ಕಂದಕ ಹೂಳು ತೆಗೆಯುವುದು-ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಚಾಲನೆ
ವಿಜಯಪುರ ಜುಲೈ 26: ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಇಂದು ಶನಿವಾರ ನಗರದ ಜಾಮೀಯಾ ಮಸೀದಿ ರಸ್ತೆಯ ರೊಡಗಿಮಡ್ಡಿ ಖಬರಸ್ಥಾನ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200ಲಕ್ಷ ವೆಚ್ಚದಲ್ಲಿ ಕೋಟೆಗೋಡೆ ಕಂದಕ, ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲೋನಿವರೆಗೆ ಹಾಗೂ ರೂ.100 ಲಕ್ಷ ವೆಚ್ಚದಲ್ಲಿ ರೊಡಗಿಮಡ್ಡಿ ಖಬರಸ್ಥಾನದಿಂದ ಸಿಂದಗಿ ರಸ್ತೆಯ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿನ ಹೂಳು ತೆಗೆಯುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಗಳಿಗೆ ಹಾಗೂ ಇಂಡಿ ರಸ್ತೆ ಶಹಾಪೇಟ ಓಣಿ ಯಲ್ಲಮ್ಮ ದೇವಸ್ಥಾನದ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200 ಲಕ್ಷ ವೆಚ್ಚದಲ್ಲಿ ಶಹಾಪೇಟೆ, ಸುಣಗಾರ ಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥೇಟರ್ ವರೆಗೆ ಮಳೆ ನೀರು ಚರಂಡಿ ಕಾಮಗಾರಿ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿಗೆ ಚಾಲನೆ ನೀಡಿದರು.
ಈ ಹಿಂದೆ ಸೆಪ್ಟಂಬರ್ 2024 ರಂದು ವಿಜಯಪುರ ನಗರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಶಹಾಪೇಟೆ, ಸುಣಗಾರ ಗಲ್ಲಿ ಹಾಗೂ ಅಪ್ಸರಾ ಥೇಟರ್ ಹತ್ತಿರದ ಪ್ರದೇಶಗಳು ಜಲಾವೃತಗೊಂಡಿದ್ದು, ಈ ರೀತಿಯ ಮರುಕಳಿಸದಂತೆ, ಈ ಪ್ರದೇಶಗಳು ಜಲಾವೃತಗೊಳ್ಳದಂತೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಇಂಡಿ ರಸ್ತೆ ಶಹಾಪೇಟ ಓಣಿ ಯಲ್ಲಮ್ಮ ದೇವಸ್ಥಾನದ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200 ಲಕ್ಷ ವೆಚ್ಚದಲ್ಲಿ ಶಹಾಪೇಟೆ, ಸುಣಗಾರ ಗಲ್ಲಿಯಿಂದ ಸ್ಟೇಷನ್ ಹಿಂದಿನ ರಸ್ತೆ ಮೂಲಕ ಅಪ್ಸರಾ ಥೇಟರ್ ವರೆಗೆ ಮಳೆ ನೀರು ಚರಂಡಿ ಕಾಮಗಾರಿ ಮತ್ತು ಪ್ರವಾಹ ನಿಯಂತ್ರಣ ಕಾಮಗಾರಿ ಕೈಗೊಳ್ಳಲಾಗಿದೆ. ಅದರಂತೆ ವಿಜಯಪುರ ನಗರದ ಕನಕದಾಸ ಬಡಾವಣೆ, ಪುಲಕೇಶಿ ನಗರ, ಜಲನಗರ ಇತ್ಯಾದಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆ ನೀರು ಸಂಗ್ರಹಗೊಂಡು ನೀರು ಮನಗೂಳಿ ಅಗಸಿ ಹತ್ತಿರದ ಕಂದಕದ ಮೂಲಕ ಹಾದು ಬಡಿಬಾವಡಿ ಮಾರ್ಗವಾಗಿ ರೂಡಗಿ ಮಡ್ಡಿ, ಬಾಗಾಯತ ಗಲ್ಲಿ, ಜಾಮೀಯಾ ಮಸೀದಿ ಸುತ್ತಮುತ್ತಲಿನ ಪ್ರದೇಶಗಳು, ಎಲ್‍ಐಸಿ ಕಚೇರಿ ಮುಂಭಾಗದ ಪ್ರದೇಶಗಳು ಜಲಾವೃತವಾಗದಂತೆ ಶಾಶ್ವತವಾಗಿ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ನಗರದ ಜಾಮೀಯಾ ಮಸೀದಿ ರಸ್ತೆಯ ರೊಡಗಿಮಡ್ಡಿ ಖಬರಸ್ಥಾನ ಹತ್ತಿರ ರಾಜ್ಯ ವಿಪತ್ತು ಉಪಶಮನ ನಿಧಿ ರೂ.200ಲಕ್ಷ ವೆಚ್ಚದಲ್ಲಿ ಕೋಟೆಗೋಡೆ ಕಂದಕ, ಮನಗೂಳಿ ಅಗಸಿಯಿಂದ ಕಸ್ತೂರಿ ಕಾಲೋನಿವರೆಗೆ ಹಾಗೂ ರೂ.100 ಲಕ್ಷ ವೆಚ್ಚದಲ್ಲಿ ರೊಡಗಿಮಡ್ಡಿ ಖಬರಸ್ಥಾನದಿಂದ ಸಿಂದಗಿ ರಸ್ತೆಯ ರೈಲ್ವೆ ಸೇತುವೆವರೆಗಿನ ಕಂದಕದಲ್ಲಿನ ಹೂಳು ತೆಗೆಯುವುದು ಹಾಗೂ ಪ್ರವಾಹ ನಿಯಂತ್ರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.
ಈ ಸಂದರ್ಭದಲ್ಲಿ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ನಾಗಠಾಣ ಶಾಸಕ ವಿಠ್ಠಲ ಕಟಕದೊಂಡ, ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕನ್ನಾನ್ ಅಬ್ದುಲಹಮೀದ ಮುಶ್ರೀಫ್, ಮಹಾನರ ಪಾಲಿಕೆ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ಪಾಲಿಕೆ ಅಭಿಯಂತರ ಇ.ಇ.ತಿಮ್ಮಪ್ಪ ಸೇರಿದಂತೆ ವಿವಿಧ ಜನಪ್ರತಿನಿಧಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.