ಪ್ರಖ್ಯಾತ ಲಿಂಬೆನಾಡು ಜಿಲ್ಲಾ ಕೇಂದ್ರಕ್ಕೆ ಆಗ್ರಹಿಸಿ ಮನವಿ : ಅಧ್ಯಕ್ಷ ಸೋಮನಾಥ ಹೂಗಾರ
ಇಂಡಿ : ಪ್ರಖ್ಯಾತ ಲಿಂಬೆನಾಡು ಇಂಡಿಯನ್ನು ಹೊಸ ಜಿಲ್ಲಾ ಕೇಂದ್ರವಾಗಿ ಉದಯವಾಗಲಿ ಎಂದು ತಾಲೂಕು ಹೂಗಾರ ಸಮಾಜ ಸೇವಾ ಸಂಸ್ಥೆ ಅಧ್ಯಕ್ಷ ಸೋಮನಾಥ ಹೂಗಾರ ಹಾಗೂ ಪದಾಧಿಕಾರಿಗಳು ಪ್ರತಿಭಟಸಿ ಕಂದಾಯ ಉಪವಿಭಾಗ ಅಧಿಕಾರಿ ಅಬೀದ್ ಗದ್ಯಾಳ ಅವರ ಮೂಲಕ ರಾಜ್ಯದ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಶನಿವಾರ ಪಟ್ಟಣದ ಆಡಳಿತ ಸೌಧಕ್ಕೆ ತೆರಳಿ ಪ್ರತಿಭಟಸಿ ಮಾತಾನಾಡಿದ ಸೋಮನಾಥ ಹೂಗಾರ ಅವರು, ನಂಜುಡಪ್ಪ ವರದಿಯಂತೆ ಇಂಡಿ ತಾಲೂಕು ಅತ್ಯಂತ ಹಿಂದುಳಿದಿದ್ದು, ಈ ಭಾಗದ ಜನರ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರವಾಗಿ ಉದಯವಾಗಬೇಕು. ಮಹಾ ಗಡಿಭಾಗಲ್ಲಿರುವ ಇಂಡಿ ತಾಲೂಕು “ಭೀಮಾ ರತಿ” ಸುಂದರವಾದ ನಾಡು ಜಿಲ್ಲಾ ಕೇಂದ್ರವಾಗಲು ಎಲ್ಲಾ ಅರ್ಹತೆ ಹೊಂದಿದೆ. ಅತೀ ಹಿಂದುಳಿದ ತಾಲೂಕು ಸಿಂದಗಿ, ದೇವರ ಹಿಪ್ಪರಗಿ, ಆಲಮೇಲ, ಚಡಚಣ ಹಾಗೂ ಇಂಡಿ ತಾಲೂಕುಗಳು ಸೇರಿ ಅಭಿವೃದ್ಧಿಯಾಗಬೇಕಾದರೆ ಇಂಡಿ ಜಿಲ್ಲೆಯಾದಾಗ ಮಾತ್ರ ಸಾಧ್ಯ. ಕೂಡಲೇ ತಾವುಗಳು ಈ ಒಂದು ಐತಿಹಾಸಿಕ ನಿರ್ಧಾರ ಕೈಕೊಳ್ಳುತ್ತಿರೆಂದು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಪುಂಡಲೀಕ ಹೂಗಾರ, ಗಂಗಾಧರ್ ಪೂಜಾರಿ, ಸಂತೋಷ್ ಪೂಜಾರಿ, ಗುರುಬಾಳ್ ಹೂಗಾರ, ಸಿದ್ದು ಪೂಜಾರಿ, ಮಹೇಶ್ ಹೂಗಾರ್, ಶಾಂತಪ್ಪ ಪೂಜಾರಿ ಹಾಗೂ ಇನ್ನೂ ಯುವಕರು ಮುಖಂಡರು ಉಪಸ್ಥಿತರಿದ್ದರು.