ಭೀಮೆಯ ಶಾಸಕ ಪಾಟೀಲ ನೇತೃತ್ವದಲ್ಲಿ ಕಾಮಗಾರಿಗಳ ಸಭೆ..
ಇಂಡಿ : ಜಲಸಂಪನ್ಮೂಲ ಇಲಾಖೆಯಲ್ಲಿನ ನಾಲ್ಕು ನಿಗಮಗಳಲ್ಲಿನ ಅನುಷ್ಠಾನಗೊಳಿಸಿರುವ ಹಾಗೂ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳ ಮತ್ತು ಕಾಮಗಾರಿಗಳ ಅಂದಾಜು ಕುರಿತು ವಿಧಾನಸ ಸಭೆ ಅಂದಾಜು ಸಮಿತಿ ಅಧ್ಯಕ್ಷ ಯಶವಂತರಾಯಗೌಡ ಪಾಟೀಲ ನೇತೃತ್ವದಲ್ಲಿ ಜರುಗಿತು.
ಸಪ್ಟಂಬರ್ -8 ರಂದು ಬೆಂಗಳೂರಿನ ಶಾಸಕರ ಭವನ ಕಟ್ಟಡ ಎರಡನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ವಿಧಾನ ಸಭೆಯ ಅಂದಾಜು ಸಮಿತಿ ಅಧ್ಯಕ್ಷರು ಹಾಗೂ ಇಂಡಿ ಮತಕ್ಷೇತ್ರದ ಶಾಸಕ ಯಶವಂತರಾಯಗೌಡ ಪಾಟೀಲರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಈ ಸಂದರ್ಭದಲ್ಲಿ ವಿಧಾನ ಸಭಾ ಸದಸ್ಯರು ಮತ್ತು ಸಮಿತಿ ಸದಸ್ಯರು ಹಾಗೂ ಇಲಾಖಾ ಅಧಿಕಾರಿಗಳು ಪಾಲ್ಗೊಂಡಿದ್ದರು.