ ಮುಖ್ಯ ಅಧಿಕಾರಿ ಮಾತಾನಾಡಿದ ಅವರು, ಈ ನಿಮ್ಮ ಎಲ್ಲಾ ಬೇಡಿಕೆ ಸಕಾರಾತ್ಮಕ ಸ್ಪಂದಿಸುವ ಕಾರ್ಯ ಮಾಡುತ್ತೆವೆ. ಹರಾಜು ಪ್ರಕ್ರಿಯೆ ಮುಂದೂಡಿ ಮಂಗಳವಾರ ಶಾಸಕರ ಮತ್ತು ಮೇಲಾಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕ ಸಭೆ ನಡೆಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಸೈಪನ ಪವಾರ, ಶ್ರೀಧರದ ಕ್ಷೇತ್ರಿ, ಸಂಜು ದಶವಂತ, ರಾಚು ಬಡಿಗೇರ, ಅಪ್ಪು ಪವಾರ, ವಿದ್ಯಾಸಾಗರ ಧನಶೆಟ್ಟಿ, ಅಶೋಕ ಅಕಲಾದಿ, ಪ್ರಶಾಂತ ಗೌಳಿ, ಸುನೀಲಗೌಡ ಬಿರಾದಾರ, ಮಲ್ಲಿಕಾರ್ಜುನ ವಾಲಿಕಾರ, ದತ್ತಾ ಬಂಡೆನವರ, ಪ್ರವೀಣ ಮಠ, ನಾಗೇಶ ದಶವಂತ, ಚಂದ್ರಶೇಖರ ಹೊಸಮನಿ, ಶಿವಾನಂದ ದಶವಂತ, ಸಂತೋಷ ಗವಳಿ, ಎಸ್ ಅರ್ ನಾಯಕೊಡಿ, ಎಸ್ ಎಮ್ ಮಕನಾದಾರ ಉಪಸ್ಥಿತರಿದ್ದರು.